ಚಾಮರಾಜನಗರ: ಕನ್ನಡ ಅಕ್ಷರ ಶೈಲಿಗೆ ಬಂಡೀಪುರ ಹೆಸರಿನ ಹೊಸ ಫಾಂಟ್ ಸೇರ್ಪಡೆಗೊಂಡಿದೆ.
Advertisement
ಟಿ.ನರಸೀಪುರ ಮೂಲದ ಅನಿಮೇಷನ್ ಕೋರ್ಸ್ ಹಾಗು ಗ್ರಾಫಿಕ್ ಡಿಸೈನ್ ಶಿಕ್ಷಕ ಆರ್.ಮಂಜುನಾಥ್ ಬಂಡೀಪುರ ಹೆಸರಿನಲ್ಲಿ ಕನ್ನಡಕ್ಕೆ ಮತ್ತೊಂದು ಹೊಸ ಯುನಿಕೋಡ್ ಫಾಂಟ್ ವಿನ್ಯಾಸಗೊಳಿಸಿ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಪರ್ಯಾಯ ಅಂದ್ರೆ ಏನು? ಮಧ್ವಾಚಾರ್ಯರು ಕೊಟ್ಟಿರುವ ಅಕ್ಷಯ ಪಾತ್ರೆ, ಸಟ್ಟುಗವೇ ಅಧಿಕಾರ ಹಸ್ತಾಂತರಕ್ಕೆ ಅಂಕಿತ
Advertisement
Advertisement
ಆನೆಗಳಿಂದ ಪ್ರೇರಣೆ!
ಮಂಜುನಾಥ್ ಅವರು ತಮ್ಮ ಅಕ್ಷರ ಟೈಪ್ ಸ್ಟುಡಿಯೋದಿಂದ ಬಂಡೀಪುರ ಹೆಸರಿನಲ್ಲಿ ಹೊಸ ಫಾಂಟ್ ಬಿಡುಗಡೆ ಮಾಡಿದ್ದು, ಬಂಡೀಪುರದ ಆನೆಗಳಿಂದ ಪ್ರೇರಣೆಗೊಂಡು ಫಾಂಟ್ ರಚಿಸಿದ್ದಾರೆ. ಫಾಂಟ್ ಚೂಪಾದ ಅಂಚುನ್ನು ಎಷ್ಟು ಬೇಕಾದರು ಹಿಗ್ಗಿಸಬಹುದು. ದಪ್ಪ ಇರುವ ಈ ಹೊಸ ಯುನಿಕೋಡ್ ಫಾಂಟ್ ಆನೆಯ ದಂತ ಹಾಗು ಆನೆಯ ಸೊಂಡಿಲನ್ನು ಬಿಂಬಿಸುತ್ತಿದೆ.
Advertisement
ಕನ್ನಡ ಯುನಿಕೋಡ್ ನಲ್ಲಿ ಕೆಲವೇ ಕೆಲವು ಅಕ್ಷರ ಶೈಲಿಗಳು ಲಭ್ಯವಿದ್ದು, ಯುನಿಕೋಡ್ ಕನ್ನಡ ಫಾಂಟ್ ಕೊರತೆ ನೀಗಿಸುವ ಯತ್ನವಾಗಿ ಬಂಡೀಪುರ ಫಾಂಟ್ ಬಿಡುಗಡೆ ಮಾಡಲಾಗಿದೆ. ಕನ್ನಡದ ಜೊತೆಗೆ ಇಂಗ್ಲೀಷ್, ಲ್ಯಾಟಿನ್ ಲಿಪಿಗಳ ಸಹಾಯದಿಂದ ಬಂಡೀಪುರ ಫಾಂಟ್ ರಚನೆ ಮಾಡಲಾಗಿದೆ. ಶೀರ್ಷಿಕೆಗಳಿಗೆ ಬಳಸಲು, ದೊಡ್ಡಗಾತ್ರದಲ್ಲಿ ಬ್ಯಾನರ್ ಗಳಲ್ಲಿ ಬಳಸಲು ಉತ್ತಮ ಫಾಂಟ್ ಇದಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಸ್ಫೋಟ – 41,457 ಪಾಸಿಟಿವ್, ಬೆಂಗಳೂರಿನಲ್ಲಿ 25,595 ಕೇಸ್ ಪತ್ತೆ
ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ: https://aksharatypestudio.in/fonts/bandipura/