ಟ್ರೈಲರ್ ಮೂಲಕ ಜಾಹೀರಾಯ್ತು ‘ಒಂಟಿ’ ಖದರ್!

Public TV
1 Min Read
Onti F

ಬೆಂಗಳೂರು: ಮೇಘನಾ ರಾಜ್ ಮದುವೆಯಾದ ನಂತರ ಮೊದಲ ಸಲ ನಾಯಕಿಯಾಗಿ ನಟಿಸಿರುವ ಚಿತ್ರ ‘ಒಂಟಿ’. ಈಗಾಗಲೇ ಎಲ್ಲ ಕೆಲಸವನ್ನೂ ಪೂರ್ಣಗೊಳಿಸಿಕೊಂಡಿರೋ ಈ ಚಿತ್ರವನ್ನು ಒರಟ ಐ ಲವ್ ಯೂ ಖ್ಯಾತಿಯ ಶ್ರೀ ನಿರ್ದೇಶನ ಮಾಡಿದ್ದಾರೆ. ಇನ್ನೇನು ಬಿಡುಗಡೆಯಾಗುವ ಸನ್ನಾಹದಲ್ಲಿರುವ ಒಂಟಿ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ.

Onti 2

ಈ ಸಂಜೆ ಅಂತೊಂದು ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದ ಆರ್ಯ ‘ಒಂಟಿ’ ಮೂಲಕ ಎರಡನೇ ಸಾಹಸಕ್ಕೆ ಮುಂದಾಗಿದ್ದಾರೆ. ಈಗ ಬಿಡುಗಡೆಯಾಗಿರೋ ಟ್ರೈಲರ್‍ನಲ್ಲಿ ಆರ್ಯ ಅವರ ಪಾತ್ರದ ಖದರ್ ಏನೆಂಬುದು ಸ್ಪಷ್ಟವಾಗಿಯೇ ಜಾಹೀರಾಗಿದೆ. ಪ್ರೇಕ್ಷಕರು ಶಿಳ್ಳೆ ಹೊಡೆದು ಸಂಭ್ರಮಿಸುವಂಥಾ ಮಾಸ್ ಡೈಲಾಗ್, ರೋಮಾಂಚನಗೊಳಿಸುವ ಫೈಟಿಂಗ್ ಸೀನುಗಳ ಮೂಲಕವೇ ಸೆಳೆಯುವಂತಿರೋ ಈ ಟ್ರೈಲರ್ ಗೆ ಆರಂಭಿಕವಾಗಿಯೇ ಒಳ್ಳೆ ಪ್ರತಿಕ್ರಿಯೆ ಸಿಗಲಾರಂಭಿಸಿದೆ.

Onti

ಆರ್ಯ ಈ ಹಿಂದೆ ಕಿಚ್ಚ ಸುದೀಪ್ ಅಭಿನಯಿಸಿದ್ದ ಮೈ ಆಟೋಗ್ರಾಫ್, ನಂ 13 ಶಾಂತಿನಿವಾಸ ಮುಂತಾದ ಚಿತ್ರಗಳಲ್ಲಿ ಸಹನಟನಾಗಿ ಅಭಿನಯಿಸಿದ್ದರು. ನಾಯಕನಾಗಿ ಒಂಟಿ ಅವರ ಪಾಲಿಗೆ ಎರಡನೇ ಚಿತ್ರ. ಈ ಬಾರಿ ಆರ್ಯ ಭರ್ಜರಿಯಾಗಿಯೇ ಎಂಟ್ರಿ ಕೊಡಲಿರೋ ಲಕ್ಷಣಗಳನ್ನು ಈ ಟ್ರೈಲರ್ ಹೊರಗೆಡಹಿದೆ. ಇದಲ್ಲದೇ ಮದುವೆಯ ನಂತರದಲ್ಲಿ ಒಂದಷ್ಟು ಕಾಲ ಬ್ರೇಕ್ ತೆಗೆದುಕೊಂಡಿದ್ದ ಮೇಘನಾ ರಾಜ್ ಕೂಡಾ ಡಿಫರೆಂಟಾದ ಪಾತ್ರವೊಂದರ ಮೂಲಕವೇ ರೀ ಎಂಟ್ರಿ ಕೊಟ್ಟಿದ್ದಾರೆಂಬ ಸುಳಿವೂ ಸಿಕ್ಕಿದೆ.

Onti 3

ಇನ್ನುಳಿದಂತೆ ಈ ಚಿತ್ರದ ಹಾಡುಗಳಿಗೆ ಮನೋಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ ಕಲ್ಯಾಣ್ ಮತ್ತು ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿದ್ದಾರೆ. ಕೆ ಶಶಿಧರ್ ಛಾಯಾಗ್ರಹಣ, ಕುಮಾರ್ ಕೋಟೆಕೊಪ್ಪ ಸಂಕಲನ, ಮುರಳಿ ನೃತ್ಯ ನಿರ್ದೇಶನ ಮತ್ತು ಮಾಸ್ ಮಾದ ಅವರ ಸಾಹಸ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *