ಚಿಕ್ಕಬಳ್ಳಾಪುರ: ಹಲ್ಲೆ, ಕೊಲೆಯತ್ನ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಬಂಧನವಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement
ಕೈವಾರ ಶ್ರೀನಿವಾಸ್ ಪಕ್ಕದ ಮನೆಯ ನಿವಾಸಿಗಳಾದ ನಾರಾಯಣಸ್ವಾಮಿ ಹಾಗೂ ಕುಟುಂಬಸ್ಥರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸರು ಕೈವಾರ ಶ್ರೀನಿವಾಸ್ ಹಾಗೂ ಆತನ ಇಬ್ಬರು ಸಹೋದರರು ಸೇರಿದಂತೆ ಒರ್ವ ಸ್ನೇಹಿತ ಸೇರಿ ಒಟ್ಟು ನಾಲ್ವರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಇಡಿ ದಾಳಿ ಪ್ರಕರಣ- ದೆಹಲಿಯಲ್ಲಿ ಮೊದಲ ಬಾರಿ ವಿಚಾರಣೆಗೆ ಹಾಜರಾದ ಜಮೀರ್
Advertisement
Advertisement
ಏನಿದು ಪ್ರಕರಣ?
ಚಿಂತಾಮಣಿ ತಾಲೂಕಿನ ಕೈವಾರ ಗ್ರಾಮದ ನಿವಾಸಿ ಕಸಾಪಾ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಪಕ್ಕದ ಮನೆಯವರಾದ ನಾರಾಯಣಸ್ವಾಮಿಯವರಿಗೂ ಜಮೀನು, ನಿವೇಶನ ಸಂಬಂಧ ವಿವಾದಗಳಿದ್ದು, ಈ ವಿವಾದ ಸಂಬಂಧ ಪದೇ ಪದೇ ಮಾತುಕತೆ, ವಾಗ್ವಾದ, ರಾಜೀ ಪಂಚಾಯತಿ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇದೇ ವಿಚಾರವಾಗಿ ಎರಡೂ ಕುಟುಂಬಸ್ಥರ ನಡುವೆ ಗಲಾಟೆಯಾಗಿದ್ದು, ಕೈವಾರ ಶ್ರೀನಿವಾಸ್ ಕುಟುಂಬಸ್ಥರು ನಾರಾಯಣಸ್ವಾಮಿ ಹಾಗೂ ಆತನ ಸಹೋದರ ಅಶ್ವತ್ಥನಾರಾಯಣ ಹಾಗೂ ಪತ್ನಿ ಉಮಾದೇವಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ. ಹಲ್ಲೆಗೆ ಒಳಗಾಗಿರುವ ನಾರಾಯಣಸ್ವಾಮಿ ಆತನ ಸಹೋದರ ಹಾಗೂ ಪತ್ನಿ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೈವಾರ ಶ್ರೀನಿವಾಸ್ ಸಹ ದೂರು ನೀಡಿದ್ದು, ತನಿಖೆಯ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.