ಬೆಂಗಳೂರು: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಕನ್ನಡ ಸಂಘಟನೆಗಳು ಫೆ.19 ರಂದು ಕರ್ನಾಟಕ ಬಂದ್‍ಗೆ ಕರೆಕೊಟ್ಟಿವೆ.
ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬಂದ್ ನಡೆಯಲಿದ್ದು ಅಂದು ಬೆಳಗ್ಗೆ 10 ಘಂಟೆಗೆ ಟೌನ್ ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲು ಕನ್ನಡ ಸಂಘಟನೆಗಳು ಮುಂದಾಗಿವೆ.
Advertisement
Advertisement
ಹೋಟೆಲ್, ಖಾಸಗಿ ಬಸ್ಸುಗಳು, ಶಿಕ್ಷಣ ಸಂಸ್ಥೆಗಳು, ಪೆಟ್ರೋಲ್ ಬಂಕ್, ಬಿಡಿಎ, ನಗರ ಸಭೆ, ಐಟಿ-ಬಿಟಿ ಕಂಪೆನಿಗಳು ಮುಚ್ಚಬೇಕು. ಇಲ್ಲದಿದ್ದರೆ ಬಂದ್ ವೇಳೆ ಏನೇ ವ್ಯತ್ಯಾಸ ಆದರೂ ನಾವು ಹೊಣೆ ಅಲ್ಲ ಎಂದ ವಾಟಾಳ್ ನಾಗರಾಜ್ ಹೇಳಿದ್ದಾರೆ.
Advertisement
ಬಂದ್ ವಿರುದ್ಧ ಕಿಡಿ:
ಬಂದ್‍ಗೆ ಕರೆ ನೀಡಿದ್ದಕ್ಕೆ ಕನ್ನಡ ಸಂಘಟನೆಗಳಿಂದಲೇ ಆಕ್ರೋಶ ವ್ಯಕ್ತವಾಗಿದೆ. ಪ್ರತಿ ಬಾರಿಯೂ ವಾಟಾಳ್ ನಾಗರಾಜ್ ಬಂದ್‍ಗೆ ಕರೆ ನೀಡುತ್ತಾರೆ. ಆದರೆ ಈ ಬಂದ್ ಚಾಳಿಯಿಂದ ಯಾವುದೇ ಪ್ರಯೋಜನ ಇಲ್ಲ. ಹೀಗಾಗಿ ಬಂದ್‍ಗೆ ನಮ್ಮ ಸಂಪೂರ್ಣ ವಿರೋಧ ಇದೆ. ವಾಟಾಳ್ ನಾಗರಾಜ್ ನಮಗೆ ಗುರುಗಳು ಇದ್ದಹಾಗೆ. ಅವರು ಪ್ರತಿ ಬಾರಿ ಬಂದ್ ಮಾಡಿ ಸಾಧಿಸೋದಾದರೂ ಏನು? ಬಂದ್ ಮಾಡಿದರೆ ಪ್ರಯೋಜನವಿಲ್ಲ ಎಂದು ನಾಗೇಶ್ ಗೌಡ ಕಿಡಿಕಾರಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv