ಮುಂಬೈ/ಬೆಳಗಾವಿ: ಕನ್ನಡ ನಾಮಫಲಕ (Kannada Nameplate) ವಿಚಾರವಾಗಿ ಕರ್ನಾಟಕದೊಂದಿಗೆ ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ಕ್ಯಾತೆಗೆ ಮುಂದಾಗಿದೆ.
ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಿದ ರಾಜ್ಯ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಪ್ರಶ್ನಿಸಲು ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸರ್ಕಾರ ಸಜ್ಜಾಗ್ತಿದೆ. ಇದನ್ನೂ ಓದಿ: Loksabha Election 2024: ದೆಹಲಿಯಲ್ಲಿ ಕೈಗೆ 3 ಸ್ಥಾನ ಬಿಟ್ಟು ಕೊಟ್ಟು 4 ಸ್ಥಾನಗಳಲ್ಲಿ AAP ಸ್ಪರ್ಧೆ?
Advertisement
Advertisement
ವಿಧಾನ ಪರಿಷತ್‌ನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆ ಅಂಗೀಕರಿಸಿದ ಮರುದಿನವೇ ಅಂದ್ರೆ ಮುಂಬೈನಲ್ಲಿ ಸಭೆ ನಡೆಸಿದ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ, ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.
Advertisement
ಇದಕ್ಕೆ ಕನ್ನಡ ಸಂಸ್ಕೃತಿ ಸಚಿವರು ಪ್ರತಿಕ್ರಿಯಿಸಿ, ನಾವೇನು ಮಹಾರಾಷ್ಟ್ರದಲ್ಲಿ (Maharashtra) ಕನ್ನಡ ಬೋರ್ಡ್ ಹಾಕಿ ಅಂತಾ ಹೇಳಿಲ್ವಲ್ಲ ಎಂದಿದ್ದಾರೆ. ಮಹಾರಾಷ್ಟ್ರದವರು ಏನೇ ಕ್ಯಾತೆ ತೆಗೆದರೂ, ನಾಡು ನುಡಿ ಜಲದ ವಿಚಾರದಲ್ಲಿ ರಾಜೀ ಇಲ್ಲ, ನಮ್ಮ ರಾಜ್ಯದ ತಂಟೆಗೆ ಬಂದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: IPL ಸ್ಟಾರ್ ಜೊತೆ ಗೆಳೆತನ ಹೊಂದಿದ್ದ ರೂಪದರ್ಶಿ ನಿಗೂಢ ಸಾವು – ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
Advertisement
ಇನ್ನೂ, ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದ ತಕ್ಷಣವೇ ನಾಮಫಲಕದಲ್ಲಿ ಕನ್ನಡ ಕಡ್ಡಾಯ ನಿಯಮವನ್ನು ಬೆಂಗಳೂರಲ್ಲಿ ಜಾರಿ ಮಾಡುವಂತೆ ಬಿಬಿಎಂಪಿಗೆ ಶಿವರಾಜ್ ತಂಗಡಗಿ ಸೂಚಿಸಿದ್ದಾರೆ. ಇದನ್ನೂ ಓದಿ: 40,000 ರೈಲು ಬೋಗಿಗಳಿಗೆ ಸಿಗಲಿದೆ ವಂದೇ ಭಾರತ್‌ನಂತೆ ಹೈಟೆಕ್ ಸ್ಪರ್ಶ – ಏನೆಲ್ಲಾ ವಿಶೇಷತೆ ಇರಲಿದೆ?