ಬೆಂಗಳೂರು: ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರ ಇದೇ ಆಗಸ್ಟ್ ಹದಿನೈದರಂದು ಬಿಡುಗಡೆಯಾಗಲು ರೆಡಿಯಾಗಿದೆ. ಭುವನ್ ಪೊನ್ನಣ್ಣ ನಾನಾ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿರೋ ರೀತಿ, ಕಥೆಯ ಬಗ್ಗೆ ಚಿತ್ರತಂಡ ಜಾಹೀರು ಮಾಡಿರೋ ಒಂದಷ್ಟು ಸುಳಿವುಗಳ ಮೂಲಕವೇ ರಾಂಧವ ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಇನ್ನೇನು ಬಿಡುಗಡೆಗೆ ಒಂದಷ್ಟು ದಿನಗಳು ಬಾಕಿಯಿರುವಾಗಲೇ ರಾಂಧವನ ಆಡಿಯೋ ಲಾಂಚ್ ಮಾಡಲಾಗಿದೆ. ಈ ಕಾರ್ಯಕ್ರಮದ ಮೂಲಕವೇ ಚಿತ್ರತಂಡ ಐತಿಹಾಸಿಕ ಹೆಜ್ಜೆಯೊಂದರ ಮೂಲಕ ಗಮನ ಸೆಳೆದಿದೆ.
Advertisement
ಸಿನಿಮಾಗಳ ಯಾವುದೇ ಸಮಾರಂಭವಿದ್ದರೂ ಅಲ್ಲಿ ತಾರೆಯರದ್ದೇ ಕಾರುಬಾರು. ಆಡಿಯೋ ಬಿಡುಗಡೆಯಂಥಾದ್ದಕ್ಕೂ ಸ್ಟಾರ್‍ಗಳನ್ನು ಮಾತ್ರವೇ ಕರೆಸುವಂಥಾ ಪರಿಪಾಠವೂ ಬೆಳೆದು ಬಂದಿದೆ. ಆದರೆ ರಾಂಧವ ತಂಡ ಆಡಿಯೋ ಬಿಡುಗಡೆ ಮಾಡಿಸಿರೋದು ಈ ನಾಡಿನ ಅನ್ನದಾತರಾದ ರೈತರು ಮತ್ತು ದೇಶ ಕಾಯಲು ಬದುಕನ್ನೇ ಮುಡಿಪಾಗಿಟ್ಟಿರುವ ಯೋಧರಿಂದ. ಈ ಮೂಲಕ ರಾಂಧವ ಚಿತ್ರತಂಡ ಹೊಸ ಪರಂಪರೆಗೆ ನಾಂದಿ ಹಾಡಿದೆ.
Advertisement
Advertisement
ಹೀಗೆ ಹೊಸ ರೀತಿಯಲ್ಲಿ, ರೈತರು ಮತ್ತು ಯೋಧರು ಬಿಡುಗಡೆಗೊಳಿಸಿರೋ ರಾಂಧವ ಚಿತ್ರದ ಹಾಡುಗಳಿಗೆ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳೇ ಬರುತ್ತಿವೆ. ಈವರೆಗೂ ಗಾಯಕರಾಗಿದ್ದ ಶಶಾಂಕ್ ಶೇಷಗಿರಿ ತಮ್ಮ ಗೆಳೆಯ ಸುನೀಲ್ ಆಚಾರ್ಯ ನಿರ್ದೇಶನ ಮಾಡಿರೋ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿಯೂ ಬಡ್ತಿ ಹೊಂದಿದ್ದಾರೆ. ಈ ಮೊದಲ ಹೆಜ್ಜೆಯಲ್ಲಿಯೇ ತಾಜಾತನದಿಂದ ಕೂಡಿರುವ ಸಂಗೀತದ ಪಟ್ಟುಗಳೊಂದಿಗೆ ಹಾಡುಗಳನ್ನು ಕಟ್ಟಿ ಕೊಡುವ ಮೂಲಕ ಭರವಸೆಯನ್ನೂ ಮೂಡಿಸಿದ್ದಾರೆ. ನಿರ್ದೇಶಕ ಸುನೀಲ್ ಆಚಾರ್ಯರ ಕಥೆಗೆ, ಕಲ್ಪನೆಗೆ ಪೂರಕವಾಗಿ ಮೂಡಿ ಬಂದಿರೋ ಈ ಹಾಡುಗಳು ಸೂಪರ್ ಹಿಟ್ ಆಗುವತ್ತ ಮುನ್ನುಗ್ಗುತ್ತಿವೆ.