– ಸಿಎಂ ನಿವಾಸದೆದುರು ಪೇಚಿಗೆ ಸಿಲುಕಿದ ಕನ್ನಡಪರ ಕಾರ್ಯಕರ್ತರು
ಬೆಂಗಳೂರು: ಕನ್ನಡಪರ ಸಂಘಟನೆಯವರು ಎಂದು ಹೇಳಿಕೊಂಡು ಬಂದವರಿಗೆ ಸರೋಜಿನಿ ಮಹಿಷಿ ವರದಿ ಬಗ್ಗೆ ಗೊತ್ತಿಲ್ಲವಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಸರೋಜಿನಿ ಮಹಿಷಿ ವರದಿ ಸಂಬಂಧ ಚರ್ಚೆಗೆ ಸಿಎಂ ಯಡಿಯೂರಪ್ಪನವರು ಕನ್ನಡಪರ ಸಂಘಟನೆಗಳ ಮುಖಂಡರಿಗೆ ಮಾತುಕತೆಗೆ ಆಹ್ವಾನ ಕೊಟ್ಟಿದ್ದರು. ಆದರೆ ಬಂದ್ ಗೆ ಕರೆಕೊಟ್ಟ ಯಾವ ಸಂಘಟನೆಗಳ ಪ್ರತಿನಿಧಿಗಳೂ ಸಿಎಂ ಜೊತೆ ಮಾತುಕತೆಗೆ ಬರಲಿಲ್ಲ. ಬದಲಾಗಿ ಬಂದ್ ಗೆ ಬೆಂಬಲ ಇಲ್ಲದ ಕನ್ನಡಪರ ಸಂಘಟನೆಯೊಂದರ ಬೆರಳೆಣಿಕೆಯಷ್ಟು ಕಾರ್ಯಕರ್ತರು ಇವತ್ತು ಸಿಎಂ ಭೇಟಿಗೆ ಡಾಲರ್ಸ್ ಕಾಲೋನಿ ನಿವಾಸದ ಬಳಿ ಬಂದಿದ್ದರು. ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ.85 ಮೀಸಲಾತಿ ಕುರಿತು ಮುಂಬರುವ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಬೇಕು ಅನ್ನೋದು ಈ ಕನ್ನಡ ಸಂಘಟನೆ ಕಾರ್ಯಕರ್ತರ ಒತ್ತಾಯ ಆಗಿತ್ತು.
Advertisement
Advertisement
ಕೆಲ ಹೊತ್ತಿನ ಬಳಿಕ ಮುಖ್ಯಮಂತ್ರಿಗಳು ವಿಧಾನಸೌಧಕ್ಕೆ ಹೋಗಲು ಧವಳಗಿರಿ ನಿವಾಸದಿಂದ ಹೊರಬಂದರು. ಈ ವೇಳೆ ಕನ್ನಡಪರ ಕಾರ್ಯಕರ್ತರು ಎಂದು ಹೇಳಿಕೊಂಡವರು ಸಿಎಂಗೆ ತಮ್ಮ ಮನವಿ ಪತ್ರ ಕೊಟ್ಟು ಬಜೆಟ್ ನಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇ.85 ರಷ್ಟು ಮೀಸಲಾತಿಗೆ ಒತ್ತಾಯಿಸಿದರು. ಅಲ್ಲದೇ ಬಜೆಟ್ ನಲ್ಲಿ ಘೋಷಣೆ ಮಾಡಲಿಲ್ಲ ಅಂದ್ರೆ ವಿಧಾನಸೌಧದ ಮುಂದೆ ವಿಷ ಕುಡಿಯಬೇಕಾಗುತ್ತೆ ಎಂದೂ ಈ ಕನ್ನಡ ಪರ ಕಾರ್ಯಕರ್ತರು ಸಿಎಂ ಗೆ ಎಚ್ಚರಿಕೆ ನೀಡಿದರು. ಇವರ ಈ ಎಚ್ಚರಿಕೆಗೆ ಸಿಎಂ ಯಡಿಯೂರಪ್ಪ, ಹಾಗೆಲ್ಲ ಎಚ್ಚರಿಕೆ ಕೊಡೋಕೆ ಬರಬೇಡಿ ಎಂದು ಸಿಟ್ಟಾದ್ರು. ಸಿಟ್ಟಲ್ಲೇ ಸಿಎಂ ವಿಧಾನಸೌಧಕ್ಕೆ ತೆರಳಿದರು.
