ಮೊಬೈಲ್ ಬಳಕೆ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಮಾರಕವೂ ಹೌದು. ಅದರಲ್ಲೂ ಯುವ ಜನತೆ ಈ ಜಂಗಮವಾಣಿಗೆ ದಾಸರಾಗಿ ಬಿಟ್ಟಿದ್ದಾರೆ. ಅರಿವಿಲ್ಲದೆ ಜೀವಕ್ಕೆ ಕುತ್ತು ತರಿಸಿಕೊಳ್ಳುವ ಹಂತವನ್ನು ಮುಟ್ಟಿದ್ದಾರೆ. ಪ್ರಸ್ತುತ ದಿನಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ಕ್ರೈಂ ಕೇಸ್ ಗಳು ಇದಕ್ಕೆ ಸಾಕ್ಷಿ. ಇದನ್ನೇ ಆಧಾರವಾಗಿಟ್ಟುಕೊಂಡು ನಟ ರಮೇಶ್ ಅರವಿಂದ್ ‘100’ ಸಿನಿಮಾವನ್ನು ನಿರ್ದೇಶಿಸಿದ್ದು, ಇದೇ ಸಿನಿಮಾ ಶುಕ್ರವಾರ ತೆರೆಗೆ ಬರಲು ಸಜ್ಜಾಗಿದೆ.
Advertisement
ಟ್ರೇಲರ್ ಮೂಲಕ ಭಾರೀ ಸಂಚಲನ ಸೃಷ್ಟಿಸಿರುವ ಸಿನಿಮಾ ‘100’. ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿರುವ ಸಾಮಾಜಿಕ ಜಾಲತಾಣಗಳಿಂದಾಗುವ ಅನಾಹುತಗಳನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರಕ್ಕೆ ಕಥೆ ಹೆಣೆಯಲಾಗಿದೆ. ಸಾಮಾಜಿಕ ಸಂದೇಶವನ್ನೊಳಗೊಂಡ ಈ ಚಿತ್ರಕ್ಕೆ ರಮೇಶ್ ಅರವಿಂದ ಆಕ್ಷನ್ ಕಟ್ ಹೇಳುವುದರ ಜೊತೆ ಚಿತ್ರದಲ್ಲಿ ನಾಯಕ ನಟನಾಗಿಯೂ ನಟಿಸಿದ್ದಾರೆ. ಇದನ್ನೂ ಓದಿ: ಅಮೆಜಾನ್‍ನಲ್ಲಿ ಸಿಹಿ ತುಳಸಿ ನೆಪದಲ್ಲಿ ಗಾಂಜಾ ಮಾರಾಟ
Advertisement
ಕೇವಲ ಸಂದೇಶವನ್ನು ಮುಟ್ಟಿಸಬೇಕು, ಜನರನ್ನು ಜಾಗೃತಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಸಜ್ಜಾದ ಸಿನಿಮಾಗಳು ಪ್ರೇಕ್ಷಕರ ಮನ ತಲುಪುವಲ್ಲಿ ವಿಫಲವಾದ ನಿದರ್ಶನಗಳು ಹಲವಿದೆ. ಇದನ್ನೆಲ್ಲ ಮನದಲ್ಲಿಟ್ಟುಕೊಂಡು ಪಕ್ಕಾ ಕಮರ್ಷಿಯಲ್ ಹಾದಿಯಲ್ಲಿ ಜನರಿಗೆ ಹಾಗೂ ಯುವ ಜನತೆಗೆ ತಲುಪಿಸಬೇಕಾದ ಸಂದೇಶವನ್ನು ಮುಟ್ಟಿಸಲು ರಮೇಶ್ ಅರವಿಂದ್ ಸಜ್ಜಾಗಿದ್ದಾರೆ. ಫ್ಯಾಮಿಲಿ ಥ್ರಿಲ್ಲರ್ ಹಾಗೂ ಸೈಬರ್ ಕ್ರೈಂ ಕಥಾಹಂದರ ಸಿನಿಮಾದಲ್ಲಿದ್ದು ರೋಚಕಗೊಳಿಸುವ ಹಾಗೂ ಸೀಟಿನಂಚಿನಲ್ಲಿ ಕೂರಿಸೋ ಥ್ರಿಲ್ಲಿಂಗ್ ಸನ್ನಿವೇಶಗಳು, ಟ್ವಿಸ್ಟ್ ಅಂಡ್ ಟರ್ನ್ ಗಳು ಚಿತ್ರದಲ್ಲಿವೆ. ಮನರಂಜನೆ ನೀಡುತ್ತಲೇ ಸಾಮಾಜಿಕ ಜಾಲತಾಣಗಳ ಭೀಕರ ಮುಖವನ್ನು ಅನಾವರಣ ಮಾಡುತ್ತಾ ಪ್ರೇಕ್ಷಕರ ಕಣ್ತೆರಸಲಿದೆ 100 ಸಿನಿಮಾ.
Advertisement
Advertisement
ಚಿತ್ರದಲ್ಲಿ ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯಾಗಿ ಹಾಗೂ ಹೆಂಡತಿ, ಮಗು, ತಂಗಿ, ತಾಯಿಯನ್ನೊಳಗೊಂಡ ಮುದ್ದಾದ ಕುಟುಂಬದ ಜವಾಬ್ದಾರಿಯುತ ವ್ಯಕ್ತಿಯ ಪಾತ್ರವನ್ನು ನಿಭಾಯಿಸಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್, ಪೂರ್ಣ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಿಶ್ವಕರ್ಣ, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ, ಮಾಲತಿ ಸುಧೀರ್, ಬೇಬಿ ಸ್ಮಯ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದೇ ಮೊದಲ ಬಾರಿಗೆ ರಮೇಶ್ ಅರವಿಂದ್ ಹೈವೋಲ್ಟೇಜ್ ಆಕ್ಷನ್ ಸೀಕ್ವೆಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ರವಿವರ್ಮ ಹಾಗೂ ಜಾಲಿ ಬಾಸ್ಟಿನ್ ಚಿತ್ರಕ್ಕೆ ಮೈ ನವಿರೇಳಿಸೋ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸತ್ಯ ಹೆಗಡೆ ಛಾಯಾಗ್ರಹಣ, ಶ್ರೀನಿವಾಸ್ ಕಲಾಲ್ ಸಂಕಲನ, ಧನಂಜಯ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಸೂರಜ್ ಪ್ರೊಡಕ್ಷನ್ ಬ್ಯಾನರ್ ನಡಿ ಎಂ ರಮೇಶ್ ರೆಡ್ಡಿ, ಉಮಾ ‘100’ ಸಿನಿಮಾ ನಿರ್ಮಾಣ ಮಾಡಿದ್ದು ನವೆಂಬರ್ 19ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.