ಬೆಂಗಳೂರು: ಐಪಿಎಲ್‌ನಲ್ಲಿ (IPL) ಬೆಂಗಳೂರನ್ನು (Bengaluru) ಪ್ರತಿನಿಧಿಸುತ್ತಿರುವ ಆರ್‌ಸಿಬಿಗೂ (RCB) ಕನ್ನಡ-ಹಿಂದಿ ಭಾಷಾ ಬಿಸಿ ತಟ್ಟಿದೆ.
ಸೀಸನ್ 18 ಹರಾಜಿನ ವೇಳೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹಿಂದಿ ಸೋಷಿಯಲ್ ಮೀಡಿಯಾ ಓಪನ್ ಮಾಡಿದೆ. ವಿರಾಟ್ ಕೊಹ್ಲಿ ಹಿಂದಿಯಲ್ಲಿ ಆರ್‌ಸಿಬಿ ಬಗ್ಗೆ ಮಾತಾಡಿರುವ ವಿಡಿಯೋವನ್ನು ಹಂಚಿಕೊಂಡಿದೆ. ಆರ್‌ಸಿಬಿ ಹಿಂದಿ (Hindi) ಪ್ರೀತಿಗೆ ಕನ್ನಡ ಫ್ಯಾನ್ಸ್ ಸಿಡಿದೆದ್ದಿದ್ದಾರೆ.
Advertisement
ಇದು ಬೆಂಗಳೂರಿನ ಕನ್ನಡ (Kannada) ಸಂಸ್ಕೃತಿಗೆ ಮಾಡಿರುವ ಅವಮಾನ. ಈ ಕ್ಷಣವೇ ಹಿಂದಿ ಪೇಜ್ ಅನ್ನು ರದ್ದು ಮಾಡಿ ಡಿಲೀಟ್ ಮಾಡಿ ಎಂದು ಆಗ್ರಹಿಸಿದ್ದಾರೆ. ಆದರೆ ಆರ್‌ಸಿಬಿ ಕನ್ನಡ ಅಭಿಮಾನಿಗಳ ಆಕ್ಷೇಪಕ್ಕೆ ಇತರೇ ಭಾಷಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.
Advertisement
अपने प्रिय खिलाड़ी विराट कोहली को सुनिए अपनी प्रिय हिन्दी भाषा में, जहाँ उन्होंने आरसीबी से सालों से जुड़े रहने की खुशी और ऑक्शन पर अपनी बातें साझा की। 🤩
अब आरसीबी के सभी वीडियो आपकी पसंदीदा हिन्दी में भी उपलब्ध है! 🎥@RCBTweets @imVkohli | #PlayBold #Hindi pic.twitter.com/LeGJ6HhQzA
— Royal Challengers Bengaluru Hindi (@RCBinHindi) November 24, 2024
ವಿವಾದದ ಬೆನ್ನಲ್ಲೇ ಬಳಿಕ ಎಚ್ಚೆತ್ತ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸ್ಪಷ್ಟನೆ ಕೊಟ್ಟಿದೆ. ಮತ್ತಷ್ಟು ಜನರನ್ನು ತಲುಪುವ ಗುರಿ ಹೊಂದಿದ್ದು, ಕನ್ನಡ, ಹಿಂದಿ ಪೇಜ್ ಓಪನ್ ಮಾಡಿದ್ದೇವೆ. ಜೊತೆಗೆ ಮತ್ತಷ್ಟು ಭಾಷೆಗಳಲ್ಲೂ ಸೋಷಿಯಲ್ ಮೀಡಿಯಾ ಪೇಜ್ ಆರಂಭಿಸುತ್ತೇವೆ ಎಂದು ಸ್ಪಷ್ಟನೆ ಕೊಟ್ಟಿದೆ. ಇದನ್ನೂ ಓದಿ: ನನ್ನ ಪ್ರೀತಿಯ RCBಗೆ…: ತಂಡದಿಂದ ಕೈಬಿಟ್ಟ ಆರ್‌ಸಿಬಿಗೆ ಸಿರಾಜ್ ಭಾವುಕ ವಿದಾಯ
Advertisement
ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸಮರ್ಥನೆಗೂ ಅಭಿಮಾನಿಗಳು ಕಿಡಿಕಾರಿದ್ದಾರೆ. ಬೇರೆ ತಂಡಗಳು ಕನ್ನಡದಲ್ಲಿ ಪೇಜ್ ಓಪನ್ ಮಾಡುತ್ತಾರಾ? ಸಂವಹನಕ್ಕೆ ಬೇಕಾದರೆ ಕನ್ನಡ-ಇಂಗ್ಲಿಷ್ ಸಾಲದೇ ಅಂತ ಪ್ರಶ್ನಿಸಿದ್ದಾರೆ.
Advertisement
ಇದು ನಿಮ್ಮ ತಂಡ, ನಿಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು! ❤️🔥
ಅಭಿಮಾನಿಗಳೇ, ನಿಮ್ಮ ಆಶೀರ್ವಾದ ನಮ್ಮ ಮೇಲೆ ಸಾದ ಇರಲಿ. 🙌#PlayBold #ನಮ್ಮRCB #IPLAuction #BidForBold #IPL2025 pic.twitter.com/fBUba7ZmEc
— Royal Challengers Bengaluru Kannada (@RCBinKannada) November 25, 2024
ಇನ್ನು ಕೆಲವರು ಆರ್‌ಸಿಬಿ ಏನು ರಣಜಿ ಟೀಮ್ ಅಲ್ಲ, ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಹಿಂದಿ ಸೇರಿದಂತೆ ಬೇರೆ ಭಾಷೆಗಳಲ್ಲಿ ಪೋಸ್ಟ್ ಮಾಡಿದರೆ ತಪ್ಪಲ್ಲ. ಕೆಎಂಎಫ್‌ನವರು (KMF) ನಂದಿನಿ ಹಾಲಿನ (Nandini Milk) ಬಗ್ಗೆ ದೆಹಲಿಯಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದರೆ ಇದಕ್ಕೆ ಆಕ್ಷೇಪಿಸ್ತೀರಾ ಎಂದು ವಾದಿಸುತ್ತಿದ್ದಾರೆ.