ಎರಡನೇ ವಿಕ್ಟರಿಯಲ್ಲಿ ಡಬಲ್ ಫನ್ ಫಿಕ್ಸ್

Public TV
1 Min Read
Victory 2

ಬೆಂಗಳೂರು: ಸ್ಯಾಂಡಲ್‍ವುಡ್ ಅಧ್ಯಕ್ಷ ಶರಣ್ ಅಭಿನಯದ ವಿಕ್ಟರಿ-2 ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎರಡು ಲುಕ್ ನಲ್ಲಿ ಕಾಣಿಸಿಕೊಂಡಿರುವ ಶರಣ್ ಪ್ರೇಕ್ಷಕರಲ್ಲಿ ತೀವ್ರ ಕುತೂಹಲವನ್ನು ಹುಟ್ಟು ಹಾಕಿದ್ದಾರೆ.

ಮೊದಲ ವಿಕ್ಟರಿಯಲ್ಲಿ ಜನರನ್ನು ಹಾಸ್ಯದ ಕಚಗುಳಿಯಲ್ಲಿ ತೇಲಿಸಿದ್ದ ಶರಣ್ ಮತ್ತೊಮ್ಮೆ ಅದೇ ಶೀರ್ಷಿಕೆಯಲ್ಲಿ ರಂಜಿಸಲು ಬರಲಿದ್ದಾರೆ. ಹಾಸ್ಯಮಯ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಪ್ರೇಕ್ಷಕರಿಗೆ ಡಬಲ್ ಮನರಂಜನೆಯ ಭರವಸೆಯನ್ನು ಮೂಡಿಸಿದೆ.

Apoorva

ಫಸ್ಟ್ ಲುಕ್‍ನಲ್ಲಿ ಶರಣ್ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಂದರಲ್ಲಿ ವೈಟ್ ಆ್ಯಂಡ್ ವೈಟ್ ಶರ್ಟ್, ಪಂಚೆ ತೊಟ್ಟು ಮಿಂಚಿದರೆ, ಇನ್ನೊಂದರಲ್ಲಿ ಮಾಸ್ ಲುಕ್‍ನಲ್ಲಿ ಕಂಡಿದ್ದಾರೆ. ಇದನ್ನು ಓದಿ: ಈ ಸಲವಾದರೂ ಸಿಗಲಿದೆಯಾ ಅಪೂರ್ವ ವಿಕ್ಟರಿ?

ಶರಣ್‍ಗೆ ನಾಯಕಿಯಾಗಿ ಅಪೂರ್ವ, ಅಸ್ಮಿತಾ ಸೂದ್ ಜೊತೆಯಾಗಿದ್ದಾರೆ. ರವಿಶಂಕರ್, ಸಾಧುಕೋಕಿಲಾ, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ವಿಕ್ಟರಿಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ತರುಣ್ ಸುದೀರ್ ಕಥೆ ಬರೆದಿದ್ದು, ಅಲೆಮಾರಿ ಸಂತು ನಿರ್ದೇಶನ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *