ಕನ್ನಡ ಚಿತ್ರರಂಗವೀಗ ಹೊಸ ಪ್ರಯತ್ನಗಳಿಂದ ಕಳೆಗಟ್ಟಿಕೊಂಡಿದೆ. ಇದನ್ನು ಮತ್ತಷ್ಟು ಮಿರುಗಿಸುವಂಥಾ ಚಿತ್ರಗಳೇ ಅಡಿಗಡಿಗೆ ತೆರೆಗಾಣುತ್ತಿರುವುದರಿಂದ ಕನ್ನಡದತ್ತ ಪರಭಾಷಾ ಚಿತ್ರರಂಗದ ಮಂದಿಯೂ ಬೆರಗಾಗಿ ನೋಡುವಂಥಾ ವಾತಾವರಣವನ್ನು ಸೃಷ್ಟಿಸಿದೆ. ಅದೇ ಸಾಲಿನಲ್ಲಿ ಮೂಡಿ ಬಂದಿರುವ ಚಿತ್ರ ಬಬ್ರೂ. ಇದು ಕನ್ನಡದಲ್ಲಿ ಇಂಥಾ ಚಿತ್ರವನ್ನೂ ರೂಪಿಸಲು ಸಾಧ್ಯವಾ ಎಂಬ ಪ್ರಶ್ನೆ ಕಾಡುವಷ್ಟು ಅಚ್ಚುಕಟ್ಟುತನದಿಂದ, ಹೊಸ ಪ್ರಯೋಗಗಳಿಂದ ರೂಪುಗೊಂಡಿರುವ ಚಿತ್ರ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕ ಪ್ರೇಕ್ಷಕರನ್ನೆಲ್ಲ ಆಕರ್ಷಿಸಿಕೊಂಡಿರುವ ಈ ಚಿತ್ರ ಇದೇ ಡಿಸೆಂಬರ್ 6ರಂದು ತೆರೆಗಾಣುತ್ತಿದೆ. ಅಚ್ಚರಿಯ ಸಂಗತಿಯೆಂದರೆ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಬರೆದು ಬಿಟ್ಟಿದೆ.
Advertisement
ಅಮೆರಿಕದ ಸಿನಿ ಲಾಂಚ್‍ನಲ್ಲಿ ಈ ಸಿನಿಮಾದ ಪ್ರೀಮಿಯರ್ ಶೋವನ್ನು ನವೆಂಬರ್ ಎರಡರಂದೇ ಏರ್ಪಡಿಸಲಾಗಿತ್ತು. ಅದಕ್ಕೆ ಸಿಕ್ಕ ಬೆಂಬಲ ಮತ್ತು ಸಿನಿಮಾ ನೋಡಿ ವ್ಯಕ್ತಪಡಿಸಿದ ಅಭಿಪ್ರಾಯಗಳೇಲ್ಲವೂ ಬಬ್ರೂ ಗೆಲುವನ್ನು ನಿಚ್ಚಳವಾಗಿಸುವಂತಿವೆ. ಸಿನಿಲಾಂಚ್ ಮಾಲ್‍ನ ಏಳೂ ಪರದೆಗಳಲ್ಲಿ ಬಬ್ರೂ ಪ್ರದರ್ಶನಗೊಂಡಿವೆ. ಇದರ ಟಿಕೆಟುಗಳೆಲ್ಲವೂ ಅತ್ಯಂತ ವೇಗವಾಗಿ ಸೇಲಾಗಿ ಭರ್ಜರಿ ಪ್ರದರ್ಶನವನ್ನೂ ಕಂಡಿದೆ. ಬಬ್ರೂವನ್ನು ನೋಡಿದವರೆಲ್ಲರೂ ಮೆಚ್ಚಿ ಕೊಂಡಾಡಿದ್ದಾರೆ. ಅಂದಹಾಗೆ, ಅಮೆರಿಕಾದ ಸಿನಿ ಲಾಂಚ್‍ನ ಅಷ್ಟೂ ಪರದೆಗಳಲ್ಲಿ ಪ್ರದರ್ಶನ ಕಂಡ, ಹೌಸ್ ಫುಲ್ ಆಗುವಂತೆ ನೋಡಿಸಿಕೊಂಡ ಕನ್ನಡದ ಮೊದಲ ಚಿತ್ರವಾಗಿ ಬಬ್ರೂ ದಾಖಲಾಗಿದೆ.
Advertisement
Advertisement
ಇದೊಂದು ಅನಿರೀಕ್ಷಿತ ಜರ್ನಿಯ ಕಥೆ. ಅದರಲ್ಲಿಯೇ ಪ್ರೀತಿ, ಪ್ರೇಮ ಮತ್ತು ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಕಥಾನಕ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಇದರ ಹೆಚ್ಚಿನ ಭಾಗ ಕಾರೊಳಗಿನ ಜರ್ನಿಯಲ್ಲಿಯೇ ಸಾಗುತ್ತದೆ. ಇದರಲ್ಲಿ ಈವರೆಗೆ ಯಾವ ಭಾಷೆಯ ಸಿನಿಮಾಗಳಲ್ಲಿಯೂ ಕಾಣಿಸದಿರುವಂಥಾ ಅಮೆರಿಕಾದ ಪ್ರದೇಶಗಳಿವೆ. ಕನ್ನಡಕ್ಕೆ ಅಪರೂಪದ್ದೆಂಬಂತೆ ಕಾಣುವ ಕಥೆಯೂ ಇದೆ. ಈ ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್ ನಗರ್‍ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ಬಬ್ರೂ ನಿರ್ಮಾಣಗೊಂಡಿದೆ. ಇಲ್ಲಿ ಸುಮನ್ ನಗರ್‍ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.