ಸಂಜೆ ವೇಳೆಯ ಕಾಫಿ, ಟೀ ಜೊತೆಗೆ ಏನಾದ್ರೂ ಸ್ನ್ಯಾಕ್ ಸೇವಿಸಬೇಕು ಅಂತಾ ಎಲ್ಲರ ಮನಸ್ಸು ಚಡಪಡಿಸುತ್ತದೆ. ಕೆಲಸದ ಒತ್ತಡದಲ್ಲಿ ಸ್ಪೈಸಿಯಾಗಿ ಏನಾದ್ರೂ ಮಾಡೋಣ ಅಂದ್ರೆ ಟೈಮ್ ಇಲ್ಲ ಅಂತಾ ಹೇಳ್ತಾರೆ. ಹೀಗಾಗಿ ಕಡಿಮೆ ಸಮಯದಲ್ಲಿ ವೆಜ್ ಕಬಾಬ್ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* ಕ್ಯಾರೆಟ್ – 1/2 ಕಪ್ (ಸಣ್ಣಗೆ ಹಚ್ಚಿದ್ದು)
* ಹಸಿರು ಬಟಾಣಿ – 1/2 ಕಪ್
* ಹೂ ಕೋಸು – 1/2ಕಪ್ (ಸಣ್ಣಗೆ ಹಚ್ಚಿದ್ದು)
* ಈರುಳ್ಳಿ – ಮಿಡಿಯಂ ಸೈಜ್‍ದು (ಸಣ್ಣಗೆ ಹಚ್ಚಿದ್ದು)
* ಕ್ಯಾಪ್ಸಿಕಮ್- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
* ಚಾಟ್ ಮಸಾಲ – 1 ಟಿಎಸ್‍ಪಿ(ಟೀ ಸ್ಪೂನ್)
* ಜೀರಾ ಪೌಡರ್ – 1/2 ಟಿಎಸ್‍ಪಿ
* ಹಸಿಮೆಣಸಿನ ಕಾಯಿ – 5-6 ಸಣ್ಣಗೆ ಹೆಚ್ಚಿದ್ದು
* ಬೇಯಿಸಿದ ಆಲೂಗಡ್ಡೆ – 2 ಮೀಡಿಯಂ
* ಕೆಂಪು ಮೆಣಸಿನಕಾಯಿ ಪುಡಿ – 1 ಟಿಎಸ್‍ಪಿ
* ಅರಿಶಿನ ಪುಡಿ – ಚಿಟಿಕೆ
* ಮೈದಾ – 1/2 ಕಪ್
* ಜೋಳದ ಹಿಟ್ಟು – 1/2 ಕಪ್
* ಉಪ್ಪು – ರುಚಿಗೆ
* ಎಣ್ಣೆ – ಕರಿಯಲು
* ಬ್ರೆಡ್ ಕ್ರಮ್ಸ್
* ಉಪ್ಪು-ರುಚಿಗೆ ತಕ್ಕಷ್ಟು
Advertisement
Advertisement
Advertisement
ಮಾಡುವ ವಿಧಾನ:
* ಪ್ಯಾನ್‍ನ ಬಿಸಿಗಿಟ್ಟು 2 ಚಮಚ ಎಣ್ಣೆ ಹಾಕಿ ಅದಕ್ಕೆ ಕ್ಯಾರೆಟ್, ಬಟಾಣಿ, ಹೂ ಕೋಸು, ಈರುಳ್ಳಿ, ಕ್ಯಾಪ್ಸಿಕಮ್ ಹಾಕಿ ಫ್ರೈ ಮಾಡಿ.
* ಬಳಿಕ ಅದಕ್ಕೆ ಜೀರಾ ಪೌಡರ್ 1/2 ಟಿಎಸ್‍ಪಿ, ಚಾಟ್ ಮಸಾಲ 1 ಟಿಎಸ್‍ಪಿ ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿ. ನಂತರ ಆರಲು ಬಿಡಿ.
* ಒಂದು ಅಗಲವಾದ ಪಾತ್ರೆಗೆ ಮೈದಾ 1/2 ಕಪ್, ಜೋಳದ ಹಿಟ್ಟು 1/2 ಕಪ್ ನೀರು ಹಾಕಿ ಬ್ಯಾಟರ್ ತಯಾರಿಸಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕೆ ಹಿಟ್ಟು ಸಿದ್ಧಪಡಿಸಿ, ಅದಕ್ಕೆ 1 ಚಮಚ ಎಣ್ಣೆ ಸೇರಿಸಿಡಿ.
* ಬಳಿಕ ಬೇಯಿಸಿದ ಆಲೂಗಡ್ಡೆಯನ್ನು ಸ್ಮ್ಯಾಶ್ ಮಾಡಿ. ಅದಕ್ಕೆ ಫ್ರೈ ಮಾಡಿದ ತರಕಾರಿಗಳು, ಚಿಲ್ಲಿ ಪೌಡರ್, ಅರಿಶಿನ ಪುಡಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಮೈದಾ ಹಾಕಿ ಕಲಸಿ.
* ಕಲಸಿದ ಆಲೂ ವೆಜ್‍ನ್ನು ಬಿಸ್ಕತ್ ಶೇಪ್ ಮಾಡಿ ಅದನ್ನು ಕಲಸಿದ ಮೈದಾ ಬ್ಯಾಟರ್‍ನಲ್ಲಿ ಉರುಳಿಸಿ. ಬ್ರೆಡ್ ಕ್ರಮ್ಸ್ ನಲ್ಲಿ ಡಿಪ್ ಮಾಡಿ. ಒಂದು ಕಡೆ ಇಟ್ಟುಕೊಳ್ಳಿ.
* ಪ್ಯಾನ್‍ಗೆ ಎಣ್ಣೆ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೂ ಪ್ರೈ ಮಾಡಿ. ಈಗ ವೆಜ್ ಕಬ್ ಸವಿಯಲು ರೆಡಿ.