ಕೆನಡಾ ಸಂಸತ್ತಿನಲ್ಲಿ ಕನ್ನಡದ ಕಂಪು ಬೀರಿದ ಚಂದ್ರ ಆರ್ಯ ಮನೆಯಲ್ಲಿ ಸಂತಸ

Advertisements

ಬೆಂಗಳೂರು: ನಮ್ಮ ನಾಡಿನಲ್ಲಿ ಹುಟ್ಟಿ ಬೆಳೆದು ದೂರದ ಕೆನಡಾದಲ್ಲಿ ಮೂರನೇ ಬಾರಿಗೆ ಸಂಸದರಾಗಿರುವ ಚಂದ್ರ ಆರ್ಯ ಅವರು, ಇಂದು ಮಾತೃಭಾಷೆ ಕನ್ನಡದಲ್ಲಿ ಕೆನಡಾ ಸಂಸತ್ತಿನಲ್ಲಿ ಮಾತನಾಡಿದ್ದಾರೆ. ಈ ಮೂಲಕ ಇಡೀ ಕನ್ನಡಿಗರಲ್ಲಿ ಹೆಮ್ಮೆಯ ಪುತ್ರ ಚಂದ್ರ ಆರ್ಯ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.

Advertisements

ತುಮಕೂರು ಜಿಲ್ಲೆಯ ಶಿರಾ ಮೂಲದವರಾಗಿದ್ದು, ಪ್ರಸ್ತುತ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಆತ್ಮೀಯ ಗೆಳೆಯರ ಬಳಗದ ಬಡಾವಣೆಯಲ್ಲಿ ಚಂದ್ರ ಆರ್ಯ ಅವರ ತಂದೆ ಹಾಗೂ ಅಕ್ಕ ವಾಸವಾಗಿದ್ದಾರೆ. ಈ ಹಿನ್ನೆಲೆ ತಂದೆ ಗೋವಿಂದಯ್ಯ ಹಾಗೂ ಅಕ್ಕ ಲೀಲಾ ʼಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸರ ಮುಂದೆ ಶರಣಾಗಲು ಹೆಚ್ಚಿನ ಸಮಯ ಕೇಳಿದ ಸಿಧು 

Advertisements

ಮಧ್ಯಮ ವರ್ಗದಲ್ಲಿ ಹುಟ್ಟಿ ತುಮಕೂರು ಜಿಲ್ಲೆಯ ಶಿರಾ ಮೂಲದ ಚಂದ್ರ ಆರ್ಯ ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದಾರೆ. ಇವರು ಸುಮಾರು 1 ನಿಮಿಷಗಳ ಕಾಲ ಕನ್ನಡದ ಕುರಿತು ಭಾಷಣ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಂದ್ರ ಆರ್ಯ ಬಿ.ಇ ಮತ್ತು ಎಂ.ಬಿ.ಎ ಪದವೀಧರರಾಗಿದ್ದಾರೆ. ಪ್ರಸ್ತುತ ಕೆನಡಾದ ನೇಪಿಯನ್ ಕ್ಷೇತ್ರದಿಂದ ಲಿಬರ್ಟಿ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ, 2018ರಲ್ಲಿ ಕೆನಡಾ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.

Advertisements

ಚಂದ್ರ ಆರ್ಯ ಅವರು 2003ರಲ್ಲಿ ಕೆನಡಾದ ಖಾಸಗಿ ಕಂಪನಿಯಲ್ಲಿ ಹಣಕಾಸು ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಬಳಿಕ ರಾಜಕೀಯಕ್ಕೆ ಧುಮುಕಿದ ಚಂದ್ರ ಆರ್ಯ ಅವರು ಮೂರನೇ ಬಾರಿಯು ಬಹುಮತದಿಂದ ಗೆದ್ದು ಆಯ್ಕೆಯಾಗಿದ್ದಾರೆ. ಈ ವೇಳೆ ತಂದೆ ಹಾಗೂ ಅಕ್ಕ ಚಂದ್ರ ಆರ್ಯ ಸಾಧನೆ ಹಾಗೂ ಕನ್ನಡ ಭಾಷೆಯ ಪ್ರೇಮವನ್ನು ಹಾಡಿ ಹೊಗಳಿ ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿದ ಭೂಪ 

ಇಂದು ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿ, ಕನ್ನಡಿಗನಾಗಿ ನನಗೆ ಹೆಮ್ಮೆ ಇದೆ ಎಂದು ಹೇಳಿದರು. ಕುವೆಂಪು ಅವರ ‘ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಪದ್ಯವನ್ನು ಓದುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

Advertisements
Exit mobile version