ಪ್ರೀತಿಯ… ಗೆಳೆಯ ನಿನಗೆ ಹೇಳಲೇ ಬೇಕಿತ್ತು… ಅದಕ್ಕೆ ಗಟ್ಟಿ ನಿರ್ಧಾರ ಮಾಡಿ ನಿನಗೆ ಈ ಸಾಲುಗಳನ್ನು ತಲುಪಿಸುತ್ತಿದ್ದೇನೆ. ನನಗೆ ನೀನಿಷ್ಟು ಆಪ್ತನಾಗ್ತಿಯ ಅಂತ ಗೊತ್ತಾಗಲೇ ಇಲ್ಲ.. ರಾಜಣ್ಣನ ಅಂಗಡಿಯಲ್ಲಿ ಕುಡಿದ ಒಂದೇ ಟೀ.. ನಮ್ಮನ್ನು ಅದೆಷ್ಟು ಆಳಕ್ಕೆ ಕೊಂಡೊಯ್ತು.. ಹಾಗಂತ ಇದು ಮುಳುಗುವ ಆಳವಲ್ಲ.. ತೇಲುವ ಆಳ!
ಈಗೀಗ ನೀನು ಮನದ ಮೂಲೆಯಲ್ಲಿ ಮತ್ತಷ್ಟು ಆಪ್ತನಾಗಿ ಬಂದು ನಿಲ್ತಿದಿಯಾ… ಅದೆಷ್ಟೋ ಬಾರಿ ಚುಂಬಿಸಿದಷ್ಟು.. ಅದೆಷ್ಟೋ ಬಾರಿ ನನ್ನನ್ನು ಗಟ್ಟಿಯಾಗಿ ಅಪ್ಪಿದಂತೆ.. ಇದೆಲ್ಲ ನನಗೆ ಮಾತ್ರ ಅನ್ಸುತ್ತಾ..? ನಿನಗೂ ಹೀಗೆಲ್ಲ ಅನ್ಸಿದಿಯಾ? ಹಾಗೇನಾದ್ರೂ ಇದ್ರೆ ಹೆದರಬೇಡ ಹೇಳ್ಬಿಡು.. ನೀನು ಆಗಾಗ ರೇಗಿಸಲು ಹೇಳುವ ರಾಕ್ಷಸಿ ನಾನಲ್ಲ..! ಇದನ್ನೂ ಓದಿ: ನಿನ್ನ ಬಲೆಗೆ ಬಿದ್ದ ಮೀನು ನಾನು…!
ನೀನು ನನ್ನ ಜೀವನದ ಅವಶ್ಯಕತೆಗಳಲ್ಲಿ ಒಂದು… ಅದನ್ನ ಹೀಗೆಲ್ಲ ಪದಗಳಲ್ಲಿ ಬರೆದೋ.. ಕವಿತೆಯಲ್ಲಿ (Poem) ಕಟ್ಟಿ.. ಹಾಡಲ್ಲಿ ಹೇಳಿಬಿಡೋದಲ್ಲ.. ಅದೆಲ್ಲ ಬದುಕೋದು.. ನಾನು ನಿನ್ನ ಪ್ರೀತಿಗಾಗಿಯೇ (Love) ಬದುಕೋದು… ನನ್ನ ಎದೆಯಂಗಳದಲ್ಲಿ ಒಲವ ರಂಗೋಲಿ (Rangoli) ಬಿಡಿಸಿಟ್ಟ ನಿನ್ನ ಕಲೆಗೆ ಕೋಟಿ ನಮನ..! ಇದನ್ನೂ ಓದಿ: ಇದಕ್ಕೆಲ್ಲ ಯಾವ ಸಂಬಂಧದ ಹೆಸರಿಡ್ಬೇಡ ಪ್ಲೀಸ್!
ನಾನಂತೂ ನಿನ್ನ ಒಲವಿನ ನೌಕೆಯ ಪ್ರಯಾಣದಲ್ಲಿದ್ದೇನೆ.. ಆದಷ್ಟು ಬೇಗ ಜೊತೆಯಾಗು… ನಾವಿಕನಾಗಿ..! ಇದನ್ನೂ ಓದಿ: ಹೃದಯದಂಗಳಕೆ ಒಲವ ರಂಗೋಲಿ ನೀನು..!


