ಬಹುಭಾಷಾ ನಟಿ ವೇದಿಕಾ (Actress Vedhika) ಕನ್ನಡದ ಹುಡುಗಿಯಾದರೂ ಹುಟ್ಟಿ ಬೆಳೆದಿದ್ದು ಬಾಂಬೆಯಲ್ಲಿ. ಹೀಗಾಗಿ ಸಖತ್ ಬೋಲ್ಡ್ ಅವತಾರದಲ್ಲಿ ಆಗಾಗ ದರ್ಶನ ಕೊಡ್ತಾರೆ. ಮಾಡೆಲ್ ಕಮ್ ನಟಿಯಾಗಿರುವ ವೇದಿಕಾ ಈ ಬಾರಿ ಸಖತ್ ಹಾಟ್ ಆಗಿ ಕಂಗೊಳಿಸಿದ್ದಾರೆ. ಪಡ್ಡೆ ಹುಡುಗ್ರ ನಿದ್ದೆಗೆ ಕತ್ತರಿ ಹಾಕುತ್ತಿದ್ದಾರೆ.

ಸಮುದ್ರದ ಕಿನಾರೆಯಲ್ಲಿ ನಿಂತು ವಿವಿಧ ಸ್ಟೈಲ್‌ನಲ್ಲಿ ಪೋಸ್ ಕೊಟ್ಟ ವೇದಿಕಾ, ಬ್ಲ್ಯಾಕ್ ಕಲರ್ ಬಿಕಿನಿ ತೊಟ್ಟು ಕಣ್ಮನ ಸೆಳೆದಿದ್ದಾರೆ. ಫೋಟೋಶೂಟ್‌ನ ವಿಡಿಯೋವನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೇದಿಕಾ ಈ ಹಾಟ್ ಅವತಾರಕ್ಕೆ ಫ್ಯಾನ್ಸ್ ಕಣ್ಣು ಮಿಟುಕಿಸದೇ ನೋಡುತ್ತಿದ್ದಾರೆ.ಇದನ್ನೂ ಓದಿ: ನ.28 ಕ್ಕೆ ‘ಆಪರೇಷನ್ ಲಂಡನ್ ಕೆಫೆ’ ರಾಜ್ಯಾದ್ಯಂತ ತೆರೆಗೆ
View this post on Instagram
ತಮಿಳು ಸಿನಿಮಾ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ವೇದಿಕಾ ತೆಲುಗು ಹಾಗೂ ಕನ್ನಡದ ಶಿವಲಿಂಗ ಸಿನಿಮಾದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ವೇದಿಕಾ ಈ ವಿಡಿಯೋಗೆ ಜಾಲತಾಣದಲ್ಲಿ ವೆರೈಟಿ ವೆರೈಟಿ ಕಮೆಂಟ್ಸ್‌ಗಳು ಬರುತ್ತಿವೆ.
