ಬೆಂಗಳೂರು: ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈಗ ಅವರು ಹಿರಿಯ ನಟಿ ಸುಹಾಸಿನಿ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.
ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಚಿತ್ರೀಕರಣ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಅಂಬರೀಶ್ ರಾಜಕೀಯ ಬಿಟ್ಟು ತಮ್ಮನ್ನು ತಾವು ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಚಿತ್ರದ ಶೂಟಿಂಗ್ ಸತತವಾಗಿ ನಡೆಯುತ್ತಿದೆ.
ಈಗ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್ ಕೇರಳದಲ್ಲಿ ನಡೆಯುತ್ತದೆ. ಕೇರಳದ ಕರಾವಳಿಯಲ್ಲಿ ಅಂಬರೀಶ್ ಮತ್ತು ನಟಿ ಸುಹಾಸಿನಿ ಅವರ ಪಾತ್ರದ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತದೆ. ಈ ವೇಳೆ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಇದು ಹಾಡಿನ ಶೂಟಿಂಗ್ ಎನ್ನಲಾಗಿದೆ.
ಈಗಾಗಲೇ ಚಿತ್ರತಂಡ ಬಹುತೇಕ ಅಂದರೆ ಸಿನಿಮಾದಲ್ಲಿ ಸುದೀಪ್ ಮತ್ತು ಶ್ರುತಿ ಹರಿಹರನ್ ಅವರ ಪಾತ್ರದ ಶೂಟಿಂಗ್ ಮುಗಿಸಿದ್ದು, ಚಿತ್ರೀಕರಣ ಅಂತಿಮ ಘಟ್ಟ ತಲುಪಿದೆ. ಈ ಸಿನಿಮಾದಲ್ಲಿ ನಟ ಅಂಬರೀಶ್ ನಾಯಕರಾಗಿದ್ದಾರೆ. ಅಂಬರೀಶ್ ಅವರು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದರು ಎಂಬ ಪಾತ್ರವನ್ನು ಸುದೀಪ್ ನಿರ್ವಹಿಸುತ್ತಿದ್ದಾರೆ.
`ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾವನ್ನು ಜ್ಯಾಕ್ ಮಂಜು ನಿರ್ಮಾಣ ಮಾಡುತ್ತಿದ್ದು, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ತಮಿಳಿನ `ಪವರ್ ಪಾಂಡಿ’ ಸಿನಿಮಾದ ಚಿತ್ರದ ರಿಮೇಕ್ ಆಗಿದೆ.