ಕಾಲಿವುಡ್ ಗಲ್ಲಿಯಿಂದ ಕುತೂಹಲದ ಸುದ್ದಿಯೊಂದು ತೂರಿಬಂದಿತ್ತು. ರಜನಿಕಾಂತ್ ಮುಂದಿನ `ಕೂಲಿ’ (Coolie) ಸಿನಿಮಾದಲ್ಲಿ ಕನ್ನಡದ ಸೂಪರ್‌ಸ್ಟಾರ್ ಉಪೇಂದ್ರ ನಟಿಸುತ್ತಾರೆ ಎನ್ನುವುದೇ ಆ ಸುದ್ದಿಯ ಆಳವಾಗಿತ್ತು. ಇದೀಗ ಈ ವಿಚಾರವನ್ನ ಕನ್ಫರ್ಮ್ ಮಾಡಿದ್ದಾರೆ ಉಪೇಂದ್ರ. ಇದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡುವುದು ಸಹಜ, ರಜನಿಕಾಂತ್ (Rajinikanth) ಜೊತೆ ನಟಿಸುವ ಅವಕಾಶವನ್ನ ಉಪೇಂದ್ರ ಮಿಸ್ ಮಾಡಿಕೊಳ್ಳದಿರಲು ಸಿದ್ಧವಿಲ್ವಂತೆ. ಕಾರಣ ಇದೇ ಅಕ್ಟೋಬರ್‌ನಲ್ಲಿ ಶುರುವಾಗುವ `ಕೂಲಿ’ ಎರಡನೇ ಶೆಡ್ಯೂಲ್ ಚಿತ್ರೀಕರಣದಲ್ಲಿ ಉಪೇಂದ್ರ (Upendra) ಎಂಟ್ರಿಯಾಗಲಿದ್ದಾರೆ.
ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಅವರು ರಜನಿಕಾಂತ್‌ಗೆ ನಿರ್ದೇಶಿಸುತ್ತಿರುವ ದೊಡ್ಡ ಪ್ರಾಜೆಕ್ಟ್ ಕೂಲಿ. ಲೋಕೇಶ್ ಸಿನಿಮಾ ಅಂದ್ರೆ ಇಡೀ ಭಾರತದಾದ್ಯಂತ ಕ್ರೇಜ಼್ ಹೆಚ್ಚು. ಇಂತಹ ಕ್ರೇಜೀ಼ ನಿರ್ದೇಶಕನ ಜೊತೆ ಕ್ರೇಜ಼್ ಕಾ ಬಾಪ್ ರಜನಿಕಾಂತ್ ಕೈ ಜೋಡಿಸಿಬಿಟ್ಟರೆ ಅದೆಂತಹ ರೋಚಕ ಪ್ರಾಜೆಕ್ಟ್ ಆಗಿರಬೇಡ. ಅದುವೇ ಈ `ಕೂಲಿ’ ಸಿನಿಮಾ. ಈ ಬಿಗ್ ಪ್ರಾಜೆಕ್ಟ್ನಲ್ಲಿ ಉಪೇಂದ್ರ ಬಹುಮುಖ್ಯ ಪಾತ್ರ ಮಾಡಲಿದ್ದಾರೆ.
ಕಾಂಬಿನೇಶನ್ ಮೂಲಕವೇ ಭಾರೀ ನಿರೀಕ್ಷೆ ಹುಟ್ಟಿಸಿರುವ `ಕೂಲಿ’. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಉಪೇಂದ್ರ ಅತಿಥಿ ಪಾತ್ರವಲ್ಲ ಬದಲಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಕಾಲಿವುಡ್ ಮೂಲೆಯಿಂದ ಉಪ್ಪಿ ನಟಿಸುತ್ತಿರುವ ಸುದ್ದಿಯೇನೋ ಬಂದಿತ್ತು. ಆದರೆ ಇದುವರೆಗೂ ಈ ವಿಚಾರವನ್ನ ಉಪೇಂದ್ರ ಒಪ್ಪಿಕೊಂಡಿರಲಿಲ್ಲ. ಇದೀಗ ಖಾಸಗಿ ಪತ್ರಿಕೆಯೊಂದಕ್ಕೆ ಉಪೇಂದ್ರ ದೂರವಾಣಿ ಸಂದರ್ಶನದಲ್ಲಿ ತಾವು ನಟಿಸುತ್ತಿರುವ ಸುದ್ದಿ ಕನ್ಫರ್ಮ್ ಮಾಡಿದ್ದಾರೆ. ಅಲ್ಲಿಗೆ ಸೂಪರ್‌ಸ್ಟಾರ್‌ಗಳ ಮುಖಾಮುಖಿ ಒಂದೇ ಚಿತ್ರದಲ್ಲಾಗುತ್ತೆ.
ಹಿಂದೆ ರಜನಿಯ `ಜೈಲರ್’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿ ಭಾರೀ ಗಮನ ಸೆಳೆದಿದ್ದರು. ಅದೇ ರೀತಿ ಇನ್ನೋರ್ವ ಕನ್ನಡದ ಸ್ಟಾರ್ ಮೇಲೆ ರಜನಿಕಾಂತ್ ದೃಷ್ಟಿ ಬಿದ್ದಿದೆ. ಉಪೇಂದ್ರ ಕೂಡ ಈಗಾಗ್ಲೇ ಕಾಲಿವುಡ್-ಟಾಲಿವುಡ್‌ಗಳಲ್ಲಿ ಚಿರಪರಿಚಿತ ಕನ್ನಡದ ನಟ. ಹೀಗೆ ಉಪೇಂದ್ರರನ್ನ ಎರಡನೇ ಬಹುಮುಖ್ಯ ಪಾತ್ರವನ್ನಾಗಿ ಡಿಸೈನ್ ಮಾಡಲಾಗಿದೆ ಅನ್ನೋದು ಸದ್ಯಕ್ಕೆ ಬಂದಿರುವ ವಿಚಾರ. ಇನ್ನು ಉಪೇಂದ್ರ ಕೂಡ ರಜನಿಕಾಂತ್ ಜೊತೆ ಸ್ಕ್ರೀನ್‍್ ಶೇರ್ ಮಾಡಿಕೊಳ್ಳಲು ಬಹಳ ಉತ್ಸುಕರಾಗಿರುವ ವಿಚಾರ ಹೇಳ್ಕೊಂಡಿದ್ದಾರೆ. `ಯುಐ’ ಚಿತ್ರ ತೆರೆಕಂಡ ಬಳಿಕ ಕೂಲಿ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ಹೀಗಾಗಿ ಅಕ್ಟೋಬರ್ ತಿಂಗಳಲ್ಲಿ ಉಪೇಂದ್ರ `ಕೂಲಿ’ ತಂಡ ಸೇರ್ತಾರೆ ಎನ್ನಲಾಗುತ್ತಿದೆ.