ಚಿತ್ರರಂಗದಲ್ಲಿ ಪೋಷಕ ನಟನಾಗಿ, ವಸ್ತ್ರಾಲಂಕಾರ ಕಲಾವಿದನಾಗಿ ಗುರುತಿಸಿಕೊಂಡಿದ್ದ ಗಂಡಸಿ ನಾಗರಾಜ್ (Gandasi Nagaraj) ಇಹಲೋಕ ತ್ಯಜಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಗಂಡಸಿ ನಾಗರಾಜ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ದೇವೇಗೌಡ ಆಸ್ಪತ್ರೆಯಲ್ಲಿ (Devegowda Hospital) ನಟ ನಿಧನರಾಗಿದ್ದಾರೆ. ಇದನ್ನೂ ಓದಿ: ರವಿಚಂದ್ರನ್ ಪುತ್ರ ವಿಕ್ರಮ್ ನಟನೆಯ ಎರಡನೇ ಸಿನಿಮಾಗೆ ಮುಹೂರ್ತ
Advertisement
ವಸ್ತ್ರಾಲಂಕಾರ ಕಲಾವಿದನಾಗಿ ಹಾಗೂ ನಟನಾಗಿ ಕೆಲಸ ಮಾಡಿದ್ದ ಗಂಡಸಿ ನಾಗರಾಜ್ ಅವರು ನಿಧನರಾಗಿದ್ದಾರೆ. ಭಾನುವಾರ (ಡಿ.11) ರಾತ್ರಿ 10:30ಕ್ಕೆ ಅವರು ಕೊನೆಯುಸಿರು ಎಳೆದರು. ಚಿತ್ರರಂಗದ ಆರಂಭದಲ್ಲಿ ಅವಕಾಶ ಸಿಗದೇ ಇದ್ದಾಗ ಟೈಲರಿಂಗ್ ಮಾಡಿಕೊಂಡಿದ್ದರು. ನಂತರ ಅವರಿಗೆ ಕಾಸ್ಟ್ಯೂಮರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಬಳಿಕ 40 ವರ್ಷಗಳ ಕಾಲ ಗಂಡಸಿ ನಾಗರಾಜ್ ಅವರು ಕಾಸ್ಟ್ಯೂಮರ್ ಆಗಿ ಸೈ ಎನಿಸಿಕೊಂಡಿದ್ದರು. ನವರಸ ನಾಯಕ ಜಗ್ಗೇಶ್ (Actor Jaggesh) ಅವರ ಆಪ್ತ ವಸ್ತ್ರಾಲಂಕಾರ ಕಲಾವಿದನಾಗಿ ಅವರು ಗುರುತಿಸಿಕೊಂಡಿದ್ದರು. ಜಗ್ಗೇಶ್ ನಟನೆಯ ಅಧಿಕ ಸಿನಿಮಾಗಳಿಗೆ ಗಂಡಸಿ ನಾಗರಾಜ್ ಕೆಲಸ ಮಾಡಿದ್ದರು.
Advertisement
ಇನ್ನೂ ಗಂಡಸಿ ನಾಗರಾಜ್ ಅವರಿಗೆ 57 ವರ್ಷ ವಯಸ್ಸಾಗಿತ್ತು. ಕಳೆದ 5 ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿ ಆಗದೇ ಪದ್ಮನಾಭ ನಗರದ ದೇವೇಗೌಡ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಂದು (ಡಿ.12) ಮಧ್ಯಾಹ್ನ 3:30ರ ಸುಮಾರಿಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Advertisement
ಇನ್ನೂ ಗಂಡಸಿ ನಾಗರಾಜ್ ರವರು ನಟಿಸಿ ಕೆಲಸ ಮಾಡಿದ ಚಿತ್ರಗಳು ಸರ್ವರ್ ಸೋಮಣ್ಣ ,ಸೂಪರ್ ನನ್ನ ಮಗ,ಬಂಡ ನನ್ನ ಗಂಡ, ಗುಂಡನ ಮದುವೆ, ರಾಯರ ಮಗ, ಹಬ್ಬ ,ಶ್ರೀ ಮಂಜುನಾಥ ,ಮದುವೆ,ಮಾತಾಡು ಮಾತಾಡು ಮಲ್ಲಿಗೆ, ಪರ್ವ,ರಾಜಹುಲಿ, ಶಿಕಾರಿ ಹೀಗೆ 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. `ಕೋಟಿಗೊಬ್ಬ 3′ ಇವರ ಕೊನೆಯ ಚಿತ್ರವಾಗಿತ್ತು.