ಬೆಂಗಳೂರು: ಕನ್ನಡ ರಾಜ್ಯೋತ್ಸವದ (Kannada Rajyotsava) ಹಿನ್ನಲೆಯಲ್ಲಿ ಬೆಂಗಳೂರಿನ (Bengaluru) ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ವಿಶೇಷ ಕೊಡುಗೆ ನೀಡಿದೆ.
ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸುತ್ತಿದ್ದ ಪ್ರಯಾಣಿಕರ ಸಮಯ ಉಳಿತಾಯ ಮಾಡಲು ಮೊಬೈಲ್‌ನಲ್ಲೇ (Mobile) ಕ್ಯೂಆರ್ ಕೋಡ್ (QRcode) ಬಳಸಿ ಟಿಕೆಟ್ ಖರೀದಿಸುವ ವಿಶೇಷ ಸೌಲಭ್ಯವನ್ನು ಜಾರಿಗೆ ತಂದಿದೆ. ಇದನ್ನೂ ಓದಿ: ನ.1ರಿಂದ ಕಾರಿನಲ್ಲಿ ಪ್ರಯಾಣಿಸೋ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ
Advertisement
Advertisement
ಮಂಗಳವಾರದಿಂದ (ನವೆಂಬರ್ 1) ಮೊಬೈಲ್‌ನಲ್ಲಿ (Mobile) ಟಿಕೆಟ್ ಖರೀದಿಸಬಹುದಾಗಿದ್ದು, ಕ್ಯೂ ಆರ್ ಕೋಡ್ ಮೂಲಕ ಎಂಟ್ರಿ-ಎಕ್ಸಿಟ್ ಅವಕಾಶ ಪಡೆಯಬಹುದಾಗಿದೆ. ಇದು ಪ್ರಯಾಣಿಕರ ಸಮಯ ಉಳಿತಾಯ, ಚಿಲ್ಲರೆ ಸಮಸ್ಯೆ ದೂರಮಾಡುವ ಉದ್ದೇಶವನ್ನೂ ಹೊಂದಿದೆ. ಇದನ್ನೂ ಓದಿ: ರಸ್ತೆಗುಂಡಿಗಳಿಂದಾದ ಸಾವನ್ನು ಸರ್ಕಾರಿ ಕೊಲೆ ಎಂದು ಪರಿಗಣಿಸಿ ಅಧಿಕಾರಿಗಳು, ಸಚಿವರನ್ನು ಆರೋಪಿಗಳನ್ನಾಗಿಸಿ: ಕಾಂಗ್ರೆಸ್
Advertisement
Advertisement
ಮೊಬೈಲ್ ಅಪ್ಲಿಕೇಶನ್ ಬಳಸಿ ಟಿಕೆಟ್ ಖರೀದಿಸಿ, ಮೊಬೈಲ್ ನಲ್ಲೇ ಎಂಟ್ರಿ ಅಥವಾ ಎಕ್ಸಿಟ್ ಗೇಟ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರವೇಶ ಪಡೆಯಬಹುದಾಗಿದೆ.