ಆನ್ ಲೈನ್ ಬೆಟ್ಟಿಂಗ್ ‘ಫೈಟ್ ಕ್ಲಬ್’ಗೆ ಮುಹೂರ್ತ

Public TV
1 Min Read
FIGHT CLUB 1

ಬೆಂಗಳೂರು: 2ಎಂಎಂ ಸಿನಿ ಎಂಟರ್ ಟೈನ್ ಮೆಂಟ್ಸ್ ಲಾಂಛನದಲ್ಲಿ ಅರುಣ್ ಪ್ರಸಾದ್, ನವೀನ್ ರಾಜ್.ಎಂ. ನಿರ್ಮಾಣದ ‘ಫೈಟ್ ಕ್ಲಬ್’ ಚಿತ್ರಕ್ಕೆ ಹೆಬ್ಬಾಳ ಗಂಗಮ್ಮ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.

FIGHT CLUB 2

ಮುತ್ತುರಾಜ್ ಕ್ಲಾಪ್ ತೋರಿ ಸುರೇಶ್ ಕ್ಯಾಮೆರಾ ಚಾಲನೆ ಮಾಡಿದರು. ಮೊದಲ ಹಂತದ ಚಿತ್ರೀಕರಣ ಬೆಂಗಳೂರು ನಗರದ ಸುತ್ತಮುತ್ತ ನಡೆಯಲಿದೆ. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ – ಅರುಣ್, ಛಾಯಾಗ್ರಹಣ-ಸುರೇಶ್ ಸಂಕಲನ-ಮುತ್ತುರಾಜ್, ಸಂಗೀತ-ಚೇತನ್ ನೀಡಿದ್ದಾರೆ. ತಾರಾಗಣದಲ್ಲಿ – ಅರುಣ್, ಪ್ರತೀಕ್ಷಾ ಗೌಡ, ನವೀನ್ ರಾಜ್, ತೇಜಸ್, ಆನಂದ್, ಸೀನಪ್ಪ, ಕೃಷ್ಣ, ಪ್ರವೀಣ್, ಕೋಮಲ, ಅಭಿಷೇಕ್, ಮೋನಿಶ್, ಧನುಷ್, ರಾಮ್ ಮುಂತಾದವರಿದ್ದಾರೆ. ಆನ್‍ಲೈನ್ ಬೆಟ್ಟಿಂಗ್ ಮೇಲೆ ನಡೆಯುವ ಈ ಚಿತ್ರ ಮರ್ಡರ್ ಮಿಸ್ಟ್ರಿ, ಲವ್, ಎಮೋಷನ್, ಆಕ್ಷನ್ ಒಳಗೊಂಡಿರುತ್ತದೆ.

Share This Article
1 Comment

Leave a Reply

Your email address will not be published. Required fields are marked *