ಬೆಂಗಳೂರು: ಎಸ್ ಆರ್ ಎಸ್ ಲಾಂಛನದಲ್ಲಿ ತಯಾರಾಗಿರುವ ಮನರಂಜನಾತ್ಮಕ ಚಿತ್ರ ‘ಡಬಲ್ ಇಂಜಿನ್’ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ ಬಾಂಬೆ ಮಿಠಾಯಿ ನಿರ್ದೇಶನ ಮಾಡಿ ಯಶಸ್ವಿ ನಿರ್ದೇಶಕ ಎನಿಸಿಕೊಂಡ ಚಂದ್ರ ಮೋಹನ್ ಈ ಚಿತ್ರವನ್ನೂ ಸಂಪೂರ್ಣ ಮನರಂಜನೆಯ ಅಂಶಗಳೊಂದಿಗೆ ತಯಾರು ಮಾಡಿದ್ದಾರೆ.
ಅರುಣ್ ಕುಮಾರ್ ಎನ್, ಶ್ರೀಕಾಂತ್ ಮಠಪತಿ, ಮಂದಾರ ಎ, ಮಧು ಎಸ್ ಆರ್ ಎಸ್ ಶುಂಠಿ ಕಾಫಿ, ಮಂಜುನಾಥ್ ನಂಜಪ್ಪ, ಪದ್ಮ ಕೃಷ್ಣಮೂರ್ತಿ, ರಾಜು ಪಟೇಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಉದಯ್ ಕೆ ಮೆಹ್ತಾ ಅವರು ಈ ಚಿತ್ರದ ವಿತರಣೆಯನ್ನು ಮಾಡುತ್ತಿದ್ದಾರೆ.
ಸುಮನ್ ರಂಗನಾಥ್, ಚಿಕ್ಕಣ್ಣ, ಅಶೋಕ್, ಪ್ರಭು, ಪ್ರಿಯಾಂಕ ಮಲ್ನಾಡ್, ಸಾಧು ಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ತಾರಾಗಣದ ಈ ಚಿತ್ರದಲ್ಲಿ ಮೂವರು ಯುವಕರು ಹಳ್ಳಿಯಲ್ಲಿ ವ್ಯವಸಾಯವನ್ನು ಬಿಟ್ಟು ಬಹುಬೇಗ ಶ್ರೀಮಂತರಾಗಲು ಹೊರಟು ಅನುಭವಿಸುವ ಸಂದರ್ಭಗಳು ಪ್ರಮುಖವಾದವು. ಸೂರ್ಯ ಕಿರಣ್ ಛಾಯಾಗ್ರಹಣ, ವೀರ್ ಸಮರ್ಥ ಸಂಗೀತ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.
ಇದೇ ವಾರ ಅಥರ್ವ ಬರುತ್ತಿದ್ದಾನೆ: ಅಥರ್ವ ಚಿತ್ರದ ಮೂಲಕ ಅರ್ಜುನ್ ಸರ್ಜಾ ಕುಟುಂಬದಿಂದ ಬರುತ್ತಿರುವ ಮತ್ತೊಬ್ಬ ನಾಯಕ. ಅವರೇ ಪವನ್ ತೇಜ. ಮಹಾ ಸಿಂಹ ಮೂವೀಸ್ ಅಡಿಯಲ್ಲಿ ವಿನಯ್ ಕುಮಾರ್ ಎಚ್ ನಿರ್ಮಾಣ ಮಾಡಿರುವ ಈ ಚಿತ್ರದ ನಿರ್ದೇಶಕರು ಅರುಣ್. ರಕ್ಷಯ್ ಎಸ್ ವಿ ಸಹ ನಿರ್ಮಾಪಕರು. ಇದನ್ನೂ ಓದಿ: ಅಥರ್ವ ನಾಯಕ ಪವನ್ ತೇಜಾಗೆ ಅರ್ಜುನ್ ಸರ್ಜಾ ಹೇಳಿದ್ದ ಕಿವಿ ಮಾತೇನು?
ಹಲವು ತಾಕತ್ತುಗಳ ಸಂಗಮವನ್ನು ಪ್ರಥಮ ಪ್ರಯತ್ನದಲ್ಲೇ ಪವನ್ ತೇಜ ನಿಭಾಯಿಸುತ್ತಿದ್ದಾರೆ. ಸನಮ್ ಶೆಟ್ಟಿ ಈ ಚಿತ್ರದ ಕಥಾ ನಾಯಕಿ. ರಂಗಾಯಣ ರಘು, ತಾರಾ, ಧರ್ಮೇಂದ್ರ ಅರಸ್, ಯಶ್ವಂತ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ, ಟಾಮಿ ರವಿ, ನಿಶಾಂತ್, ಚೇತನ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ರಾಘವೇಂದ್ರ ಸಂಗೀತ ನಿರ್ದೇಶನ, ಶಿವ ಸೇನಾ ಛಾಯಾಗ್ರಹಣ, ಮೋಹನ್ ನೃತ್ಯ, ರಾಜು ಕಲಾ ನಿರ್ದೇಶನ, ಸಂತೋಷ್ ಎಂ ಸಂಭಾಷಣೆ, ವಿಜೇತ ಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ.