ಬೆಂಗಳೂರು: ಸಿನಿಮಾ ಅಂದರೇನು ಅಂತೊಂದು ಪ್ರಶ್ನೆ ಮುಂದಿಟ್ಟರೆ ಸಾವಿರ ಮಂದಿಯಿಂದ ಸಾವಿರ ಥರದ ವ್ಯಾಖ್ಯಾನಗಳು ಉತ್ಪತ್ತಿಯಾಗಬಹುದು. ಆದರೆ ಅದೆಲ್ಲದರ ಪ್ರಧಾನ ಸಾರ ಮನರಂಜನೆ. ತಮ್ಮ ದಿನನಿತ್ಯದ ಜಂಜಾಟದ ನಡುವೆ ನಿರಾಳವಾಗೋದಕ್ಕಾಗಿಯೇ ಥೇಟರಿಗೆ ಬರುವ ಪ್ರೇಕ್ಷಕರನ್ನು ಖುಷಿಗೊಳಿಸೋದನ್ನೇ ಮೂಲ ಮಂತ್ರವಾಗಿಸಿಕೊಂಡು ತಯಾರಾಗಿರೋ ಚಿತ್ರ ‘ಪಾದರಸ’.
ಸಂಚಾರಿ ವಿಜಯ್ ನಟನೆಯ ಪಾದರಸ ಆರ್ಟ್ ಆಂಡ್ ಸೋಲ್ ಮೀಡಿಯಾದ ಕನಸು. ಸಮಾನ ಮನಸ್ಕ ಸ್ನೇಹಿತರು ಸೇರಿಕೊಂಡು ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಚಿತ್ರಗಳನ್ನು ಕೊಡಬೇಕೆಂಬ ಉದ್ದೇಶದಿಂದಲೇ ಅಸ್ತಿತ್ವ ಪಡೆದುಕೊಂಡಿರುವ ಈ ಸಂಸ್ಥೆಯ ಚೊಚ್ಚಲ ಕಾಣಿಕೆಯಾಗಿ ಪಾದರಸ ಚಿತ್ರ ರೂಪುಗೊಂಡಿದೆ.
ಈ ಸಂಸ್ಥೆಯ ನಿರ್ಮಾತೃಗಳು ಸಂಚಾರಿ ವಿಜಯ್ ಅವರು ರಾಷ್ಟ್ರ ಪ್ರಶಸ್ತಿ ಪಡೆದ ಘಳಿಗೆಯಿಂದಲೂ ಅವರೊಂದಿಗೆ ಸಂಪರ್ಕದಲ್ಲಿದ್ದರಂತೆ. ಅವರಿಗೆಲ್ಲ ವಿಜಯ್ ಅವರ ನಟನೆಯ ಕಸುವೇನೆಂಬುದು ಗೊತ್ತಿತ್ತು. ಅದ್ಯಾವ ಪಾತ್ರವನ್ನೇ ಆದರೂ ನಿಭಾಯಿಸುವ ಛಾತಿಯಿರುವ ವಿಜಯ್ ಅವರನ್ನು ಡಿಫರೆಂಟಾದ ಗೆಟಪ್ಪಿನಲ್ಲಿ ಕಾಣಿಸುವಂತೆ ಮಾಡಬೇಕೆಂದು ಬಹು ಕಾಲದಿಂದಲೂ ಅಂದುಕೊಂಡಿದ್ದವರು ಪಾದರಸ ಚಿತ್ರದ ಮೂಲಕ ಅದನ್ನು ನನಸಾಗಿಸಿಕೊಂಡಿದ್ದಾರೆ.
ನಾನು ಅವನಲ್ಲ ಅವಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ವಿಜಯ್ ಅವರನ್ನು ನೋಡಿರೋ ಪ್ರೇಕ್ಷಕರಿಗೆ ಪಾದರಸ ಖಂಡಿತವಾಗಿಯೂ ಸರ್ ಪ್ರೈಸ್ ಪ್ಯಾಕೇಜ್ ಎಂಬುದು ಚಿತ್ರ ತಂಡದ ಭರವಸೆ. ವಾರವಿಡೀ ಕೆಲಸ, ಸಂಸಾರ, ಜಂಜಾಟ ಅಂತ ನಜ್ಜುಗುಜ್ಜಾದ ಮನಸುಗಳ ತುಂಬಾ ಸಂಚಾರಿ ವಿಜಯ್ ಅಭಿನಯದ ಪಾದರಸ ಹರಿದಾಡಿ ಮುದ ನೀಡೋದು ಗ್ಯಾರೆಂಟಿ ಎಂಬ ನಂಬಿಕೆ ಚಿತ್ರ ತಂಡದ್ದು.
https://www.youtube.com/watch?v=JGCBJqzOa_I
https://www.youtube.com/watch?v=x-qwgkhfLTA