ಹಾಯ್..
ತೇಜಸ್ವಿ ಅದೆಷ್ಟು ಪ್ರಾಕ್ಟಿಕಲ್ ಆಗಿ ಯೋಚಿಸಿದ್ರೂ.. ನಿನ್ನ ಪ್ರೇಮದ ಹುಚ್ಚು ಈಗೀಗ ನನ್ನನ್ನೂ ಅತಿಯಾಗಿ ಕಾಡ್ತಿದೆ..! ನಿನ್ನ ಪ್ರೇಮದ ಅಲೆಯ ಅಬ್ಬರಕ್ಕೆ ನಾನು ಕರಗಿ ಹೋಗ್ತೀನೇನೋ ಅನ್ನೋ ಭಯ ಕಾಡುತ್ತೆ. ಇದಕ್ಕೆ ಭಯ ಅಂತ ಪದ ಬಳಸಬಹುದಾ? ನೀನೇ ಹೇಳು?
ನೀನು ಪದಗಳನ್ನ ಮಾತ್ರ ಪೋಣಿಸಿ ನನಗೆ ಪತ್ರ ಬರಿತಿಯೋ..? ಹೃದಯಾನೇ ಅಲ್ಲಿ ತಂದು ತೆರೆದಿಡ್ತಿಯೋ ಅದೆಷ್ಟು ಗೊಂದಲ..? ನೀನ್ಯಾಕೆ ನನ್ನ ಪಾಲಿಗೆ ಅಸ್ಪಷ್ಟ…? ಪ್ರೇಮ ಅನ್ನೋದೇ ಹೀಗೆನಾ ಅಂತ? ನಾನೇ ಗೊಂದಲದಲ್ಲಿ ಇದಿನಾ..? ಈ ಸಾಲುಗಳನ್ನ ಮತ್ತೆ ಓದಿದ್ರೆ ಏನೋ ಕನ್ಫ್ಯೂಷನ್! ಇದನ್ನೂ ಓದಿ: ಏಯ್ ಹುಡುಗ.. ನನಗೆಲ್ಲ ಗೊತ್ತು ಕಣೋ..!
ನೀನು ಬರೆದಿದ್ದೆಲ್ಲ ಒಂದು ಸಲ ಓದಿದ್ರೆ ಸಾಕು.. ಅರ್ಥ ಆಗತ್ತೆ.. ಅದನ್ನ ಓದುವಾಗ ನಿನ್ನ ಧ್ವನಿ ಕೇಳ್ಸುತ್ತೆ.. ಅದಕ್ಕಾಗಿ ಪದೇ ಪದೇ ಓದೋ ಹುಚ್ಚು..! ನಾನೆಷ್ಟೇ ಪ್ರಾಕ್ಟಿಕಲ್ ಆದ್ರೂ ನನಗೂ ಮನಸ್ಸಿದೆ, ಹೃದಯ ಇದೆ.. ಅದೆಲ್ಲ ನಿನ್ನ ಪ್ರೇಮದ ಕಡಲಲೆಗೆ ಸಿಕ್ಕು ಕರಗುವ ಹಂತಕ್ಕೆ ಈಗಷ್ಟೇ ತಲುಪಿದೆ! ಆದ್ರೂ ಅನುಮಾನವಿದೆ ತೇಜಸ್ವಿ…. ನಿನ್ನ ಬಾಯಲ್ಲಿ ದಿನ, ವಿಭಾ ಟೀ ತಗೋ ಬಾ, ಊಟ ಹಾಕು ಬಾ ಅಂತ ಕರೆಸಿಕೊಳ್ತಿನಾ ಅಂತ?
ಇದೆಲ್ಲಾ ಭ್ರಮೆನಾ? ಆಸೆನಾ? ನಿನ್ನ ಮೇಲಿನ ವ್ಯಾಮೋಹನಾ? ಅದ್ಯಾಕೆ ಬಂದೆ ನನ್ನ ಮುಂದೆ.. ಆ ಚಿಗುರು ಮೀಸೆ.. ಕುರುಚಲು ಗಡ್ಡ ಬಿಟ್ಟು.. ನೋಡು ನಾನೆಷ್ಟು ಕಳೆದು ಹೋಗ್ತಿದಿನಿ.. ಹೀಗೆಲ್ಲ ನಾನು ಪತ್ರಕ್ಕೆ ಮತ್ತೆ ಉತ್ತರ ಬರೆದಿದ್ದೇ ಇಲ್ಲ.. ಶಾಲೆ, ಕಾಲೇಜಲ್ಲಿ ನೋಟ್ಸ್‌ನ್ನೇ ಬರಿತಿರಲಿಲ್ಲ.. ನಿನ್ನ ಪತ್ರಕ್ಕೆ ಉತ್ತರ ಬರೆಯೋ ಹಾಗೇ ಮಾಡ್ಬಿಟ್ಟೆ.. ನೀನು!
ಇಷ್ಟೆಲ್ಲ ಶಕ್ತಿ ಇದಿಯಾ ಈ ಪ್ರೇಮಕ್ಕೆ? ನಾನೆಲ್ಲೋ ವಾಸ್ತವದಿಂದ ದೂರ ಸರಿತಾ ನಿನ್ನ ಹಾಗೇ ಕವಿ ಅಲಿಯಾಸ್ ಕಪಿ ಆಗ್ತಿದಿನಾ ಅಂತ ಅನುಮಾನ? ನಾನು ಪ್ರಾಕ್ಟಿಕಲ್ ಅಂತ ಪೋಸ್ ಕೊಟ್ಟು ಇವತ್ತಿಗೆ ಎರಡು ವಾರ, ನೀನು ಅಷ್ಟೇ ನನ್ನನ್ನ ಪ್ರಾಕ್ಟೀಕಲ್ ಅಂತ ಒಪ್ಪಿಕೊಂಡು ಇವತ್ತಿಗೆ ಒಂದು ವಾರ ಆಯ್ತು.. ಈ ಒಂದೇ ವಾರದಲ್ಲಿ ಈ ಪ್ರಾಕ್ಟಿಕಲ್ ಅನ್ನೋ ಗೋಡೆ ಕುಸಿತ ಇದೆ. ಇದಕ್ಕೆ ತಾಕುತ್ತಿರುವ ಆ ಪ್ರೇಮದ ಜಡಿ ಮಳೆಯೇ ಕಾರಣಾನಾ ಅಂತ..?
ಇಂತಹ ಪ್ರೇಮದ ಮಳೆಯಲ್ಲಿ, ಗಾರ್ಡನ್‌ಲ್ಲಿ ಕೂತು ಬಿಸಿ ನೀರು ಟೀ ಪುಡಿ ಥರ ಬೆರೆತು ಬಿಡೋಣ.. ಆ ಚಹಾದ ಘಮವೇ ಬೇರೆ..! ನೋಡು ನಿನ್ನದೇ ಶೈಲಿಯ ಅಕ್ಷರ.. ನನಗೂ ಗಿಫ್ಟ್ ಕೊಟ್ಬಿಟ್ಟೆ ನೀನು! Any Way Thank You… ನನಗೂ ಪ್ರೀತಿ ಅಂದ್ರೆ ಏನು ಅಂತ ಅರ್ಥ ಮಾಡ್ಸಿದ್ಕೆ.. ಹಾಗಂಥ ಇದು ಒಪ್ಪಿಗೆನೋ.. ಒಂದಾಗೇ ಬಿಡ್ತೀವಿ ಅನ್ನೋ ಭ್ರಮೆಯ ಮುದ್ರೆಯಲ್ಲ! ಇದನ್ನೂ ಓದಿ: ಬೆಳಗುವ ದೀಪದಂತೆಯೆ ನೀನೆಷ್ಟು ಪ್ರಾಕ್ಟಿಕಲ್!
ಮತ್ತೆ ಹೇಳ್ತಿದಿನಿ ತೇಜಸ್ವಿ ʻಪ್ರೀತಿ ಅಂದ್ರೆ, ಪ್ರೀತಿ ಅಷ್ಟೇʼ ಒಂದಾಗಲೇ ಬೇಕು… ಒಟ್ಟಿಗೆ ಕೊನೆವರೆಗೂ ಇದ್ದು ಬಿಡಬೇಕು ಎಂಬ ಜಿದ್ದಲ್ಲ..! ಯುದ್ಧವಲ್ಲ…! ಜಸ್ಟ್, ಪ್ರೀತಿ ಅಂದ್ರೆ ಪ್ರೀತಿ…!!



