ನನ್ನ ಅವಳ ಮೊದಲ ಭೇಟಿ ಮೆಟ್ರೋದಲ್ಲಿ (Namma Metro) ಅವತ್ತು ಹೇಳಿದ್ನಲ್ಲ…ಅದೇನೋ ಆಕಸ್ಮಿಕ… ಈ ಆಕಸ್ಮಿಕ ಭೇಟಿ ಇತ್ತೀಚೆಗೆ ಮತ್ತೆ ಮತ್ತೆ ಆಗ್ತಿದೆ..! ಅವತ್ತು ಘಂಟಾಘೋಷವಾಗಿ ಮತ್ತೆ ಅವಳೇನಾದ್ರೂ ಸಿಕ್ರೆ ಮಾತಾಡ್ಸಿ ಬಿಡ್ತೀನಿ, ನಂಬರ್ ಕೇಳಿ ಬಿಡ್ತೀನಿ ಅಂದವನಿಗೆ ಕಣ್ಣ ಸಂಭಾಷಣೆಗಷ್ಟೇ ಸ್ಟಾಪ್ ಆಗ್ಬಿಟ್ಟಿದೆ. ಅವಳ್ಯಾಕೆ ಮತ್ತೆ ಮತ್ತೆ ಸಿಗ್ತಾಳೆ? ಅದ್ಯಾಕೆ ಆ ಅಪರಿಚಿತ ಚಲುವೆ ನನ್ನನ್ನ ನೋಡಿ ಮಂದಹಾಸ ಬೀರ‍್ತಾಳೆ..? ಇದಕ್ಕೆಲ್ಲ ಅರ್ಥ ಇದಿಯಾ..?
ಮುಂದಿನ ಸಲ ನಿಜವಾಗಲೂ ಮಾತಾಡ್ಸೇ ಬಿಡ್ಲಾ..? ಏನಂತ ಮಾತಾಡ್ಸ್ಲಿ… ಆರಾಮಿದಿರಾ..? ಅವಳೇನು ನನ್ನ ಪರಿಚಯದವಳಲ್ಲ ಹೀಗೆ ಕೇಳೋಕೆ.. ಅವಳ ಹೆಸರನ್ನ ಕರೆದ್ಬಿಡ್ಲಾ? ಆದ್ರೆ ಹೆಸರೇ ಗೊತ್ತಿಲ್ಲ ಏನ್ಮಾಡ್ಲಿ..? ಮೆಟ್ರೋದಲ್ಲಿ ಮತ್ತೆ ಸಿಗ್ತಾಳೆ ಅಂದ್ಕೊಂಡೆ ಆದ್ರೆ ಮತ್ತೆ ಸಿಕ್ಕಿದ್ದು ದೇವಸ್ಥಾನದಲ್ಲಿ… ಅದಾದ ಮೇಲೆ ಪಾರ್ಕ್‌ಲ್ಲಿ.. ಹೀಗೆ ನಾನು ಹೋದಲ್ಲೇ ಅವಳು ಬರ್ತಿದಾಳಾ..? ಅವಳು ಹೋದಲ್ಲಿ ನಾನು ಹೋಗ್ತಿದಿನಾ? ಆದ್ರೆ ಕಂಡಾಗೆಲ್ಲ ಯಾಕೆ ಅವಳು ನಗ್ತಾಳೆ..? ಆ ನಗುವಿಗೆ ಕಾರಣ ಇದ್ದೇ ಇರತ್ತೆ ಅಲ್ವಾ..? ಇದನ್ನೂ ಓದಿ: ಪ್ರೀತಿಯೊಂದು ಹೂವಿನ ಹಾಗೇ… ಬಾಡೋ ಮಾತಿಲ್ಲ!

ಮೆಟ್ರೋದಲ್ಲಿ ಆದ ಕತೆ ಇನ್ನೂ ನೆನಪಿದಿಯಾ.. ಅದೇ ಪರಿಚಯನಾ..? ಅವಳನ್ನ ಕಂಡಾಗ ನನಗೂ ಆ ನಗು ಗೊತ್ತಿದ್ದೋ ಗೊತ್ತಿಲ್ದೇನೋ ಬಂದು ಬಿಡುತ್ತೆ.. ಅವಳಿಗೂ ಹಾಗೇ ಆಗಿರಬಹುದಲ್ವಾ..? ಸೋಷಿಯಲ್ ಮೀಡಿಯಾದಲ್ಲಿ ಅವಳೆಲ್ಲಾದ್ರೂ ಸಿಗಬಹುದಿತ್ತು.. ಹಾಗಾದ್ರೂ ಒಂದು ಮೆಸೆಜ್ ಹಾಕಿ ಮಾತಾಡ್ಸಿ.. ಮುಂದಿಂದು ಏನೋ ನೋಡಬಹುದಿತ್ತು. ಈ ಮಿಂಚು ಮಾಯೆಯ ಮೀನು ಕಣ್ಣಿನ ಬಲೆಗೆ ಬಿದ್ದು.. ಬುಟ್ಟಿಗೆ ಬೀಳದೆ ಕಾಡ್ತಿದೆ.!
ಹೀಗೆಲ್ಲ ಅದೆಷ್ಟೋ ಜನರಿಗೆ ಆಗಿರಬಹುದು ಅಲ್ವಾ..? ಒಂದೊಂದು ಸಲ ಯಾರನ್ನೋ ನೋಡಿದಾಗ ಇದ್ದಕ್ಕಿದ್ದಂತೆ ಅಸಹನೆ… ಆಗೋದು, ಅವರನ್ನ ಎಲ್ಲೋ ನೋಡಿದಿನಿ ಅಂತ ಫೀಲ್ ಆಗೋದು ಅಥವಾ ಯಾವುದೋ ಜಾಗಕ್ಕೆ ಹೋದಾಗ, ಈ ಜಾಗಕ್ಕೆ ಹಿಂದೆ ಬಂದಿದ್ದೆ ಅಂತ ಅನ್ನಿಸ್ತಿರುತ್ತೆ.. ಇದೆಲ್ಲ ಪೂರ್ವ ಜನ್ಮದ ಕಥನಗಳ ನಂಟಿನದ್ದೂ ಎಂಬ ಮಾತಿದೆ. ಹಾಗೇ ಈ ನಮ್ಮಿಬ್ಬರ ಕಣ್ ಕಣ್ಣ ಸಲಿಗೆ ಕೂಡ ಇರಬಹುದು ಅಲ್ವಾ? ಅದಕ್ಕೆ ಈ ರೀತಿ ಪದೇ ಪದೇ ಸೇರಿಸ್ತಿರಬಹುದು.. ಮಾತಾಡುವ ಅವಕಾಶ ಅದಾಗೇ ಸೃಷ್ಟಿ ಆಗುತ್ತಾ? ಅಥವಾ ನಾವೇ ಸೃಷ್ಟಿಸಿಕೊಳ್ಬೇಕಾ..? ಹೀಗೆಲ್ಲ ಪ್ರಶ್ನೆ ನನ್ನ ತಲೆಯಲ್ಲಿ.. ಅವಳಿಗೂ ಹೀಗೆಲ್ಲ ಅನ್ನಿಸಿರಬಹುದಾ? ಅವಳೂ ಮಾತಾಡೋಕೆ ಕಾಯ್ತಾ ಇರಬಹುದಾ? ಅದಕ್ಕೊಂದು ಅವಕಾಶ ಸಿಗಬಹುದಿತ್ತು! ಇದನ್ನೂ ಓದಿ: ಅವತ್ತು ನೆಟ್ಟ ಪಾರಿಜಾತ ಗಿಡ ಹೂ ಬಿಟ್ಟಿದೆ ಗೋಪಾಲ…!

ನೋಡಿದ ಕೂಡಲೇ ಆ ಕಣ್ಣು ನಗುವಲ್ಲೇ ಮಾತಾಡುತ್ತೆ..! ಆದ್ರೆ ಇಬ್ಬರ ಮನಸ್ಸಿಗೂ ಇದೆಲ್ಲ ಕೇಳತ್ತೆ .. ಆದ್ರೆ ಈ ಬಾಯಿಗೆ ಏನಾಗಿದೆ ಮಾತಾಡೋಕೆ? ಹೌದಲ್ವಾ ಎಷ್ಟೋ ವಿಚಾರಗಳು ಹೃದಯ.. ಮನಸ್ಸಿಗೆ ಅದೆಷ್ಟು ಬೇಗ ಸಿಕ್ಕಿ ಬಿಡುತ್ತೆ ಅಲ್ವಾ..? ಅದೆಷ್ಟೋ ಮಾತುಗಳು ಹೃದಯದಲ್ಲಿ ಉಳಿದು ಕೊನೆಗೆ ಬಾಯಲ್ಲಿ ಬರುವಾಗ ತುಂಬಾ ತಡವಾಗಿ ಬಿಡುತ್ತೆ… ʻಡಾ. ನಂದಿನಿಗೆ… ವಿಷ್ಣುವರ್ದನ್ʼ (Dr. Vishnuvardhan) ಹೇಳಿದ ಹಾಗೆ..! ಆದಕ್ಕೆ ತುಂಬಾ ತಡ ಮಾಡ್ಬಾರದು..
ಹೌದು ಹೀಗೆಲ್ಲ ಅನ್ಸಿದ್ಮೇಲೂ.. ಮಾತಾಡೋಕೆ ಏನಾದ್ರೂ ಕಾರಣ ಬೇಕಲ್ಲ… ಆ ಸಂದರ್ಭ ಅದಾಗೇ ಬರಲಿ… ಇದನ್ನೆಲ್ಲ ನನ್ನ ಫ್ರೆಂಡ್ಸ್ ಹತ್ರ ಹೇಳಿದ್ರೆ.. ಯಾಕ್ ತಲೆ ಕೆಡುಸ್ಕೋತಿಯಾ ಇಷ್ಟ ಇದ್ರೆ ಒಪ್ಕೋತಾಳೆ.. ಇಲ್ದಿದ್ರೆ ಇಲ್ಲ.. ಹೋಗಿ ಹೇಳ್ಬಿಡು ಅಂತಾರೆ.. ಹಾಗೆಲ್ಲ ಆಗಲ್ಲ.. ಕೊನೆ ಪಕ್ಷ ನನ್ನ ಪ್ರೇಮ ನಿವೇದನೆ ಹೇಗಿರಬ್ಬೇಕು ಅಂದ್ರೆ… ಕೊನೆ ಪಕ್ಷ.. ಅವಳ ಪ್ರೀತಿ ಸಿಗದೇ ಇದ್ರೂ.. ಕಡೇ ಪಕ್ಷ ಸ್ನೇಹಿತನಾಗಾದ್ರೂ ಉಳಿಬೇಕು.. ಯಾರಿಗಾದ್ರೂ ʻಅಪಾಯಿಂಟ್ಮೆಂಟ್ ವಿತ್ ಲವ್ʼ ನೆನಪಿರಬಹುದು.. ಅದರ ಕಥಾನಾಯಕ ಹೀಗೆ ಬಯಸಿ.. ಸಕ್ಸಸ್ ಆಗ್ತಾನೆ..
ಹೀಗೆ ಪ್ರೇಮಕ್ಕೆ ಅದೆಷ್ಟೋ ಮುಖಗಳು.. ನಗು.. ಮಾತು.. ಗೆಜ್ಜೆಯ ದನಿ.. ಕವಿತೆ.. ಹಾಡು.. ಇದೆಲ್ಲ ಗೊತ್ತಿಲ್ಲದ ಜೀವದೊಳಗೂ (Love) ಪ್ರೇಮವಿದೆ.. ಪ್ರೇಮದ ಜೋಡಿ ಇದೆ.. ಅದೇನೋ ಎಲ್ಲವನ್ನೂ ಮೀರಿದ ಆತ್ಮೀಯತೆ.. ವಿವರಿಸಲಾಗದ ವಿವರಣೆ..! ಹಾಗೇ ಅವಳು ಸಹ ಈ ಬರಹಕ್ಕೂ ಮೀರಿದ ಸಾಲು..! ಎದುರು ಸಿಕ್ಕಾಗ ಮೌನಕ್ಕೂ ಮೀರಿದ ಮಾತು..! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?

