ಐವರು ಹುಡ್ಗೀರ ನಡುವೆಯೊಂದು ಭಯಂಕರ ಸಸ್ಪೆನ್ಸ್ `ವುಮೆನ್ಸ್ ಡೇ’- ಏನಿದು ಕಹಾನಿ? ಹಾಗಾದ್ರೆ ಈ ವಿಡಿಯೋ ನೋಡಿ

Public TV
1 Min Read
womans day

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲೊಂದು ಹಾರರ್ ಆ್ಯಂಡ್ ಥ್ರಿಲರ್ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ನಿರ್ದೇಶಕ ಈಶ ಹಾಗೂ ಆರ್. ಜಿ. ಗೌಡ ನಿರ್ಮಾಣದಲ್ಲಿ ಆರ್.ಕೆ. ಮೋಷನ್ ಪಿಕ್ಚರ್ಸ್ ಲಾಂಚನದ ಮೂಲಕ ‘ವುಮೆನ್ಸ್ ಡೇ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.

ವುಮೆನ್ಸ್ ಡೇ ಸಿನಿಮಾದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್ ವಿಶೇಷ ಮತ್ತು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಾಯಕಿಯರಾಗಿ ಸ್ನೇಹ ನಾಯರ್, ಸನಿಹ, ಸುಹಾನ, ಅಕ್ಷರ ಹಾಗೂ ಮೊನಿಕಾ ಅಭಿನಯಿಸಿದ್ದಾರೆ.

WOMANS DAY 2

ಸಿಟಿಯಲ್ಲಿ ಬೆಳೆದ ಐವರು ಹುಡುಗಿಯರು ತಮ್ಮ ಪುನರ್ಜನ್ಮದ ಬಗ್ಗೆ ತಿಳಿದುಕೊಳ್ಳಲು ಹೊರಡುತ್ತಾರೆ. ಈ ಪುನರ್ಜನ್ಮದ ಸುಳಿವನ್ನು ಕಂಡುಹಿಡಿಯುವ ಮಾರ್ಗದಲ್ಲಿ ನಾಯಕಿಯರು ಅನುಭವಿಸುವ ವಿಚಿತ್ರ ಅನುಭವಗಳನ್ನು ಸಿನಿಮಾ ಒಳಗೊಂಡಿದೆ. ಇನ್ನೂ ನಾಯಕಿಯರು ತಮ್ಮ ಪುನರ್ಜನ್ಮ ಬಗ್ಗೆ ತಿಳಿದುಕೊಳ್ತಾರಾ ಅಥವಾ ವಿಚಿತ್ರ ಅನುಭವಗಳಿಂದ ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದನ್ನು ಸಿನಿಮಾ ನೋಡಿದಾಗ ಮಾತ್ರ ತಿಳಿಯುತ್ತದೆ.

WOMANS DAY 6

ಈಗಾಗಲೇ ಹಲವಾರು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶಕ ಈಶ್ವರ್ ಈಗ ಈಶನಾಗಿ ವುಮೆನ್ಸ್ ಡೇ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಗಂಗೂ ಎಂದು ಗುರುತಿಸಿಕೊಂಡಿರುವ ಆರ್.ಜಿ.ಗೌಡ ಸಿನಿಮಾದ ನಿರ್ಮಾಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇನ್ನೂ ಸಿನಿಮಾದಲ್ಲಿ ಹರ್ಷ ಸಂಗೀತದಲ್ಲಿ ಮೂರು ಹಾಡುಗಳು ಮೂಡಿಬಂದಿವೆ. ಚಿತ್ರಕ್ಕೆ ಡಿ.ಆರ್.ಕಾಲೇಜಿನ ಮುನಿಸ್ವಾಮಿ ಎಂಬ ಉಪನ್ಯಾಸಕರ ಲೇಖನದಿಂದ ಹಾಡೊಂದು ರಚಿತವಾಗಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸಿನಿಮಾದ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ವುಮೆನ್ಸ್ ಡೇ ಮುಂದಿನ ತಿಂಗಳು ಸೆಪ್ಟಂಬರ್ ನಲ್ಲಿ ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ.

https://www.youtube.com/watch?v=fsyN92imzUI

WOMANS DAY 4

WOMANS DAY 5

WOMANS DAY 7

WOMANS DAY 3

WOMANS DAY 1

WOMANS DAY 1

WOMANS DAY 2

 

 

Share This Article
Leave a Comment

Leave a Reply

Your email address will not be published. Required fields are marked *