ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಿನಿಮಾಗಳು ಥಿಯೇಟರ್ ಗೆ ಬರೋದೆ ಗೊತ್ತಾಗಲ್ಲ. ಯಾಕಂದ್ರೆ ವಾರಕ್ಕೆ ಏನಿಲ್ಲ ಅಂದ್ರು 8 ರಿಂದ 9 ಸಿನಿಮಾಗಳು ತೆರೆಗೆ ಬರುತ್ತವೆ. ಅದರಲ್ಲಿ ಪ್ರೇಕ್ಷಕ ಆಯ್ದುಕೊಳ್ಳೋದು ಕೆಲವೊಂದು. ಹೀಗಾಗಿ ಇನ್ನುಳಿದ ಸಿನಿಮಾಗಳು ಬಂದು ಹೋಗುವುದು ಗೊತ್ತೇ ಆಗಲ್ಲ. ಅದೇ ಸಾಲಿಗೆ ‘ಮನರೂಪ’ ಕೂಡ ಸೇರಿತ್ತು. ರಿಲೀಸ್ ಆದಾಗ ಹೇಳಿಕೊಳ್ಳುವಷ್ಟು ರೆಸ್ಪಾನ್ಸ್ ಪಡೆಯದೆ ಹೋದ್ರು, ಈಗ ಜನರಿಂದ ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ.
Advertisement
ಜೀವನವನ್ನೇ ಆಟವಾಗಿಸಿಕೊಳ್ಳುವ ದುರಂತ ಕಥೆ ‘ಮನರೂಪ’ದಲ್ಲಿ ಅನಾವರಣಗೊಂಡಿದೆ. ಈ ಸಿನಿಮಾದ ಕಥೆ ಎಲ್ಲರ ಜೀವನಕ್ಕೂ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಮಕ್ಕಳಲ್ಲಿರುವ ಕೆಲವು ಕ್ರೇಜ್ ಗಳು ಅವರ ಜೀವನವನ್ನೇ ಹಳ್ಳ ಹಿಡಿಸುತ್ತವೆ. ಹೀಗಾಗಿ ಅದಕ್ಕೆ ಸಂಬಂಧಿಸಿದ ಮಹತ್ತರವಾದ ಸಂದೇಶವೊಂದು ‘ಮನರೂಪ’ದಲ್ಲಿ ಅನಾವರಣಗೊಂಡಿದೆ. ತಂದೆ ತಾಯಂದಿರು, ಪೋಷಕರು ಮಕ್ಕಳ ಜೊತೆ ಕುಳಿತು ಈ ಸಿನಿಮಾ ನೋಡುವಂತಿದೆ. ಇಡೀ ಸಿನಿಮಾವನ್ನ ಕಾಡಿನಲ್ಲೇ ಚಿತ್ರೀಕರಿಸಲಾಗಿದೆ. ಸೈಕಾಲಜಿಕಲ್, ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಅಮೆಜಾನ್ ಪ್ರೈಂ ನಲ್ಲಿ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
Advertisement
Advertisement
ಸಿನಿಮಾ ಥಿಯೇಟರ್ ನಲ್ಲಿ ಉಳಿದದ್ದು ಕಡಿಮೆ. ಆದ್ರೆ ಅಮೆಜಾನ್ ಪ್ರೈಮ್ ನಲ್ಲಿ ನೋಡಿದವರು, ಇದೊಂದು ವಿಭಿನ್ನ ಕಥೆ ಹೊಂದಿರುವ ಸಿನಿಮಾ ಎಂದೇ ಹೇಳುತ್ತಿದ್ದಾರೆ. ಜೊತೆಗೆ ಈ ಸಿನಿಮಾ ಮಾಡಿದ್ದು ಹೊಸ ತಂಡ. ಆದ್ರೆ ಸಿನಿಮಾ ನೋಡಿದವರಿಗೆ ಹಾಗೇ ಅನ್ನಿಸೋಕೆ ಸಾಧ್ಯವೇ ಆಗುವಂತ ದೃಶ್ಯಗಳು ಕಾಣಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ಕಥೆಯ ಜಾಡನ್ನು ಹೆಣೆದಿದ್ದಾರೆ.
Advertisement
ಒಬ್ಬ ನಿರ್ದೇಶಕನ ಸಿನಿಮಾ ಗೆಲ್ಲೋದು ಎಲ್ಲಿ ಹೇಳಿ. ಆ ಸಿನಿಮಾ ಬಗ್ಗೆ ಪ್ರೇಕ್ಷಕ ಒಳ್ಳೆ ಮಾತುಗಳನ್ನಾಡಿದಾಗ. ಈ ಸಿನಿಮಾಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಗಳನ್ನು ನೋಡಿ ನಿರ್ದೇಶಕ ಕಂ ನಿರ್ಮಾಪಕ ಕಿರಣ್ ಹೆಗಡೆ ಸಂತಸ ವ್ಯಕ್ತಪಡಿಸಿದ್ದಾರೆ. ನಾನೇ ಬಂಡವಾಳ ಹಾಕಿ ನಿರ್ದೇಶಿಸಿದ ಸಿನಿಮಾವನ್ನು ಥಿಯೇಟರ್ ನಲ್ಲಿ ಜನಕ್ಕೆ ತಲುಪಿಸಲು ಸಾಧ್ಯವಾಗಲಿಲ್ಲ. ಆದ್ರೆ ಕಥೆಯನ್ನು ಜನರು ಇಷ್ಟ ಪಟ್ಟಿದ್ದಾರೆ ಅನ್ನೋದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಂದ ರೆಸ್ಪಾನ್ಸ್ ಸಾಕ್ಷಿ. ಮನರೂಪದ ಎರಡನೇ ಭಾಗದಲ್ಲಿ ಬರುವ ದೃಶ್ಯಗಳು ಅನೇಕ ವರ್ಗದ ಯುವಕರು, ಕುಟುಂಬಗಳ ಮನಸ್ಸನ್ನು ತಟ್ಟಿದೆ. ಜನರ ಪ್ರೀತಿಗೆ ನಾನು ಆಭಾರಿ ಎಂದಿದ್ದಾರೆ.
‘ಮನರೂಪ’ ಸಿನಿಮಾಗೆ ಪ್ರಶಸ್ತಿಯ ಗರಿಯೂ ಸಿಕ್ಕಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ‘ಉತ್ತಮ ಪ್ರಯೋಗಾತ್ಮಕ’ ಸಿನಿಮಾ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈಗಾಗಲೇ ಮುಂಬೈನಲ್ಲಿ ನಡೆದ ಕೆಫೆ ಇರಾನಿ ಚಲನಚಿತ್ರೋತ್ಸವದಲ್ಲಿ ಬಣ್ಣಿಸಲಾಗಿದೆ. ಹಾಗೇ ಅಮೆರಿಕಾದ ಮಿಯಾಮಿ ಇಂಟರ್ ನ್ಯಾಷನಲ್ ಚಲನಚಿತ್ರೋತ್ಸವ ಹಾಗೂ ಟರ್ಕಿಯ ಇಸ್ತಾನ್ ಬುಲ್ ಫಿಲ್ಮ್ ಅವಾರ್ಡ್ಸ್ ಚಿತ್ರೋತ್ಸವಕ್ಕೂ ‘ಮನರೂಪ’ ಆಯ್ಕೆಯಾಗಿದೆ ಎಂಬುದೇ ಸಂತಸದ ವಿಚಾರ.
ಇನ್ನು ಸಿನಿಮಾದಲ್ಲಿ ಹೊಸಬರ ದಂಡೆ ಇದೆ. ದಿಲೀಪ್ ಕುಮಾರ್, ಅನೂಷಾ ರಾವ್, ನಿಷಾ ಯಶ್ ರಾಮ್, ಆರ್ಯನ್, ಶಿವಪ್ರಸಾದ್ ಸೇರಿದಂತೆ ಹೊಸಬರೇ ಸೇರಿ ಅದ್ಬುತ ಸಿನಿಮಾ ಮಾಡಿದ್ದಾರೆ. ಅಮೆಜಾನ್ ಪ್ರೈಂ ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ನೀವೂ ಒಮ್ಮೆ ಬಿಡುವು ಮಾಡಿಕೊಂಡು ನೋಡಿ. ಉತ್ತಮ ಸಂದೇಶದ ಜೊತೆಗೆ ಒಂದೊಳ್ಳೆ ಸಿನಿಮಾ ನೋಡಿದ ಭಾವ ಮನದಲ್ಲಿ ಮೂಡದೆ ಇರದು.