ಮಾಸ್ ಪ್ರೇಕ್ಷಕರಿಗಾಗಿ ಹೊರ ಬಂತು ‘ಟಕ್ಕರ್’ ಟೀಸರ್

Public TV
1 Min Read
Takkar F

– ದಾಸನ ಗರಡಿ ಹುಡುಗನ ಟಕ್ಕರ್

ಬೆಂಗಳೂರು: ಚಂದನವನದಲ್ಲಿ ಪ್ರತಿ ದಿನ ವಿಭಿನ್ನ ಕಥಾನಕವುಳ್ಳ ಹಲವು ಸಿನಿಮಾಗಳು ಸೆಟ್ಟೇರುತ್ತವೆ. ಕೆಲವು ತಿಂಗಳ ಹಿಂದೆ ಸೆಟ್ಟೇರಿದ್ದ ಟಕ್ಕರ್ ಚಿತ್ರ ಪಕ್ಕಾ ಮಾಸ್ ಪ್ರೇಕ್ಷಕರನ್ನು ಗಮನದಲ್ಲಿರಿಸಿ ತಯಾರಿಸಲಾಗಿದೆ ಎಂದು ಟೀಸರ್ ಹೇಳುತ್ತಿದೆ. ಇಂದು ಬೆಳಗ್ಗೆ ಟಕ್ಕರ್ ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು ಗಾಂಧಿ ನಗರದಲ್ಲಿ ಹೊಸ ಸಂಚಲನ ಸೃಷ್ಟಿಸುವ ತವಕದಲ್ಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋದರಳಿಯ ಮನೋಜ್ ಟಕ್ಕರ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ನೀಡುತ್ತಿದ್ದಾರೆ. ಈ ಮೊದಲೇ ಸಿನಿಮಾ ಭರಪೂರ ಆ್ಯಕ್ಷನ್ ಸೀನ್‍ಗಳಿಂದ ಕೂಡಿರಲಿದೆ ಎಂದು ಚಿತ್ರತಂಡ ತಿಳಿಸಿತ್ತು. ನೀನು ಟಕ್ಕರ್ ಕೊಡಲು ಬಂದಿರೋದು ದಾಸನ ಗರಡಿ ಹುಡುಗನ ಜೊತೆ ಎಂಬ ಪಂಚಿಂಗ್ ಡೈಲಾಗ್ ಮೂಲಕ ಟೀಸರ್ ಆರಂಭಗೊಳ್ಳುತ್ತದೆ. ಇದೀಗ ಟೀಸರ್ ಸಿನಿ ಅಂಗಳದಲ್ಲಿ ಭರವಸೆಯನ್ನು ಹುಟ್ಟಿಸಿದೆ. ಇದನ್ನೂ ಓದಿ :  EXCLUSIVE: ದರ್ಶನ್ ಸೋದರಳಿಯ ‘ಟಕ್ಕರ್’ ಮನೋಜ್ ಫೈಟ್ ನೋಡಿ!

Takkar 1.jpg

ಮನೋಜ್ ತಮ್ಮ ಆ್ಯಕ್ಷನ್ ಸೀನ್ ಗಳಲ್ಲಿ ಮಾಸ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿ ಆಗುತ್ತಾರೆ ಎಂಬುವುದು ಚಿತ್ರತಂಡದ ನಂಬಿಕೆ. ಅಂತೆಯೇ ಮನೋಜ್ ಸಹ ಸಹಜ ನಟನೆಯ ಮೂಲಕ ಟೀಸರ್ ನಲ್ಲಿ ಅಬ್ಬರಿಸಿದ್ದಾರೆ. ಆ್ಯಕ್ಷನ್ ಜೊತೆ ಸಿನಿಮಾದ ಮುದ್ದಾದ ಪ್ರೇಮ ಕಥೆಯನ್ನು ಹೊಂದಿದೆ. ಮನೋಜ್ ಜೊತೆಯಾಗಿ ಪುಟ್ಟ ಗೌರಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ನಟಿಸಿದ್ದಾರೆ. ಇದನ್ನೂ ಓದಿ :  ಟಕ್ಕರ್ ಸೆಟ್ಟಿಗೆ ಬಂದ್ರು ದಿನಕರ್ ತೂಗುದೀಪ!

ವಿ.ರಘು ಶಾಸ್ತ್ರಿ ನಿರ್ದೇಶನದಲ್ಲಿ ಟಕ್ಕರ್ ಮೂಡಿ ಬಂದಿದ್ದು, ಕೆ.ಎನ್.ನಾಗೇಶ್ ಕೋಗಿಲು ನಿರ್ಮಾಣವಿದೆ. ಈ ಹಿಂದೆ ಟಕ್ಕರ್ ಶೂಟಿಂಗ್ ಸೆಟ್ ಗೆ ಕುಟುಂಬ ಸಮೇತರಾಗಿ ದಿನಕರ್ ತೂಗುದೀಪ್ ಭೇಟಿ ನೀಡಿದ್ದರು. ಅಂದು ಸೃಜನ್ ಲೋಕೇಶ್ ಕೂಡಾ ತಮ್ಮ ಬ್ಯುಸಿ ಕೆಲಸ ಕಾರ್ಯಗಳ ನಡುವೆಯೂ ದಿನಕರ್ ಅವರ ಜೊತೆ ಬಂದು ಟಕ್ಕರ್ ಚಿತ್ರತಂಡಕ್ಕೆ ಹುರುಪು ತುಂಬಿದ್ದರು. ಇದನ್ನೂ ಓದಿ : ‘ಟಕ್ಕರ್’ಗಾಗಿ ಬಂತು ಫ್ಯಾಂಟಮ್!

https://www.youtube.com/watch?v=ie-xeBo4DA4

Share This Article
Leave a Comment

Leave a Reply

Your email address will not be published. Required fields are marked *