ಕುಟುಂಬ ಕಲಹದ ಕಥೆ ಹೊತ್ತು ಬಂದ ವೆಡ್ಡಿಂಗ್ ಗಿಫ್ಟ್ ಟೀಸರ್

Public TV
1 Min Read
wedding gift 2

ಕೆಲವೊಂದಷ್ಟು ಸಿನಿಮಾಗಳು ಟೈಟಲ್‍ಗಳಿಂದ, ಮತ್ತೊಂದಷ್ಟು ಸಿನಿಮಾಗಳು ಸ್ಯಾಂಪಲ್ಸ್‍ನಲ್ಲಿಯೇ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಆದರೆ ವೆಡ್ಡಿಂಗ್ ಗಿಫ್ಟ್ ಸಿನಿಮಾ ಈ ಎರಡು ಬಗೆಯಿಂದಲೂ ಚಿತ್ರರಸಿಕರನ್ನು ಸೆಳೆಯುತ್ತಿದೆ. ಅದರಲ್ಲಿಯೂ ಈಗಷ್ಟೇ ಯೂಟ್ಯೂಬ್ ಪ್ರಪಂಚಕ್ಕೆ ಲಗ್ಗೆ ಇಟ್ಟ ವೆಡ್ಡಿಂಗ್ ಗಿಫ್ಟ್ ಟೀಸರ್ ಸಿನಿಮಾದ ಗಟ್ಟಿತನವನ್ನು ತೋರಿಸಿದೆ.

wedding gift 3

ಮದುವೆ ನಂತರ ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಮೂಡುವುದು. ನಾನು ಎಂಬುವುದು ಸಂಸಾರದಲ್ಲಿ ಬಂದಾಗ ಅದು ಯಾವೆಲ್ಲಾ ರೀತಿ ಬದುಕಿಗೆ ತಿರುವು ನೀಡುತ್ತದೆ. ತಮ್ಮ ರಕ್ಷಣೆಗಾಗಿ ಇರುವ ಕಾನೂನುಗಳನ್ನು ಬಳಸಿಕೊಂಡು ಗಂಡು ಮಕ್ಕಳಿಗೆ ಹೇಗೆಲ್ಲಾ ಹೆಣ್ಣುಮಕ್ಕಳು ಹಿಂಸೆ ನೀಡುತ್ತಾರೆ ಎಂಬ ಸೂಕ್ಷ್ಮ ಕಂಟೆಂಟನ್ನು ಟೀಸರ್‍ನಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಇದನ್ನೂ ಓದಿ: ಕನ್ನಡದ ಬಹುತೇಕ ದಿಗ್ಗಜರ ಜೊತೆ ನಟಿಸಿರುವ ನಟ ಉದಯ್ ಹುತ್ತಿನಗದ್ದೆ ನಿಧನ

wedding gift

ವಿಕ್ರಂ ಪ್ರಭು ಚೊಚ್ಚಲ ನಿರ್ದೇಶನವಾದರೂ ಪಳಗಿದ ನಿರ್ದೇಶಕನಂತೆ ತಮ್ಮ ಚಾಕಚಕ್ಯತೆ ತೋರಿಸಿದ್ದು, ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನಿಭಾಯಿಸಿದ್ದಾರೆ. ಸೋನು ಗೌಡ, ನಿಶಾನ್ ನಾಣಯ್ಯ ನಾಯಕಿ-ನಾಯಕನಾಗಿ ಅಭಿನಯಿಸಿದ್ದು, ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ಸೇರಿದಂತೆ ಅನುಭವಿ ಕಲಾಬಳಗ ಈ ಸಿನಿಮಾದಲ್ಲಿದೆ. ಇದನ್ನೂ ಓದಿ: ಅಣ್ಣಾವ್ರ ಕುಟುಂಬದ ಜೊತೆಗಿನ ನೆನಪು ಹಂಚಿಕೊಂಡ ಕಮಲ್ ಹಾಸನ್

wedding gift 1

ಸ್ಯಾಂಡಲ್‍ವುಡ್‍ನಿಂದ ಕೆಲ ವರ್ಷ ದೂರವೇ ಉಳಿದಿದ್ದ ಪ್ರೇಮಾ ವೆಡ್ಡಿಂಗ್ ಗಿಫ್ಟ್ ಮೂಲಕ ಮತ್ತೆ ವಾಪಸ್ ಆಗಿದ್ದು, ಲಾಯರ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ. ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ಉದಯಲೀಲ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಸಿನಿಮಾಕ್ಕಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಹಾಡುಗಳ ಹವಾ ಹಾಗೇ ಇರುವ ಹೊತ್ತಿನಲ್ಲಿ ವೆಡ್ಡಿಂಗ್ ಗಿಫ್ಟ್ ಅಂಗಳದಿಂದ ಹೊರ ಬಂದಿರುವ ಟೀಸರ್ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *