ಬೆಳಗಾವಿ: 64ನೇ ಕನ್ನಡ ರಾಜ್ಯೋತ್ಸವವನ್ನ ಮಧ್ಯರಾತ್ರಿ ಆಚರಣೆ ಮಾಡುವ ಮೂಲಕ ಕುಂದಾನಗರಿಯಲ್ಲಿ ಕನ್ನಡಿಗರು ಸಂಭ್ರಮಿಸಿದ್ದಾರೆ.
ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಸರಿಯಾಗಿ 12 ಗಂಟೆಗೆ ಕನ್ನಡಪರ ಸಂಘಟನೆ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಕನ್ನಡ ಹಬ್ಬ ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿ, ಮಳೆಯಲ್ಲೇ ಕನ್ನಡ ಗೀತೆಗಳಿಗೆ ಸ್ಟೆಪ್ಸ್ ಹಾಕಿದರು. 2005ರ ನಂತರ ಮೊದಲ ಬಾರಿಗೆ ಡಿಸಿ ಕಚೇರಿ ಮುಂಭಾಗದಲ್ಲಿ ಕನ್ನಡದ ಧ್ವಜವನ್ನ ಹಾರಿಸುವುದರ ಮೂಲಕ ಖುಷಿ ಪಟ್ಟರು.
Advertisement
ಡಿಸಿ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣಕ್ಕೆ ಪೊಲೀಸರು ಕಾವಲಿದ್ದು, ಧ್ವಜಕ್ಕೆ ಧಕ್ಕೆಯಾಗದಂತೆ ನೋಡಿಕೊಂಡರು. ಮಧ್ಯರಾತ್ರಿ ಕನ್ನಡಿಗರೆಲ್ಲರೂ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದು, ಇಂದು ಇಡೀ ದಿನ ಕುಂದಾನಗರಿಯಲ್ಲಿ ಕನ್ನಡದ ಕಂಪು ಪಸರಿಸಲಿದೆ.