ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಬರೋಬ್ಬರಿ 25 ವರ್ಷಗಳ ಬಳಿಕ ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ (New Zealand) ಮುಖಾಮುಖಿಯಾಗ್ತಿವೆ. ಹೀಗಾಗಿ ಚಂದನವನದ ತಾರೆಯರು (Sandalwood Stars) ಟೀಮ್ ಇಂಡಿಯಾದ (India) ಗೆಲುವಿಗಾಗಿ ಶುಭಹಾರೈಸಿದ್ದಾರೆ.
Advertisement
ಭಾರತ ಮಾತೆ ಗೆದ್ದೆ ಗೆಲ್ಲುತ್ತಾರೆ. ನಮ್ಮ ಟೀಮ್ ಇಂಡಿಯಾ ಗೆದ್ದೆ ಗೆಲ್ಲುತ್ತದೆ. ಮುಂಚೆ ಕ್ರಿಕೆಟ್ ಆಡುತ್ತಿದ್ದೆ,ಈಗ ಬರೀ ನೋಡುತ್ತೇನೆ. ನಮ್ಮ ಭಾರತನೇ ಗೆಲ್ಲಲಿ ಆಲಿ ದಿ ಬೆಸ್ಟ್, ಜೈ ಆಂಜನೇಯ ಎಂದು ಧ್ರುವ ಸರ್ಜಾ (Dhruva Sarja) ಮಾತನಾಡಿದ್ದಾರೆ. ಇದನ್ನೂ ಓದಿ:ಜಯಮಾಲಾ ಮಗಳ ಮದುವೆಯಲ್ಲಿ ಮಿಂಚಿದ್ದ ಆರೋಪಿ ರನ್ಯಾ ರಾವ್
Advertisement
Advertisement
ಇಂಡಿಯಾ ವಿನ್ ಆಗೇ ಆಗುತ್ತಾರೆ. ನ್ಯೂಜಿಲೆಂಡ್ ಟೀಮ್ ಏನು ಕಮ್ಮಿಯಿಲ್ಲ. ಅವರು ಕೂಡ ಸ್ಟ್ರಾಂಗ್ ಇದ್ದಾರೆ. ಅವರ ಫೀಲ್ಡಿಂಗ್ ನೋಡಿದ್ರೆನೇ ಭಯ ಆಗುತ್ತದೆ. ಈ ಸಲ ಇಂಡಿಯಾ ಗೆಲ್ಲಬೇಕು ಅಂದರೆ, ಪ್ರತಿ ಬಾಲ್ 6 ರನ್ ಹೊಡೆಯಲೇಬೇಕು. 4 ರನ್ ಹೊಡೆದರೆ ಎದುರಾಳಿ ತಂಡ ಪಕ್ಕಾ ಹಿಡಿಯುತ್ತಾರೆ. ಹಾಗಾಗಿ ನಮ್ಮ ಟೀಮ್ ಇಂಡಿಯಾ ತಂಡ, ಪ್ರತಿ ಬಾಲ್ 6 ರನ್ ಹೊಡೆಯಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ನಮ್ಮ ಭಾರತನೇ ಗೆಲ್ಲಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಚಂದನ್ ಶೆಟ್ಟಿ (Chandan Shetty) ವಿಶ್ ಮಾಡಿದ್ದಾರೆ.
Advertisement
ಆಲ್ ದಿ ಬೆಸ್ಟ್ ಟೀಮ್ ಇಂಡಿಯಾ. ಅವತ್ತಿನ ದಿನ ಯಾರು ಬೆಸ್ಟ್ ಇರುತ್ತಾರೋ ಅವರಿಗೆ ಗೆಲುವು ಸಿಗುತ್ತದೆ. ಗೆಲುವು ಮುಖ್ಯವಲ್ಲ, ಕ್ರೀಡಾ ಮನೋಭಾವ ಮುಖ್ಯ. ಆಟ ಆಡೋದು ಮುಖ್ಯ, ಚೆನ್ನಾಗಿ ಆಡೋದು ಮುಖ್ಯ. ಗೆಲುವು ಸೋಲು ಎಲ್ಲಾ ಇದ್ದಿದ್ದೇ. ಒಂದು ವೇಳೆ, ಮ್ಯಾಚ್ ಸೋತ್ರೆ ಟ್ರೋಲ್ ಮಾಡಬೇಡಿ ನಮ್ಮ ಆಟಗಾರರಿಗೆ. ಆಟ ಕೂಡ ಕಲೆ ತರನೇ ಜನರನ್ನು, ದೇಶವನ್ನು ಬೆಸೆಯಬೇಕು ಎಂದು ಬಹುಭಾಷಾ ನಟ ಕಿಶೋರ್ (Kishore) ಟೀಮ್ ಇಂಡಿಯಾಗೆ ಶುಭಕೋರಿದ್ದಾರೆ.
ಇಂಡಿಯಾ ಹಾಗೂ ನ್ಯೂಜಿಲೆಂಡ್ ಮ್ಯಾಚ್ ಇದೆ ಇವತ್ತು. ಇಂಡಿಯಾಗೆ ಆಲ್ ದಿ ಬೆಸ್ಟ್. ನಮ್ಮ ದೇಶಕ್ಕೆ ಗೆಲುವು ಸಿಗಲಿ. ನಾನು ಕೂಡ ಕ್ರಿಕೆಟ್ ಅಭಿಮಾನಿ. ನಮ್ಮ ಟೀಮ್ ಇಂಡಿಯಾ ಚೆನ್ನಾಗಿ ಆಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದು ನಟಿ ಅಂಕಿತಾ ಅಮರ್ (Ankitha Amar) ಹೇಳಿದ್ದಾರೆ.
ಇವತ್ತು ಎಲ್ಲರೂ ಕೂಡ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರಿಕೆಟ್ ಪಂದ್ಯಾವಳಿ ನೋಡೋಕೆ ಕಾಯ್ತಿದ್ದೀರಾ ಅಂತ. ಎಲ್ಲರಿಗೂ ನಿರೀಕ್ಷೆಯಿದೆ ಭಾರತನೇ ಗೆಲ್ಲಬೇಕು ಅಂತ. ಹಾಗಾಗಿ ಇವತ್ತಿನ ಕ್ರಿಕೆಟ್ ಮ್ಯಾಚ್‌ನ ಜಿದ್ದಾಜಿದ್ದಿಯಲ್ಲಿ ಭಾರತ ತಂಡ ಗೆದ್ದು ಬರಲಿ ಅಂತ ಆಶಿಸುತ್ತೇನೆ. ಆಲ್ ದಿ ಬೆಸ್ಟ್ ಇಂಡಿಯಾ ಟೀಮ್. ಗೆದ್ದು ಬಾ ಭಾರತ ಎಂದು ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ಚೈತ್ರಾ ಕುಂದಾಪುರ (Chaithra Kundapura) ಶುಭಕೋರಿದ್ದಾರೆ.