ಬೆಂಗಳೂರು: ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಒತ್ತಾಯಿಸಿ ಕನ್ನಡಪರ ಸಂಘಟಕರು ಉಚಿತವಾಗಿ ತಿಂಡಿ ವಿತರಿಸಿ ಇಂದು ಬೆಳಗ್ಗೆ ವಿನೂತನ ಪ್ರತಿಭಟನೆ ನಡೆದಿದ್ದಾರೆ.
ನೆಲಮಂಗಲ ಪಟ್ಟಣದ ಬಿಹೆಚ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವಿಳಂಬ ಪ್ರಶ್ನಿಸಿ ವಿಶೇಷವಾಗಿ ನಮ್ಮ ಕರ್ನಾಟಕ ಜನಸೈನ್ಯ ಕಾರ್ಯಕರ್ತ ಪ್ರತಿಭಟನೆ ನಡೆಸಿದ್ದಾರೆ. ನೆಲಮಂಗಲ ಪುರಸಭೆಯು ಅಕ್ಟೋಬರ್ 22ರಂದು ಉದ್ಘಾಟನೆ ಮಾಡುವುದಾಗಿ ತಿಳಿಸಿತ್ತು. ಆದರೆ ತಿಳಿಸಿದಂತೆ ಉದ್ಘಾಟನೆ ನೆರವೇರದೆ ಮತ್ತೆ ದಿನಾಂಕ ಮುಂದೂಡಲಾಗಿದೆ. ಇದರಿಂದಾಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಇಂದು ಕ್ಯಾಂಟೀನ್ ಮುಂದಯೇ ಪಲಾವ್ ಹಾಗೂ ಮೊಸರು ಹಂಚಿ ಪ್ರತಿಭಟಿಸಿದ್ದಾರೆ.
Advertisement
ಇಂದಿರಾ ಕ್ಯಾಂಟೀನ್ ಉದ್ಘಾಟನೆ ವಿಳಂಬದ ಕುರಿತು ಪಬ್ಲಿಕ್ ಟಿವಿಯಲ್ಲಿ ಗುರುವಾರ ವರದಿ ಮಾಡಲಾಗಿತ್ತು. ಈ ಕುರಿತು ಮಾಹಿತಿ ಪಡೆದ ಕನ್ನಡ ಪರ ಸಂಘಟನೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕಾಂಗ್ರೆಸ್‍ನ ಕೃಷ್ಣಬೈರೇಗೌಡ ಹಾಗೂ ನೆಲಮಂಗಲ ಜೆಡಿಎಸ್ ಶಾಸಕ ಶ್ರೀನಿವಾಸ್‍ಮೂರ್ತಿ ಅವರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನು ಓದಿ: ಬಡವರ ಹಸಿವು ನೀಗಿಸುವ ಇಳದಿರಾ ಕ್ಯಾಂಟೀನ್ ರಾಜಕಾರಣಿಗಳ ಜಟಾಪಟಿಗೆ ಬಲಿ!
Advertisement
ರಾಜಕಾರಣಿಗಳ ಒಳ ಜಗಳಕ್ಕೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವಿಳಂಭವಾಗಿದ್ದು, ಖಂಡನೀಯ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು, ನಾಯಕರು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews