Connect with us

Latest

ದಿನಭವಿಷ್ಯ 15-11-2018

Published

on

ಶ್ರೀ ವಿಳಂಬಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,ಗುರುವಾರ, ಶ್ರವಣ ನಕ್ಷತ್ರ ಬೆಳಗ್ಗೆ 8:45 ನಂತರ ಧನಿಷ್ಠ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:35 ರಿಂದ 3:02
ಗುಳಿಕಕಾಲ: ಬೆಳಗ್ಗೆ 9:14 ರಿಂದ 10:41
ಯಮಗಂಡಕಾಲ: ಬೆಳಗ್ಗೆ 6:21 ರಿಂದ 7:47

ಮೇಷ: ಮನೋಭಿಲಾಷೆಗಳು ಹೆಚ್ಚಾಗುವುದು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಚೋರಾಗ್ನಿ ಭೀತಿ, ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ ಲಭಿಸುವುದು

ವೃಷಭ: ದೂರ ಪ್ರಯಾಣ ಸಾಧ್ಯತೆ, ಸ್ನೇಹಿತರಿಂದ ಶುಭ, ಸಂಗಾತಿಯಿಂದ ಲಾಭ, ನೆರೆಹೊರೆಯವರಿಂದ ಅನುಕೂಲ, ಸ್ಥಳ-ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಉತ್ತಮ ಅವಕಾಶ

ಮಿಥುನ: ಆಕಸ್ಮಿಕ ಧನ ಯೋಗ, ಸಾಲಗಾರರು-ಶತ್ರುಗಳಿಂದ ತೊಂದರೆ, ಕಾರ್ಮಿಕರ ಕೊರತೆಯಿಂದ ಕೆಲಸದಲ್ಲಿ ಹಿನ್ನಡೆ, ಗುಪ್ತ ರೋಗ ಬಾಧೆ, ಗ್ಯಾಸ್ಟ್ರಿಕ್-ದೈಹಿಕ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಸಂತಾನ ವಿಚಾರದಲ್ಲಿ ವೈಮನಸ್ಸು, ಮಕ್ಕಳ ವಿಷಯಕ್ಕೆ ಅಪಮಾನ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ಆಕಸ್ಮಿಕ ಸಮಸ್ಯೆ ಎದುರಾಗುವುದು

ಸಿಂಹ: ನಷ್ಟ ಪ್ರಮಾಣ ಅಧಿಕವಾಗುವುದು, ಸಾಲ ಮಾಡುವ ಪರಿಸ್ಥಿತಿ, ಮನೆ ವಾತಾವರಣದಲ್ಲಿ ಕಲಹ, ಸ್ಥಿರಾಸ್ತಿ ವಾಹನದ ಮೇಲೆ ಸಾಲ, ದೀರ್ಘಾವಧಿ ಸಾಲದ ಚಿಂತೆ.

ಕನ್ಯಾ: ಮಕ್ಕಳಿಂದ ಅನುಕೂಲ, ಸ್ನೇಹಿತರಿಂದ ಪ್ರಶಂಸೆ, ದಾಯಾದಿಗಳೊಂದಿಗೆ ಕಲಹ, ನೆರೆಹೊರೆಯವರಿಂದ ಮಾನಹಾನಿ.

ತುಲಾ: ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಮಾತುಗಳಿಂದ ಕಿರಿಕಿರಿ, ಆತ್ಮೀಯರೊಂದಿಗೆ ಮನಃಸ್ತಾಪ.

ವೃಶ್ಚಿಕ: ಅನಾರೋಗ್ಯದಿಂದ ಪ್ರಯಾಣ ರದ್ದು, ಸ್ಥಳ-ಗೃಹ ಬದಲಾವಣೆಯಿಂದ ಸಂಕಷ್ಟ, ಉದ್ಯೋಗ ಬದಲಾವಣೆ ಉತ್ತಮವಲ್ಲ, ಪಾಪ ಕರ್ಮ ಫಲ ಲಭಿಸುವುದು.

ಧನಸ್ಸು: ಆಕಸ್ಮಿಕ ಧನ ಪ್ರಾಪ್ತಿ, ಕೌಟುಂಬಿಕ ಸಮಸ್ಯೆ, ಒತ್ತಡದ ಜೀವನದಿಂದ ನಿದ್ರಾಭಂಗ, ಕುಟುಂಬದಲ್ಲಿ ವೈಮನಸ್ಸು, ಮಕ್ಕಳು ದೂರವಾಗುವ ಸಾಧ್ಯತೆ

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸ್ನೇಹಿತರಿಂದ ಸಮಸ್ಯೆ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಹೇಳಿಕೆ ಮಾತುಗಳಿಂದ ವೈಮನಸ್ಸು, ಸ್ಥಿರಾಸ್ತಿ-ವಾಹನದಿಂದ ಅನುಕೂಲ.

ಕುಂಭ: ಸಾಲ ತೀರಿಸುವ ಸಾಧ್ಯತೆ, ಉದ್ಯೋಗದಲ್ಲಿ ಒತ್ತಡ, ಕೆಲಸಕ್ಕೆ ಕಾರ್ಮಿಕರ ಕೊರತೆ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ.

ಮೀನ: ಹೆಣ್ಣು ಮಕ್ಕಳಿಂದ ಲಾಭ, ಉತ್ತಮ ಗೌರವ ಪ್ರಾಪ್ತಿ, ಸಂತಾನ ಸಮಸ್ಯೆಗಳಿಂದ ಮುಕ್ತಿ, ಸ್ನೇಹಿತರಿಂದ ಪ್ರಶಂಸೆ, ಈ ದಿನ ಶುಭ ಫಲ.

 

Click to comment

Leave a Reply

Your email address will not be published. Required fields are marked *

www.publictv.in