ಕನ್ನಡದ ಖ್ಯಾತ ಗಾಯಕಿ ಐಶ್ವರ್ಯಾ ರಂಗರಾಜನ್ (Aishwarya Rangarajan) ಅವರು ಮಂಗಳೂರು ಹುಡುಗನ ಜೊತೆ ಇಂದು (ಮಾ.2) ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮದುವೆಗೆ ಸಜ್ಜಾಗಿರುವ ಗಾಯಕಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.
ಐಶ್ವರ್ಯಾ ರಂಗರಾಜನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಎಂಗೇಜ್ ಆಗಿದ್ದೀವಿ ಎಂದು ಸಿಹಿ ಸುದ್ದಿ ನೀಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ತುಂಬಾ ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆ ಆಗುತ್ತಿರುವ ಹುಡುಗನನ್ನು ಐಶ್ವರ್ಯಾ ಪರಿಚಯಿಸಿದ್ದಾರೆ. ಗಾಯಕಿ ಹಂಚಿಕೊಂಡ ಪೋಸ್ಟ್‌ಗೆ ‘ಬೆಂಗಳೂರು ಟು ಮಂಗಳೂರು, ಪರ್ಫೆಕ್ಟ್ ಪಿಚ್’ ಎಂದು ಐಶ್ವರ್ಯಾ ಅಡಿಬರಹ ಬರೆದುಕೊಂಡಿದ್ದಾರೆ. ಮಂಗಳೂರಿನ ಹುಡುಗ ಎಂಬ ವಿವರ ಬಿಟ್ಟರೇ ಹೆಚ್ಚೇನು ರಿವೀಲ್ ಆಗಿಲ್ಲ. ಇದನ್ನೂ ಓದಿ:ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೇ ಇಲ್ಲ ಇನ್ನು ಟೈಟ್ ಮಾಡಿಯೇನು ಪ್ರಯೋಜನ: ಜಗ್ಗೇಶ್
View this post on Instagram
ಅಂದಹಾಗೆ, ‘ಕ್ರಾಂತಿ’ ಸಿನಿಮಾದ ‘ಶೇಕ್ ಇಟ್ ಪುಷ್ಪವತಿ’, ‘ಯುಐ’ ಸಿನಿಮಾದ ‘ಟ್ರೋಲ್ ಆಗುತ್ತೆ’, ‘ಕಬ್ಜ’ ಸಿನಿಮಾದ ‘ನಮಾಮಿ’ ಸಾಂಗ್, ‘ಏಕ್ ಲವ್ ಯಾ’ ಚಿತ್ರದ ‘ಮೀಟ್ ಮಾಡೋಣ ಡೇಟ್ ಮಾಡೋಣ’ ಸಾಂಗ್ ಸೇರಿದಂತೆ ಹಲವು ಹಿಟ್ ಹಾಡುಗಳನ್ನು ಐಶ್ವರ್ಯಾ ನೀಡಿದ್ದಾರೆ.