ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮನವಿ ಮೇರೆಗೆ ನಾಳೆಯ ಕರ್ನಾಟಕ ಬಂದ್ ಅನ್ನು ಕೈ ಬಿಡಲಾಗಿದೆ.
ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಗಳ ಮುಂದೆ ಮಾತನಾಡಿದ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಬಂದ್ ಬೇಡ ಎಂದು ಸಿಎಂ ಎರಡು ಬಾರಿ ಮಾತಾಡಿದರು. ಎಂಇಎಸ್ ನಿಷೇಧ ಮಾಡುವ ಭರವಸೆ ನೀಡಿದರು. ಕಾನೂನು ಪ್ರಕಾರ ನಿಷೇಧ ಮಾಡಲು ಪ್ರಯತ್ನ ಮಾಡ್ತೀವಿ. ಬಂದ್ ಹಿಂಪಡೆಯಲು ಸಿಎಂ ಮನವಿ ಮಾಡಿದರು. ಅವರ ಮಾತಿಗೆ ಗೌರವ ಕೊಟ್ಟು ಬಂದ್ ವಾಪಸ್ ಪಡೆಯುವುದಾಗಿ ಹೇಳಿದರು.
Advertisement
Advertisement
ಇದೇ ವೇಳೆ ನನ್ನ ಜೀವನದಲ್ಲಿ ಈ ಬಾರಿಯ ಬಂದ್ ಮಾಡಲು ಹೋದಾಗ ತುಂಬಾ ಒತ್ತಡಗಳು ಬಂತು. ನಾಳೆ ರಾಜ್ಯದಲ್ಲಿ ಯಾವುದೇ ಬಂದ್ ಇರಲ್ಲ. ಎಂದಿನಂತೆ ನೀವು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದು. ಬಸ್ ಸಂಚಾರ ಸೇರಿ ಎಲ್ಲವೂ ಎಂದಿನಂತೆ ಇರಲಿದೆ ಎಂದು ವಾಟಾಳ್ ಹೇಳಿದರು. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ
Advertisement
Advertisement
ಹಲವು ಕನ್ನಡ ಪರ ಸಂಘಟನೆಗಳು ಸೇರಿದಂತೆ ಉದ್ಯಮ ವಲಯದ ಸಂಘಟನೆಗಳು, ನಿತ್ಯದ ದುಡಿಮೆಯನ್ನೇ ಆಧರಿಸಿದ ವಲಯಗಳ ಸಂಘಟನೆಗಳು ಬಂದ್ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಜೊತೆಗೆ ಈ ಸಂದರ್ಭದಲ್ಲಿ ಬಂದ್‍ಗೆ ಅವಕಾಶ ನೀಡೋದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದ ಸರ್ಕಾರ, ಕಡೆ ಕ್ಷಣದಲ್ಲಿ ಹೋರಾಟಗಾರರ ಜೊತೆ ಸಂಧಾನ ನಡೆಸಿತು. ಖುದ್ದು ಮುಖ್ಯಮಂತ್ರಿಗಳೇ ವಾಟಾಳ್ ನಾಗರಾಜ್, ಸಾರಾ ಗೋವಿಂದ್ ಸೇರಿ ಹಲವರ ಜೊತೆ ಸಭೆ ನಡೆಸಿದ್ದು, ಇದೀಗ ಸಭೆ ಯಶಸ್ವಿಯಾಗಿದೆ. ಇದನ್ನೂ ಓದಿ: ವೈಯಕ್ತಿಕ, ವ್ಯಕ್ತಿಗತವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತವೆ: ಜಗದೀಶ್ ಶೆಟ್ಟರ್