ಬೆಂಗಳೂರು: ಶುಕ್ರವಾರ ಅಂದರೆ ಅದು ಸಿನಿ ಅಭಿಮಾನಿಗಳಿಗೆ ಮತ್ತು ಬಣ್ಣದ ಲೋಕದ ಮಂದಿಗೆ ಸಖತ್ ಸ್ಪೆಷಲ್ ದಿನ. ಜನ ಹೊಸ ಸಿನಿಮಾ ನೋಡೋ ಖುಷಿಯಲ್ಲಿದ್ರೆ, ಇನ್ನು ಸಿನಿಮಾ ಮಾಡಿದವರು ರೆಸ್ಪಾನ್ಸ್ ಹೇಗಿರುತ್ತೆ ಅಂತ ಕಾಯೋ ದಿನ. ಈ ಶುಭ ಶುಕ್ರವಾರ ಹೆಬ್ಬೆಟ್ಟು ರಾಮಕ್ಕ, ಧ್ವಜ ಚಿತ್ರಗಳ ಜೊತೆ ಕಾನೂರಾಯಣ ತೆರೆಕಾಣ್ತಿವೆ. ಈ 3 ಸಿನಿಮಾಗಳ ವಿವರ ಮಾಹಿತಿ ಇಲ್ಲಿದೆ.
ಹೆಬ್ಬೆಟ್ ರಾಮಕ್ಕ: ಈಗಾಗಲೇ ರಾಷ್ಟ್ರಪ್ರಶಸ್ತಿ ಪಡೆದು ಸೈ ಅನ್ನಿಸಿಕೊಂಡಿರೋ ಹೆಬ್ಬೆಟ್ಟು ರಾಮಕ್ಕ ಚಿತ್ರಮಂದಿರಕ್ಕೆ ಎಂಟ್ರಿ ಕೊಡೋಕೆ ಸಕಲ ಸಿದ್ಧತೆಗಳನ್ನು ಪೂರೈಸಿಕೊಂಡಿದೆ. ಚಿತ್ರಕ್ಕೆ ಎನ್. ಆರ್ ನಂಜುಂಡೇಗೌಡ್ರು ಆ್ಯಕ್ಷನ್ ಕಟ್ ಹೇಳಿದ್ದು ತಾರಾ, ದೇವರಾಜ್ ಜೊತೆಯಾಗಿ ಸ್ಕ್ರೀನ್‍ಶೇರ್ ಮಾಡಿದ್ದಾರೆ. ಹಳ್ಳಿಯ ಮುಗ್ಧ ಹೆಂಗಸು ರಾಜಕೀಯಕ್ಕೆ ಬಂದ್ರೆ ಏನಾಗುತ್ತೆ..? ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲಲಿದೆ ಹೆಬ್ಬೆಟ್ ರಾಮಕ್ಕ.
Advertisement
ಧ್ವಜ: ಹೆಬ್ಬೆಟ್ಟು ರಾಮಕ್ಕನ ಜೊತೆ ಧ್ವಜ ಹಿಡಿದು ಪ್ರಿಯಾಮಣಿ ಬರ್ತಿದ್ದಾರೆ. ಪ್ರಿಯಾಮಣಿಗೆ ರವಿ ಅವರು ನಾಯಕನಾಗಿ ಸಾಥ್ ಕೊಟ್ಟಿದ್ದು, ಅಶೋಕ್ ಕಶ್ಯಪ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಧ್ವಜ ಕೂಡ ರಾಜಕೀಯ ಹಿನ್ನೆಲೆಯ ಸಿನಿಮಾ ಆಗಿದ್ದು, ಮಂಜುಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ತಬಲನಾಣಿ, ಟಿ.ಎನ್ ಸೀತಾರಾಮ್, ವೀಣಾಸುಂದರ್ ಸೇರಿದಂತೆ ಹಲವರು ಈ ಚಿತ್ರಕ್ಕೆ ಬಣ್ಣಹಚ್ಚಿದ್ದಾರೆ.
Advertisement
ಕಾನೂರಾಯಣ: 20 ಲಕ್ಷ ಹೆಣ್ಣುಮಕ್ಕಳು ಒಟ್ಟಾಗಿ ಸೇರಿ ನಿರ್ಮಾಣ ಮಾಡಿರೋ ಟಿ.ಎಸ್.ನಾಗಾಭರಣ ನಿರ್ದೇಶನದ ಕಾನೂರಾಯಣ ಕೂಡ ಈ ಶುಕ್ರವಾರ ರಿಲೀಸ್ ಆಗ್ತಿದೆ. ಸೋನುಗೌಡ, ಅಶೋಕ್, ದೊಡ್ಡಣ್ಣ, ಕರಿಸುಬ್ಬು, ಸುಂದರ್ ರಾಜ್, ಗಿರಿಜಾ ಲೋಕೇಶ್ ಸೇರಿದಂತೆ ಹಲವು ಕಲಾವಿದ್ರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. 120ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಮಹಿಳಾ ಸಬಲೀಕರಣದ ಸತ್ವವನ್ನ ಹೇಳಲು ಚಿತ್ರತಂಡ ಹೊರಟಿದೆ.
Advertisement
ಮೂರು ಸಿನಿಮಾಗಳು ತಮ್ಮದೇ ಆದ ಶೈಲಿಯಲ್ಲಿ ಸಿನಿರಸಿಕರಿಗೆ ಮನರಂಜನೆಯ ಜೊತೆ ಒಂದೊಳ್ಳೆ ಮೆಸೇಜ್ ಕೊಡಲು ಸಜ್ಜಾಗಿವೆ. ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾಗಳು ಆಗಿರೋದ್ರಿಂದ ನೀವು ಫ್ಯಾಮಿಲಿ ಜೊತೆ ಚಿತ್ರಮಂದಿರಕ್ಕೆ ಹೋಗೋಕೆ ಪ್ರಾಬ್ಲಮ್ ಇಲ್ಲಾ.
Advertisement
https://youtu.be/8cDNy_ATxOA