ಬೆಂಗಳೂರು: ಶುಕ್ರವಾರ ತೆರೆ ಕಂಡ ಕಿನಾರೆ ಚಿತ್ರವು ಹೂಸದೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದು, ಸಮಸ್ಯೆಗೆ ಸಿಲುಕಿಕೊಂಡಿದೆ.
ಕಿನಾರೆ ಸಿನಿಮಾದಲ್ಲಿ ಐಟಂ ಹಾಡು ಇದೆ. ಯೋಗರಾಜ್ ಭಟ್ ಮತ್ತು ವಿಜಯ್ ಪ್ರಕಾಶ್ ಹಾಡಿರುವ ಹಾಡಿರುವ ನೃತ್ಯದ ದೃಶ್ಯಕ್ಕೆ ‘ಓಂ’ ಚಿತ್ರ ಇರುವ ಬಾವುಟಗಳನ್ನು ಬಳಸಲಾಗಿದೆ. ಐಟಂ ಹಾಡಿಗೆ `ಓಂ’ ಚಿತ್ರ ಇರುವ ಬಾವುಟಗಳನ್ನು ಬಳಸುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆಂದು ಆರೋಪ ಕೇಳಿಬಂದಿದೆ.
Advertisement
ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡವ ಹಾಗೆ ಇದೆ. ಹಾಗಾಗಿ ಈ ಹಾಡನ್ನು ತೆಗೆದುಹಾಕಿ ಎಂದು ಹೇಳಿಕೊಂಡು ಚಿತ್ರದ ನಿರ್ದೇಶಕ ದೇವರಾಜ್ ಪೂಜಾರಿ ಮೇಲೆ ಕೆಲ ವ್ಯಕ್ತಿಗಳು ಹಲ್ಲೆ ಮಾಡಿ ಅವರ ಕಾರಿನ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಬಗ್ಗೆ ನಿರ್ದೇಶಕ ದೇವರಾಜ್ ಪೂಜಾರಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇದರ ಬಗ್ಗೆ ನಮಗೂ ಸರಿಯಾದ ವಿವರಣೆ ಇಲ್ಲ. ಕಿನಾರೆ ಸಿನಿಮಾದ ಪ್ರಚಾರದಲ್ಲಿದ್ದಾಗ ಕಾರಿನ ಗ್ಲಾಸಿಗೆ ಕಲ್ಲು ಹೊಡೆದು, ಹಾಡಿನಲ್ಲಿ `ಓಂ’ ಚಿತ್ರ ಬಾವುಟ ಬಳಸಿದ್ದೀರಾ ಎಂದು ಹೇಳುತ್ತಿದ್ದರು. ಭಾನುವಾರ ಮಧ್ಯಾಹ್ನ ಮಾಗಡಿ ರಸ್ತೆಯಲ್ಲಿರುವ ಸುಜಾತ ಟಾಕೀಸ್ ಬಳಿ ಈ ಘಟನೆ ನಡೆದಿದೆ. ಸುಮಾರು 5-6 ಜನರು ದಾಳಿ ಮಾಡಿದ್ದಾರೆ. ಸದ್ಯಕ್ಕೆ ಸಿನಿಮಾ ರನ್ನಿಂಗ್ ನಲ್ಲಿ ಇದೆ, ಹಾಡನ್ನು ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv