ನನ್ನನ್ನ ಕರಗಿ ಹೋಗುವಷ್ಟು ನೋಡ್ತಿದ್ದೆ ನೀನು.. ಆ ಕಣ್ಣಲ್ಲಿ ಅದೆಷ್ಟು ಮಾತಾಡ್ತಿದ್ದೆ ನೀನು..? ನೀನು ನೋಡೋದನ್ನ ನೋಡಿ ನನ್ನ ಫ್ರೆಂಡ್ಸ್ (Friends) ಎಲ್ರೂ ಹೇಳೋರು, ಅವನು ನಿನಗೆ ಲೈನ್ ಹೊಡಿತಿದಿದಾನೆ ಅಂತ.. ನನಗೂ ಗೊತ್ತಿತ್ತು ಆ ವಿಚಾರ.
ನೀನ್ನ ಟೇಬಲ್ ಮೇಲಿದ್ದ ʻರಂಜದ ಹೂಗಳುʼ ಪುಸ್ತಕದ ಮೊದಲ ಪುಟದಲ್ಲಿ ʻರಂಗೋʼಲಿ ಅಂತ ಬರೆದಿಟ್ಟಿದ್ದೆ ನೀನು. ನೀನು ಊಟಕ್ಕೆ ಹೋದಾಗ ಅದನ್ನ ನೋಡಿ ತುಂಬಾ ಖುಷಿಪಟ್ಟಿದ್ದೆ. ನನಗೆ ಮೊದಲಿಗೆ ಅದು ಅರ್ಥ ಆಗಿರಲಿಲ್ಲ ಕಣೋ.. ನಿನ್ನ ಫ್ರೆಂಡ್ ಸೋಮ ಹೇಳಿದ್ದ.. ಅದು ನಿಮ್ಮಿಬ್ರ ಹೆಸರಿನ ಮೊದಲನೇ ಅಕ್ಷರ ಅಂತ..! ಆದ್ರೆ ನಿನಗೆ ಮಾತು ಬರುತ್ತೆ ಅಂತಾನೇ ನನಗೆ ಗೊತ್ತಿರಲಿಲ್ಲ, ಎಷ್ಟೋ ದಿನ.. ನನ್ನ ಬರಿ ನೋಡ್ತಿದ್ದೆ ಬಿಟ್ರೆ.. ಮಾತೇ ಆಡ್ತಿರಲಿಲ್ಲ ನೀನು. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?

ಕೊನೆ ತನಕನೂ ನೀನು ಮಾತಾಡ್ಸ್ತೀಯಾ ಅಂತ ಕಾದಿದ್ದೆ.. ಅಪ್ಪ ತೋರಿಸೋ ಹುಡುಗನ್ನ ಹ್ಞೂಂ ಅಂತ ಒಪ್ಕೋಬೇಕಾದ್ರೂ, ಒಂದ್ಸಲ ಮೆಸೇಜ್ ನೋಡಿದ್ದೆ.. ನೀನೆಲ್ಲಾದ್ರೂ ʻI Love Youʼ ಅಂತ ಕಳಿಸ್ತಿಯೇನೋ ಅಂತ..!
ನೀನು ನನ್ನನ್ನ ಮನಸ್ಸಲ್ಲಿ ಆರಾಧಿಸ್ತಿದಿಯಾ ಅಂತ ನನಗೆ ಗೊತ್ತಿತ್ತು. ನಾನೇ ತುಂಬಾ ಸಲ ಹೇಳ್ಬೇಕು ಅಂದ್ಕೊಂಡೆ.. ಆಗಲೇ ಇಲ್ಲ. ನಿನ್ನ ಬಗ್ಗೆ ಫ್ರೆಂಡ್ಸ್, ನಿನ್ನಕ್ಕ ಎಲ್ಲಾ ಹೇಳಿದ್ರೂ.. ʻನನ್ನ ತಮ್ಮ ಮನೆಗೆ ಬಂದು ಅವಳು ಇವತ್ತು ಆಫೀಸ್‌ಗೆ ಈ ಡ್ರೆಸ್ ಹಾಕೊಂಡು ಬಂದಿದ್ಲು. ಎಷ್ಟು ಚೆಂದ ಕಾಣಿಸ್ತಿದ್ಲು ಗೊತ್ತಾ? ನನ್ನ ನೋಡಿ ಅವಳು ಸ್ಮೈಲ್ ಮಾಡಿದ್ಲು ಗೊತ್ತಾ..? ಇವತ್ತು ಅವಳು ಹಾಡು ಹೇಳ್ತಾ ಇದ್ಲು.. ವಾಯ್ಸ್ ಎಷ್ಟು ಮೆಲೋಡಿಯಾಗಿತ್ತು ಗೊತ್ತಾ ಅಂತ ತಲೆ ತಿಂತಿದ್ದ’ ಅಂತ ಎಷ್ಟೋ ಸಲ ಹೇಳಿದ್ಲು. ಇದನ್ನೂ ಓದಿ: ಮುಗುಳ್ನಗೆಯ ಗಿಫ್ಟ್ ಹಿಡ್ಕೊಂಡು ಮತ್ತೆ ಮತ್ತೆ ಸಿಗ್ತಾಳೆ ಆ ಅಪರಿಚಿತೆ..!
ನೀನೇ ಏನೂ ಹೇಳಲೇ ಇಲ್ಲ.. ಒಪ್ತಿದ್ನೋ.. ಬಿಡ್ತಿದ್ನೋ.. ನೀನಾದ್ರೂ ನನಗೆಲ್ಲಾ ಹೇಳ್ಬಿಡ್ಬೇಕಿತ್ತು. ಮುಗ್ಧನ ಥರ ನಾಟಕ ಆಡ್ಬಿಟ್ಟೆ. ಒಂದಲ್ಲ ಒಂದು ದಿನ ಬಂದು ಹೇಳ್ತಿಯಾ ಅಂತ ತುಂಬಾ ಕಾದೆ. ಆ ದಿನ ಬರಲೇ ಇಲ್ಲ. ಈಗ ಅನ್ನಿಸ್ತಿದೆ ಕಣೋ.. ನಾನಾದ್ರೂ ಹೇಳ್ಬೇಕಿತ್ತು ಅಂತ.. ಈಗಲೂ ಏನೋ ಹೇಳ್ಬೇಕು ಅನ್ನಿಸ್ತಿದೆ. ಹೇಳ್ಲಾ ಬೇಡ್ವಾ ಗೊತ್ತಾಗ್ತಿಲ್ಲ.. ಆದ್ರೆ ಹೇಳಲ್ಲ ಬಿಡು.
ಒಮ್ಮೊಮ್ಮೆ ನಿನ್ನ ತಬ್ಬಿ ಅಳ್ಬೇಕು ಅನ್ಸುತ್ತೆ.. ಒಮ್ಮೊಮ್ಮೆ ಯಾಕೆ ನೀನು ನಿನ್ನ ಪ್ರೀತಿನಾ (Love) ನನ್ನಿಂದ ಮುಚ್ಚಿಟ್ಟೆ ಅಂತ ನಾಲ್ಕು ಕೆನ್ನೆಗೆ ಬಾರಿಸ್ಬೇಕು ಅನ್ಸುತ್ತೆ.. ಒಮ್ಮೊಮ್ಮೆ ಅದೇ ಕೆನ್ನೆಗಳಿಗೆ ನೂರು ಮುತ್ತು (Kiss) ಕೊಡ್ಬೇಕು, ಮುದ್ದು ಮಾಡ್ಬೇಕು ಅನ್ಸುತ್ತೆ.. But `I Really Miss You’ Dear…! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
– ಗೋಪಾಲಕೃಷ್ಣ

