ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಕವಚ ಜನವರಿಯಲ್ಲಿ ತೆರೆ ಕಾಣಲಿದೆ. ಶಿವಣ್ಣ ಅಂಧನಾಗಿ ನಟಿಸಿರೋ ಈ ಚಿತ್ರ ಮತ್ತು ಆಡಿಯೋ ಹಕ್ಕುಗಳೀಗ ದಾಖಲೆ ಮೊತ್ತಕ್ಕೆ ಮಾರಾಟವಾಗಿವೆ.
ಈಗಾಗಲೇ ಸ್ಯಾಂಡಲ್‍ವುಡ್ ತುಂಬಾ ಸೆನ್ಸೇಷನ್ ಸೃಷ್ಟಿಸಿರೋ ಕವಚ ಚಿತ್ರದ ಹಕ್ಕುಗಳನ್ನು ಖಾಸಗಿ ವಾಹಿನಿಯೊಂದು ಬರೋಬ್ಬರಿ ಮೂರೂವರೆ ಕೋಟಿಗೆ ಖರೀದಿಸಿದೆ. ಇದರ ಆಡಿಯೋ ಹಕ್ಕುಗಳು 42 ಲಕ್ಷಕ್ಕೆ ಮಾರಾಟವಾಗಿದೆ. ಕನ್ನಡ ಚಿತ್ರಗಳ ಮಟ್ಟಿಗೆ ಇದು ನಿಜಕ್ಕೂ ದಾಖಲೆಯ ಮೊತ್ತ. ಈ ಮೂಲಕ ಕವಚ ಬಿಡುಗಡೆಗೂ ಮುನ್ನವೇ ಆರ್ಥಿಕವಾಗಿ ಗೆದ್ದಿದೆ.
Advertisement
Advertisement
ಜಿಆರ್ ವಾಸು ನಿರ್ದೇಶನದ ಕವಚ ಮಲೆಯಾಳದ ಸೂಪರ್ ಹಿಟ್ ಚಿತ್ರ ‘ಒಪ್ಪಂ’ ರೀಮೇಕ್. ಆದರೆ ವಾಸು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕಥೆಯನ್ನು ಒಗ್ಗಿಸಿಕೊಂಡು ನಿರ್ದೇಶನ ಮಾಡಿದ್ದಾರಂತೆ. ಇದುವರೆಗೂ ನಾನಾ ಥರದ ಪಾತ್ರಗಳನ್ನು ನಿರ್ವಹಿಸಿರುವ ಶಿವಣ್ಣನ ಪಾಲಿಗೂ ಇದು ವಿಶಿಷ್ಟವಾದ ಚಿತ್ರ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv