ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದ ನಾಯಕಿ ಅಮಲಾ ಪೌಲ್ ಅವರ ಖಾಸಗಿ ವಿಡಿಯೋವನ್ನು ಲೀಕ್ ಮಾಡುವುದಾಗಿ ಆಕೆಯ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ಬೆದರಿಕೆ ಹಾಕಿದ್ದಾರೆ ಎನ್ನುವ ಕಾರಣಕ್ಕಾಗಿ ಅಮಲಾ ದೂರು ನೀಡಿದ್ದರು. ಅಲ್ಲದೇ, ತನ್ನ ಮಾಜಿ ಬಾಯ್ ಫ್ರೆಂಡ್ ನಿಂದ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು. ಈ ದೂರನ್ನು ಆಧರಿಸಿದ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಅಮಲಾ ಪೌಲ್ ತಮಿಳಿನ ಖ್ಯಾತ ನಿರ್ದೇಶಕ ಎ.ಎಲ್.ವಿಜಯ್ ಅವರನ್ನು ಮದುವೆಯಾಗಿದ್ದಾರು. ಹೊಂದಾಣಿಕೆ ಕಾರಣದಿಂದಾಗಿ ಅವರಿಂದ ಡಿವೋರ್ಸ್ ಪಡೆದಿದ್ದರು. ಆನಂತರ ಭವಿಂದರ್ ಸಿಂಗ್ ಸಾಂಗತ್ಯ ಬಯಸಿದ್ದರು. ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ಬಂಡವಾಳ ಕೂಡ ಹೂಡಿದ್ದರು. ಆನಂತರ ವ್ಯವಹಾರದಲ್ಲಿ ವೈಮನಸ್ಸು ಉಂಟಾಗಿ ಒಬ್ಬರಿಗೊಬ್ಬರು ದೂರವಾಗಿದ್ದರು. ಆ ವೇಳೆಯಲ್ಲಿಯ ವಿಡಿಯೋ ಅದು ಎನ್ನಲಾಗುತ್ತಿದ್ದು, ವಿಡಿಯೋಗಾಗಿ ಪೊಲೀಸರು ತಲಾಷೆ ನಡೆಸಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್
ವಿಡಿಯೋ ಇದೆ ಎಂದು ಹಣದ ಬೇಡಿಕೆ ಇಟ್ಟಿದ್ದಾನೆ ಎಂದು ಅಮಲಾ ದೂರಿನಲ್ಲಿ ಬರೆದಿದ್ದು, ತಾನು ಹೇಳಿದಂತೆ ಕೇಳಬೇಕು ಎಂದು ಹಿಂಸೆ ನೀಡುತ್ತಿರುವುದಾಗಿ ತಮಿಳುನಾಡಿನ ವಿಲ್ಲುಪುರಂ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಮಲಾ ದಾಖಲಿಸಿದ್ದಾರೆ. ಅಲ್ಲದೇ, ಬಾಯ್ ಫ್ರೆಂಡ್ ನ ಹನ್ನೆರಡು ಜನ ಗೆಳೆಯರ ಮೇಲೂ ಅವರು ದೂರಿದ್ದಾರೆ. ಅವರಿಂದಲೂ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದಿದ್ದಾರೆ.
ಮತ್ತೊಂದು ಮೂಲಗಳ ಪ್ರಕಾರ ಅಮಲಾ ಪೌಲ್ ಮತ್ತು ಭವಿಂದರ್ ಸಿಂಗ್ ಕೇವಲ ಡೇಟಿಂಗ್ ಮಾಡುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆಯೇ ಅವರು ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೂ ಇತ್ತು. ಮದುವೆಯ ಫೋಟೋಗಳು ಕೂಡ ಲೀಕ್ ಆಗಿದ್ದವು. ತಾವು ಎರಡನೇ ಮದುವೆ ಆಗಿಲ್ಲ ಎಂದು ಅಮಲಾ ಹೇಳಿಕೊಂಡಿದ್ದರೂ, ಫೋಟೋಗಳು ಮಾತ್ರ ಅನುಮಾನ ಮೂಡಿಸಿದ್ದವು.