Advertisement
Advertisement
ಇವರಿಗೆ ಮಹಿಷಿ ವರದಿ ಬಗ್ಗೆ ಗೊತ್ತೇ ಇಲ್ಲವಾ?:
ಅಸಲಿ ವಿಷಯ ಈಗ ಇರೋದು. ಅಷ್ಟಕ್ಕೂ ಈ ಸಂಘಟನೆಯ ರಾಜ್ಯಾಧ್ಯಕ್ಷ ಅಂತ ಹೇಳಿಕೊಂಡಿರುವ ವ್ಯಕ್ತಿಗೇ ಸರೋಜಿನಿ ಮಹಿಷಿ ವರದಿ ಬಗ್ಗೆ ಮಾಹಿತಿ ಗೊತ್ತಿರಲಿಲ್ಲ. ಈ ಕನ್ನಡಪರ ಸಂಘಟನೆ ಮುಖಂಡರಿಗೆ ಮಹಿಷಿ ವರದಿ ಬಗ್ಗೆ ಮಾಹಿತಿ ಗೊತ್ತಿಲ್ಲದೇ ಸಿಎಂಗೆ ಮನವಿ ಕೊಡಲು ಬಂದು ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು. ಸಿಎಂ ಭೇಟಿ ಬಳಿಕ ಈ ಕನ್ನಡಪರ ಸಂಘಟನೆಯ ಅಧ್ಯಕ್ಷರಿಗೆ ಮಾಧ್ಯಮದವರು ಸರೋಜಿನಿ ಮಹಿಷಿ ವರದಿ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆದರೆ ಸಂಘಟನೆಯ ಅಧ್ಯಕ್ಷರಿಗೇ ಸರೋಜಿನಿ ಮಹಿಷಿ ಯಾರು, ಅವರ ವರದಿ ಯಾವಾಗ ಬಂತು ಅನ್ನೋ ಮಾಹಿತಿ ಗೊತ್ತಿಲ್ಲ. ಇನ್ನು ಮಹಿಷಿ ವರದಿ ಪರಿಷ್ಕರಣೆ ಯಾವಾಗಾಯ್ತು ಎಂಬುದೂ ಗೊತ್ತಿಲ್ಲ.
ಸರೋಜಿನಿ ಮಹಿಷಿ ವರದಿಯಲ್ಲಿರೋ ಶಿಫಾರಸ್ಸು ಅಂಶಗಳೂ ಈ ಸಂಘಟನೆ ಅಧ್ಯಕ್ಷರಿಗೆ ಗೊತ್ತಿಲ್ಲ. ವರದಿ ಅನುಷ್ಠಾನ ಯಾವಾಗಾಯ್ತು ಎಂದರೆ ಒಬ್ಬಬ್ಬರದ್ದೂ ಒಂದೊಂದು ಮಾತು. ಅಧ್ಯಕ್ಷ ಮಾಧ್ಯಮಗಳಿಗೆ ವರದಿ ಯಾವಾಗ ಆಯ್ತು ಅಂತ ತಪ್ಪು ಹೇಳ್ತಿದ್ರೆ, ಹಿಂದೆ ನಿಂತಿದ್ದ ಸಂಘಟನೆಯ ಇತರೇ ಕಾರ್ಯಕರ್ತರು ತಲೆ ತಲೆ ಚಚ್ಚಿಕೊಂಡ ಪ್ರಸಂಗವೂ ಸಹ ನಡೆಯಿತು.