ಬೆಂಗಳೂರು: ಸಂಕ್ರಾಂತಿ ಹಬ್ಬ ಅಂದರೆ ಸಡಗರ ಸಂಭ್ರಮ ಜೋರಾಗಿರುತ್ತೆ. ಮನೆಯ ಮುಂದೆ ಬಣ್ಣದ ರಂಗೋಲಿ ಹಾಕಿ, ಎಳ್ಳು ಬೆಲ್ಲ ಬೀರಿ, ಕಬ್ಬು ಸವಿದು ಹಬ್ಬದೂಟ ಮಾಡುವ ಖುಷಿ ಇರುತ್ತೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಕನ್ನಡ ಸಂಘಟನೆ ಕಾರ್ಯಕರ್ತರು, ಮಹಿಳೆಯರು ರಸ್ತೆಯಲ್ಲೇ ಸಂಕ್ರಾಂತಿ ಆಚರಿಸಿದರು.
Advertisement
ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಮೌರ್ಯ ಸರ್ಕಲ್‍ನಲ್ಲಿ ಸಾಕಷ್ಟು ದಿನದಿಂದ ಕನ್ನಡ ಸಂಘಟನೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ರಸ್ತೆಯಲ್ಲಿಯೇ ರಂಗೋಲಿ ಹಾಕಿ, ರಸ್ತೆಯಲ್ಲಿ ಓಡಾಡೋ ಜನರಿಗೆ ಎಳ್ಳು ಬೆಲ್ಲ ಕೊಟ್ಟು, ಹಬ್ಬದ ಖಾದ್ಯವನ್ನು ಅಲ್ಲಿಯೇ ತಯಾರಿಸಿ ಭಿನ್ನವಾಗಿ ಕನ್ನಡ ಸಂಘಟನೆ ಕಾರ್ಯಕರ್ತರು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದರು.
Advertisement
Advertisement
ರಸ್ತೆಯಲ್ಲಿ ಹಬ್ಬ ಆಚರಿಸಿದ ಬಗ್ಗೆ ಮಾತನಾಡಿದ ಕಾರ್ಯಕರ್ತರು, ಹಬ್ಬ ಅಂದರೆ ಸಂಭ್ರಮವಿರುತ್ತದೆ. ಆದರೆ ನಾವು ಕನ್ನಡಕ್ಕಾಗಿ, ಕನ್ನಡಿಗರ ಅಭಿವೃದ್ಧಿಗಾಗಿ ಸಂಕ್ರಾಂತಿಯನ್ನು ಇಲ್ಲೇ ಆಚರಣೆ ಮಾಡುತ್ತಿದ್ದೇವೆ. ಮುಂದೆ ಸರೋಜಿನಿ ಮಹಿಷಿ ವರದಿ ಜಾರಿಯಾಗದೇ ಇದ್ದರೆ ತಿಥಿನೂ ಇಲ್ಲೇ ಮಾಡುತ್ತೇವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.