ಬೆಂಗಳೂರು: ದುಡ್ಡೊಂದಿದ್ದರೆ ಸಕಲ ಸುಖಗಳೂ ಕಾಲ ಬುಡದಲ್ಲಿ ಮುದುರಿ ಮಲಗುತ್ತವೆ ಅನ್ನೋ ಮನಸ್ಥಿತಿ ಅನೇಕರಿಗಿದೆ. ಆದರೆ ದುಡ್ಡು ಕಾಸಿನಾಚೆಗೆ ಸಿಗೋ ಪ್ರೀತಿ, ನೆಮ್ಮದಿಯೇ ಬದುಕೆಂಬ ಸತ್ಯ ಅನೇಕರ ಅರಿವಿಗೆ ಬಂದಿರೋದಿಲ್ಲ. ಇಂಥಾದ್ದೊಂದು ಸೂಕ್ಷ್ಮ ಎಳೆಯಲ್ಲಿಟ್ಟುಕೊಂಡು ರೂಪುಗೊಂಡಿರುವ ಮಧುರವಾದ ಕಥೆಯನ್ನು ಕದ್ದುಮುಚ್ಚಿ ಚಿತ್ರ ಒಳಗೊಂಡಿದೆ.
ಈಗಿನ ಕಾಲಮಾನದ ಕೆಲ ಪೋಷಕರಲ್ಲಿಯೂ ದುಡ್ಡೇ ದೊಡ್ಡದು ಎಂಬಂಥಾ ಭ್ರಮ ಇದೆ. ಇದೇ ಮನಸ್ಥಿತಿಯಲ್ಲಿಯೇ ತಮ್ಮ ಮಕ್ಕಳ ಎಳೇ ಮನಸುಗಳನ್ನವರು ಪದೇ ಪದೆ ಘಾಸಿಗೊಳಿಸುತ್ತಿರುತ್ತಾರೆ. ಹಾಗೆಯೇ ನೋವುಣ್ಣುತ್ತಾ ಬೆಳೆದ ಹುಡುಗನೊಬ್ಬ ಎಲ್ಲ ಸಂಪತ್ತನ್ನೂ ಕಡೆಗಣಿಸಿ ಪ್ರೀತಿಯನ್ನಷ್ಟೇ ಅರಸಿ ಹೊರಡೋ ಯುವಕನೊಬ್ಬನ ಸುತ್ತಲಿನ ಕಥೆ ‘ಕದ್ದುಮುಚ್ಚಿ’ ಚಿತ್ರದ್ದು.
Advertisement
Advertisement
ಹಾಗೆ ಪ್ರೀತಿಯನ್ನರಸಿ ಹೊರಡೋ ಹುಡುಗನ ಮುಂದೆ ಮಲೆನಾಡ ದೇವತೆಯಂಥಾ ಹುಡುಗಿಯೊಬ್ಬಳು ಎದುರಾಗುತ್ತಾಳೆ. ಆ ನಂತರ ಹುಡುಗನ ಬದುಕು ಹೇಗೆ ಬದಲಾಗುತ್ತೆ, ಆತ ಅರಸಿ ಹೊರಟ ಪ್ರೀತಿ ಸಿಗುತ್ತದಾ ಎಂಬುದು ಕಥೆಯ ಜೀವಾಳ. ಆದರೆ ಒಟ್ಟಾರೆ ಸಿನಿಮಾದಲ್ಲಿ ಊಹಿಸಲಾರದ ತಿರುವುಗಳಿವೆ. ಮನಸಾರೆ ನಗುವಂಥಾ ಕಾಮಿಡಿ, ಮೈನವಿರೇಳಿಸೋ ಸಾಹಸ ಮತ್ತು ನೇರವಾಗಿ ಎದೆಗೇ ನಾಟಿಕೊಳ್ಳುವಂಥಾ ಭಾವನಾತ್ಮಕ ವಿಚಾರಗಳೂ ಇವೆಯಂತೆ. ಇಂಥಾ ಹತ್ತಾರು ವೈಶಿಷ್ಟ್ಯಗಳನ್ನ ಹೊಂದಿರೋ ಈ ಚಿತ್ರ ಬಿಡುಗಡೆಯ ಹಾದಿಯಲ್ಲಿದೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv