CinemaDistrictsKarnatakaLatestMain PostSandalwood

ಮೈಕ್ರೋ ಬಿಕಿನಿಯಲ್ಲಿ ಕನ್ನಡದ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ : ಪಡ್ಡೆಗಳಿಗೆ ಕೇಳಿದ ಪ್ರಶ್ನೆ ಏನು?

ಕ್ಷಿತ್ ಶೆಟ್ಟಿ ನಟನೆಯ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಗೆ ಕಾಲಿಟ್ಟ ಸಂಯುಕ್ತಾ ಹೆಗ್ಡೆ, ಸಿನಿಮಾದ ಸಕ್ಸಸ್ ನಂತರ ಅವರ ನಟನೆಗಿಂತ ಮಾಡಿಕೊಂಡ ಕಿರಿಕ್ ಗಳಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದರು. ಒಂದಲ್ಲ, ಎರಡೆಲ್ಲ ಹಲವು ವಿವಾದಗಳು ಅವರನ್ನು ಸದಾ ಬೆನ್ನು ಹತ್ತಿದವು. ಇದೀಗ ಎಲ್ಲದರಿಂದ ಮುಕ್ತವಾಗಿ ತಮಿಳು ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ಬಹುತೇಕ ಅದೇ ಸಿನಿಮಾ ರಂಗದಲ್ಲೇ ಮುಂದುವರೆದಿದ್ದಾರೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

ಕಿರಿಕ್ ಪಾರ್ಟಿ ಸಿನಿಮಾದ ನಂತರ ಕಾಲೇಜು ಕುಮಾರ್, ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ ಚಿತ್ರಗಳನ್ನು ಕನ್ನಡದಲ್ಲಿ ಮಾಡಿದರೂ, ಅಷ್ಟೇನೂ ಹೇಳಿಕೊಳ್ಳುವಂತಹ ಅವಕಾಶ ಅವರಿಗೆ ಸಿಗಲಿಲ್ಲ. ಇವರೊಂದಿಗೆ ತೆರೆ ಹಂಚಿಕೊಂಡಿದ್ದ ರಶ್ಮಿಕಾ ಮಂದಣ್ಣ, ತಮಿಳು, ತೆಲುಗು, ಬಾಲಿವುಡ್ ಎನ್ನುತ್ತಾ ಹಲವು ಚಿತ್ರರಂಗಗಳಲ್ಲಿ ಮಿಂಚಿದರೂ, ಸಂಯುಕ್ತಾ ಹೆಗ್ಡೆಗೆ ಅಂತಹ ಅದೃಷ್ಟ ದೊರೆಯಲಿಲ್ಲ. ಕನ್ನಡದಲ್ಲೂ ಅಂತಹ ಹೇಳಿಕೊಳ್ಳುವಂತಹ ಅವಕಾಶ ಕೂಡ ಸಿಗಲಿಲ್ಲ. ಹಾಗಾಗಿ ಅವರು ತಮಿಳಿನತ್ತ ಮುಖ ಮಾಡಿದರು.

 

View this post on Instagram

 

A post shared by Samyuktha Hegde (@samyuktha_hegde)

ಕನ್ನಡದಲ್ಲಿ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದರೆ, ಕನ್ನಡಕ್ಕಿಂತಲೂ ತಮಿಳಿನಲ್ಲೇ ಹೆಚ್ಚು ಸಿನಿಮಾಗಳನ್ನು ಮಾಡಿದರು. ಅದರಲ್ಲೂ ಇತ್ತೀಚೆಗೆ ಬಿಡಗಡೆಯಾದ ಮನಾಡು ಖ್ಯಾತಿಯ ವೆಂಕಟ್ ಪ್ರಭು ನಿರ್ದೇಶನದ ಮನ್ಮಥ ಲೀಲೆ ಸಿನಿಮಾದಲ್ಲಿ ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದರು. ಕಾಲಿವುಡ್ ನಲ್ಲಿ ಈ ಸಿನಿಮಾ ಇವರ ಪಾತ್ರದಿಂದಾಗಿಯೇ ಭಾರಿ ಸದ್ದು ಮಾಡಿತ್ತು. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

ಈಗ ಸಿನಿಮಾಗಿಂತ ದುಬೈ ಪ್ರವಾಸದಲ್ಲಿರುವ ಫೋಟೋವನ್ನು ಹಾಕುವ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ. ನೀಲಿ ಬಣ್ಣದ ಮೈಕ್ರೋ ಬಿಕಿನಿ ಉಡುಗೆಯಲ್ಲಿ ಸ್ವಿಮ್ಮಿಂಗ್ ಪೂಲ್ ಒಂದರ ಮುಂದೆ ತೆಗೆಸಿರುವ ಫೋಟೋ ಮತ್ತು ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಫೋಟೋ ಜೊತೆಗೆ ‘ನಾನು ತಾಪಮಾನಕ್ಕೆ ತಂಪು ಎರೆಯುತ್ತಿದ್ದೇನಾ ಅಥವಾ ಬಿಸಿಯನ್ನು ಹೆಚ್ಚಿಸುತ್ತಿದ್ದೇನಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಪಡ್ಡೆಗಳು ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ.

Leave a Reply

Your email address will not be published.

Back to top button