ಸಾಮಾನ್ಯವಾಗಿ ಕನ್ನಡದ ನಟಿಯರು ತೆಲುಗು, ತಮಿಳು ಸಿನಿಮಾ ರಂಗಕ್ಕೆ ಹಾರುವುದನ್ನು ಕಂಡಿದ್ದೇವೆ. ಕೆಲ ನಟಿಮಣಿಯರಂತೂ ಕನ್ನಡ ಸಿನಿಮಾ ರಂಗವನ್ನೂ ಮರೆತು ಕಾಲಿವುಡ್, ಟಾಲಿವುಡ್ ನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಆದರೆ, ಈ ನಟಿಯರು ಇನ್ನಷ್ಟು ದೂರ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸುತ್ತಲೇ ಭೋಜಪುರಿ ಚಿತ್ರಗಳಿಗೂ ಸಹಿ ಮಾಡಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಚಿಟ್ಟೆ ಖ್ಯಾತಿಯ ಹರ್ಷಿಕಾ ಪೂಣಚ್ಚ ಮತ್ತು ಕಾರುಣ್ಯ ರಾಮ್. ಇದನ್ನು ಓದಿ :ಗ್ಯಾಂಗ್ ಸ್ಟಾರ್ ಅವತಾರದಲ್ಲಿ ದೊಡ್ಮನೆ ಕುಡಿ
ಹರ್ಷಿಕಾ ಅವರಿಗೆ ಭೋಜಪುರಿ ಸಿನಿಮಾ ಹೊಸದಲ್ಲ. ಈಗಾಗಲೇ ಅವರು ‘ಹಮ್ ಹೈನಾ ರಾಹಿ ಪ್ಯಾರ್ ಕೆ’ ಎಂಬ ಭೋಜಪುರಿ ಚಿತ್ರದಲ್ಲಿ ನಟಿಸಿ ಆಗಿದೆ. ಆ ಸಿನಿಮಾ ಬಿಡುಗಡೆ ಕೂಡ ಆಗಿದೆ. ಈಗ ಮತ್ತೊಂದು ಭೋಜಪುರಿ ಚಿತ್ರವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಭೋಜಪುರಿ ವಿಮಾನ ಏರಿದ್ದಾರೆ. ಪ್ರೇಮಾಂಶು ಸಿಂಗ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈಗಾಗಲೇ ಶೂಟಿಂಗ್ ಕೂಡ ಶುರುವಾಗಿದೆ. ಇದನ್ನೂ ಓದಿ : ಈ ವರ್ಷ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಗೊತ್ತಾ?
Advertisement
ಸದ್ಯಕ್ಕೆ ಹರ್ಷಿಕಾ ಅವರು ಕನ್ನಡದಲ್ಲಿ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಸಾಕಷ್ಟು ಕಥೆಗಳನ್ನು ಕೇಳಿದ್ದಾರಂತೆ. ಜತೆ ಜತೆಗೆ ಸಮಾಜಮುಖಿ ಕೆಲಸಗಳಲ್ಲೂ ಅವರು ನಿರತರಾಗಿದ್ದಾರೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?
Advertisement
ಪೆಟ್ರೋಮ್ಯಾಕ್ಸ್ ಸಿನಿಮಾದ ಬಿಡುಗಡೆಗಾಗಿ ಕಾದಿರುವ ಕಾರುಣ್ಯ ರಾಮ್ ಕೂಡ ಭೋಜಪುರಿ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಆ ಸಿನಿಮಾದ ಶೂಟಿಂಗ್ ಗೂ ಅವರು ತೆರಳಲಿದ್ದಾರೆ. “ಭೋಜಪುರಿ ಸಿನಿಮಾ ಒಪ್ಪಿಕೊಂಡಿದ್ದು ನಿಜ. ವಿದೇಶದಲ್ಲೂ ನನ್ನ ಭಾಗದ ಚಿತ್ರೀಕರಣ ಆಗಲಿದೆ. ಈ ಚಿತ್ರದ ಬಗ್ಗೆ ಸಿನಿಮಾ ತಂಡವೇ ಮಾಹಿತಿ ನೀಡಲಿದೆ” ಎನ್ನುತ್ತಾರೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ
Advertisement
ಅಂದಹಾಗೆ ಈ ಇಬ್ಬರೂ ನಾಯಕಿಯರ ಚಿತ್ರಗಳನ್ನು ಒಂದೇ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿರುವುದು ಮತ್ತೊಂದು ವಿಶೇಷ.