ಬೆಂಗಳೂರು: ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಅವರಿಗೆ ಪೊಲೀಸ್ ಸಮನ್ಸ್ ಜಾರಿಯಾಗಿದೆ. ಈ ಕುರಿತು ಚಂದನ್ ಶೆಟ್ಟಿ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.
ಚಂದನ್ ಶೆಟ್ಟಿ ಹೇಳಿದ್ದೇನು?
ಮೂರು ವರ್ಷಗಳ ಹಿಂದೆ ‘ಅಂತ್ಯ’ ಎಂಬ ಸಿನಿಮಾಗೆ ಈ ಹಾಡು ಹಾಡಿದ್ದೆ. ಅಂತ್ಯ ಸಿನಿಮಾದ ನಿರ್ದೇಶಕ ಮುತ್ತು ಅವರು ನನ್ನ ಬಳಿ ಚಿತ್ರಕ್ಕೆ ಹಾಡುವಂತೆ ಹೇಳಿದ್ದರು. ಯುವಕರು ಪರೀಕ್ಷೆಗಳಲ್ಲಿ ಫೇಲ್ ಆಗಿ, ಮುಂದೆ ಡ್ರಗ್ಸ್ ಅಡಿಕ್ಟ್ ಆಗೋದರ ಕುರಿತಾದ ಒಳ್ಳೆಯ ಸಂದೇಶ ನೀಡುವ ಕಥೆಯನ್ನು ಅಂತ್ಯ ಸಿನಿಮಾ ಹೊಂದಿತ್ತು. ಆದ್ರೆ ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಆಗಲಿಲ್ಲ. ಆದ್ರೆ ನಾನು ಹಾಡಿರುವ ಹಾಡು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಯ್ತು. ಹಾಡು ಲೀಕ್ ಆದ್ಮೇಲೆ, ನಿರ್ದೇಶಕ ಮುತ್ತು ಅವರು ತಮ್ಮ ಅಧಿಕೃತ ಹಾಡು ಎಂದು ಹೇಳಲು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿಕೊಂಡರು.
ಆದ್ರೆ ಇದೀಗ ನನ್ನ ಹಾಡಿನಿಂದ ಯುವಕರಿಗೆ ಗಾಂಜಾ ಸೇವನೆಗೆ ಪ್ರಚೋದನೆ ನೀಡಿದ್ದೇನೆ ಅಂತಾ ನೋಟಿಸ್ ಬಂದಿದೆ. ಜನರಿಗೆ ಮನರಂಜನೆ ನೀಡುವುದಕ್ಕಾಗಿ ನಾವು ಹಾಡುಗಳನ್ನು ಮಾಡುತ್ತೇವೆ. ಈ ಹಿಂದೆ ಶಿಶುನಾಳ ಶರೀಫರು ಸಹ ‘ಗೂಡು ಗುಡಿಯ ಸೇದಿ ನೋಡು’ ಎಂಬ ಹಾಡು ರಚಿಸಿದ್ದರು.
ಹಾಡುಗಳನ್ನು ಕೇಳಿ ಎಂಜಾಯ್ ಮಾಡಿ, ಅದರ ಪ್ರಭಾವಕ್ಕೆ ಒಳಗಾಗಬೇಡಿ. ಹಾಡುಗಳನ್ನು ಕೇಳಿ ಗಾಂಜಾ ಸೇವನೆ ಮಾಡ್ತಾರೆ ಎಂದರೆ ಅದನ್ನ ನಂಬುವುದಕ್ಕೆ ಸಾಧ್ಯನೇ ಇಲ್ಲ. ಈ ಹಾಡಿನಿಂದ ಯಾವುದೇ ಪ್ರಚೋದನ ಆಗಿಲ್ಲ. ಪೊಲೀಸ್ ನೋಟಿಸ್ ನನಗೆ ಬಂದಿದ್ದು ಬೇಸರವನ್ನ ತರಿಸಿದೆ. ನಾನೊಬ್ಬ ಕೇವಲ ಗಾಯಕನಾಗಿದ್ದು, ನಿರ್ದೇಶಕರೇ ಹಾಡು ಬರೆದಿದ್ದಾರೆ. ಒಟ್ಟಿನಲ್ಲಿ ಪೊಲೀಸರು ನೋಟಿಸ್ ಮೂಲಕ ವಿಚಾರಣೆಗೆ ಕರೆದಿದ್ದಾರೆ.
ನಿರ್ದೇಶಕ ಮುತ್ತು ನನ್ನ ಸಂಪರ್ಕದಲ್ಲಿ ಇಲ್ಲ. ಸುಮಾರು ಎರಡು ವರ್ಷಗಳಿಂದ ನಾನು ಅವರನ್ನು ಭೇಟಿ ಮಾಡಿಲ್ಲ. ಒಂದು ವೇಳೆ ಹಾಡಿನಿಂದ ಸಮಾಜಕ್ಕೆ ಕೆಟ್ಟದಾಗುತ್ತಿದೆ ಎಂದರೆ ಅದನ್ನು ಡಿಲೀಟ್ ಮಾಡಲೇಬೇಕು. ಮುತ್ತು ಅವರೇ ನೀವು ಎಲ್ಲೆ ಇದ್ದರೂ ಹಾಡನ್ನು ಡಿಲೀಟ್ ಮಾಡಿ. ವಿಚಾರಣೆಗೆ ಹಾಜರಾಗಿ ಸಿನಿಮಾ ಮತ್ತು ಹಾಡಿಗೆ ಸಂಬಂಧಿಸಿದಂತೆ ಎಲ್ಲ ಗೊಂದಲಗಳಿಗೆ ಸ್ಪಷ್ಟನೆ ನೀಡುತ್ತೇನೆ ಅಂತ ಚಂದನ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv