ಧಾರವಾಡ: ಕನ್ನಡ ನಿಘಂಟು (Kannada Dictionary) ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದ ರೆವರೆಂಡ್ ಫರ್ಡಿನೆಂಡ್ ಕಿಟೆಲ್ (Ferdinand Kittel) ಅವರ ಕುಟುಂಬ 150 ವರ್ಷಗಳ ಬಳಿಕ ಕರ್ನಾಟಕಕ್ಕೆ ಭೇಟಿ ನೀಡಿದೆ. ಅದರಲ್ಲೂ ವಿದ್ಯಾಕಾಶಿ ಧಾರವಾಡಕ್ಕೆ (Dharwad) ಕಿಟೆಲ್ ಕುಟುಂಬಸ್ಥರು ಭೇಟಿ ನೀಡಿದ್ದಾರೆ.
ಸುದೀರ್ಘ ಅವಧಿಯ ಬಳಿಕ ಜರ್ಮನಿಯಿಂದ ಕರ್ನಾಟಕಕ್ಕೆ ಕಿಟೆಲ್‌ರ ಕುಟುಂಬ ಭೇಟಿ ನೀಡಿದ್ದು ವಿಶೇಷವಾಗಿತ್ತು. ಕಿಟೆಲ್ ಅವರ ಮರಿಮೊಮ್ಮಗಳಾದ ಅಲ್ಮುತ್ ಬರ್ಬೋರ್ ಎಲಿನೋರ್ ಮಯರ್, ಗಿರಿಮೊಮ್ಮಗ ಈವ್ಸ್ ಪ್ಯಾಟ್ರಿಕ್ ಹಾಗೂ ಅವರ ಸ್ನೇಹಿತ ಜಾನ್ ಫೆಡ್ರಿಕ್ ಧಾರವಾಡಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಕರೆಂಟ್ ತಗುಲಿ ಕಾಮಗಾರಿ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಬಲಿ – ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ
Advertisement
Advertisement
ಧಾರವಾಡದಲ್ಲಿರುವ ಕಿಟೆಲ್ ಹೆಸರಿನ ಕಾಲೇಜು ಹಾಗೂ ಕಿಟೆಲ್‌ರು ನೆಲೆಸಿದ್ದ ಜಾಗಗಳನ್ನು ಅವರು ವೀಕ್ಷಣೆ ಮಾಡಿದರು. ಕಿಟೆಲ್‌ರ 200ನೇ ಜನ್ಮ ದಿನಾಚರಣೆಯನ್ನು ಧಾರವಾಡದಲ್ಲೇ ಆಯೋಜಿಸಲು ಕುಟುಂಬ ನಿರ್ಧರಿಸಿದೆ. ಅಲ್ಲದೇ ಕಿಟೆಲ್‌ರು ಬಳಸಿದ ಕೆಲವೊಂದಿಷ್ಟು ವಸ್ತುಗಳನ್ನು ಮ್ಯೂಸಿಯಂಗೆ ಕೊಡಲು ಈ ಕುಟುಂಬ ನಿರ್ಧರಿಸಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ರೇಪ್‌ಕೇಸ್ – ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 1 ಲಕ್ಷ ಬಹುಮಾನ