ಬೆಂಗಳೂರು: ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನಕ್ಕೆ ಚಿತ್ರರಂಗದವರು ಕಂಬನಿ ಮಿಡಿದಿದ್ದಾರೆ. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ಬಹು ಅಂಗಾಂಗ ವೈಫಲ್ಯದಿಂದ ಪಾರ್ವತಮ್ಮ ಅವರು ನಿಧನರಾದರು.
Advertisement
ಚಿತ್ರರಂಗಕ್ಕೆ ಅಮ್ಮನವರ ಕೊಡುಗೆ ಅಪಾರ. ಜೀವನವೆಂಬ ಸಂಸಾರವನ್ನು ಅಷ್ಟೇ ಚೆನ್ನಾಗಿ ಸಾಗಿಸಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಎಲ್ಲರನ್ನು ಕೂಡ ಅವರು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ರು.. ವಿಷೇಷವಾಗಿ ನನ್ನ ಬಗ್ಗೆ ಪ್ರೀತಿಯಿತ್ತು. ಅಶ್ವಮೇಧ ಹಾಡನ್ನ ಹಾಡಲು ಕೇಳಿದಾಗ ಏನೂ ಮಾತನಾಡದೆ ಒಪ್ಪಿದ್ರು. ನನ್ನ ಮಗ ಶಿವರಾಜ್ ಕುಮಾರ್ ಬೇರೆಯಲ್ಲ ನೀನು ಬೇರೆಯಲ್ಲವೆಂದೂ ಹೇಳಿದ್ರು.
Advertisement
ಕನ್ನಡ ಚಿತ್ರರ೦ಗದ ಕಲಾವಿದರಿಗೆ ಬಹುದೊಡ್ಡ ಆಸರೆಯಾಗಿದ್ದ ಮಹಾನ್ ಶಕ್ತಿ ಇನ್ನಿಲ್ಲ. ಪಾವ೯ತಮ್ಮ ರಾಜ್ ಕುಮಾರ್ ಅವರ ಆತ್ಮಕ್ಕೆ ಶಾ೦ತಿ ಸಿಗಲಿ. 2/3
— Divya Spandana/Ramya (@divyaspandana) May 31, 2017
Advertisement
ನಟಿ, ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು, ಕನ್ನಡ ಚಿತ್ರರಂಗದ ಕಲಾವಿದರಿಗೆ ಬಹುದೊಡ್ಡ ಆಸರೆಯಾಗಿದ್ದ ಮಹಾನ್ ಶಕ್ತಿ ಇನ್ನಿಲ್ಲ. ಪಾರ್ವತಮ್ಮ ರಾಜ್ ಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.
Advertisement
My thoughts and prayers to the Rajkumar family during this time of grief and sadness
— Divya Spandana/Ramya (@divyaspandana) May 31, 2017
ನಟ, ನಿರ್ದೇಶಕ ರಮೇಶ್ ಅರವಿಂದ್ ಟ್ವೀಟ್ ಮಾಡಿ ತಮ್ಮ ಕಂಬನಿ ಮಿಡಿದಿದ್ದಾರೆ. ನಿರ್ಮಾಪಕಿಯಾಗಿ, ಡಾ.ರಾಜ್ ಹೆಂಡತಿಯಾಗಿ, ನನ್ನ ಗೆಳೆಯರ ತಾಯಿಯಾಗಿ ಪಾರ್ವತಮ್ಮನವರನ್ನು ಮೆಚ್ಚುತಾ… ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.
ನಿರ್ಮಾಪಕಿಯಾಗಿ,ಡಾ.ರಾಜ್ ಹೆಂಡತಿಯಾಗಿ,ನನ್ನ ಗೆಳಯರ ತಾಯಿಯಾಗಿ ಪಾರ್ವತಮ್ಮನವರನ್ನು ಮೆಚ್ಚುತಾ..Our prayers..Rest in Peace.
— Ramesh Aravind (@Ramesh_aravind) May 31, 2017
ಪಾರ್ವತಮ್ಮ ರಾಜ್ ಕುಮಾರ್ ಅವರು ವಿಧಿವಶರಾಗಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ, ನಾಡಿಗೆ ಭಗವಂತ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಪಾರ್ವತಮ್ಮ ರಾಜಕುಮಾರ್ ಅವರು ವಿಧಿವಶರಾಗಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ.ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನಾಡಿಗೆ ಭಗವಂತ ನೀಡಲಿ pic.twitter.com/XVX6hSjXXD
— CM of Karnataka (@CMofKarnataka) May 31, 2017
ಕನ್ನಡ ಚಿತ್ರರಂಗದ ಕಲಾವಿದರಿಗೆ ಸ್ಪೂರ್ತಿಯಾಗಿ, ಅನ್ನದಾತೆಯಾಗಿ, ಆಸರೆಯಾಗಿದ್ದ ಆಲದಮರ ಇನ್ನಿಲ್ಲ. ಅಮ್ಮ ನಿಮ್ಮ ತರಹ ಇನ್ಯಾರು ಇಲ್ಲಾ.. ನಿಮಗೆ ನೀವೇ ಸಾಟಿ.. ಅಮ್ಮ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟಿ ಮಾನ್ವಿತಾ ಹರೀಶ್ ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಕಲಾವಿದರಿಗೆ ಸ್ಪೂರ್ತಿಯಾಗಿ, ಅನ್ನದಾತೆಯಾಗಿ, ಆಸರೆಯಾಗಿದ್ದ ಆಲದಮರ ಇನ್ನಿಲ್ಲಾ..
ಅಮ್ಮನಿಮ್ಮ ತರಹ ಇನ್ಯಾರು… https://t.co/uyTGIYM9hw
— Manvitha Harish (@ManvithaHarish) May 31, 2017