ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ (Kannada Rajyotsava Award) ಡಿಮ್ಯಾಂಡ್ ಹೆಚ್ಚಾದಂತೆ ಕಾಣ್ತಿದೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸಾವಿರಾರು ಅರ್ಜಿಗಳು ಸಂದಾಯವಾಗಿವೆ.
ಈ ಬಾರಿ 69 ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. 69 ಪ್ರಶಸ್ತಿಗಳಿಗೆ 1,200ಕ್ಕೂ ಹೆಚ್ಚು ಅರ್ಜಿಗಳು ಸಂದಾಯವಾಗಿದೆ. ಆನ್‌ಲೈನ್ ಸೇವಾಸಿಂಧು ಪೋರ್ಟಲ್ ಮೂಲಕ ಬರೋಬ್ಬರಿ 1,135ಕ್ಕೂ ಹೆಚ್ಚು ಹಾಗೂ ಭೌತಿಕವಾಗಿ 85ಕ್ಕೂ ಹೆಚ್ಚು ಅರ್ಜಿಗಳು ಸಂದಾಯವಾಗಿವೆ. ಇದನ್ನೂ ಓದಿ: Mysuru Dasara | ಮೊದಲಿಂದಲ್ಲೂ ಧನಂಜಯ – ಕಂಜನ್ ನಡುವೆ ಜಗಳವಿದೆ, ಮೊದಲೂ ಅಲ್ಲ ಕೊನೆಯೂ ಅಲ್ಲ: ಡಿಸಿಎಫ್
ರಾಜಕೀಯ ನಾಯಕರು, ಸಂಘ-ಸಂಸ್ಥೆಗಳು, ಪಕ್ಷದ ಪ್ರಮುಖರಿಂದಲೂ ಪ್ರಶಸ್ತಿಗೆ ಹೆಸರುಗಳು ಶಿಫಾರಸು ಬಂದಿದೆ. ಜೊತೆಗೆ ಮಾಜಿ ಸಚಿವರು, ವಿವಿಧ ಕ್ಷೇತ್ರದ ಗಣ್ಯರು, ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಕೊಡುವಂತೆ ಮನವಿಗಳು ಬಂದಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸರ್ಕಾರದಿಂದ ಪ್ರಶಸ್ತಿಗೆ ಮಾನದಂಡ ಇದ್ದರೂ ಲಾಬಿಗೆ ಮಣೆ ಹಾಕೋದು ಅನ್ನೋ ಮಾತುಗಳು ಸಹ ಕೇಳಿಬರ್ತಿವೆ. ಇದನ್ನೂ ಓದಿ: 70 ವರ್ಷದ ಹೆರಿಗೆ ಆಸ್ಪತ್ರೆಗೆ ಬೀಗ: 3 ವರ್ಷಗಳಿಂದ ದುರಸ್ತಿ ಹೆಸರಿನಲ್ಲಿ ಕಾಮಗಾರಿ ವಿಳಂಬ!
ಮುಖ್ಯಾಂಶಗಳು:
* ಈ ಬಾರಿ 69 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಲು ತೀರ್ಮಾನ.
* ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ರಚನೆ.
* ಸಮಿತಿಯಿಂದ ಅರ್ಜಿಗಳ ಪರಿಶೀಲನೆ ಮಾಡಿ ಸಾಧಕರಿಗೆ ಪ್ರಶಸ್ತಿ ಕೊಡೋ ಚಾಲೆಂಜ್.
* ಪ್ರಶಸ್ತಿ ಪಡೆಯೋರು 60 ವರ್ಷ ಮೇಲ್ಪಟ್ಟಿರಬೇಕು. ಸಾಧಕರಾಗಿರಬೇಕು ಅನ್ನೋ ನಿಯಮ ಮಾಡಿರೋ ಸರ್ಕಾರ.
* ನಿಯಮದ ಪ್ರಕಾರ, ಪ್ರಾಮಾಣಿಕವಾಗಿ ಪ್ರಶಸ್ತಿ ಘೋಷಣೆ ಮಾಡೋದು ಸರ್ಕಾರಕ್ಕೆ ಚಾಲೆಂಜ್.