ಮಾಲಿವುಡ್‌ನಲ್ಲಿ ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿದೆ. ಹೇಮಾ ಕಮಿಟಿಯಂತೆ ಮಹಿಳೆಯರ ಸುರಕ್ಷತೆಗಾಗಿ ಸ್ಯಾಂಡಲ್‌ವುಡ್‌ನಲ್ಲಿಯೂ ರಚಿಸಲು ಇಂದು (ಸೆ.16) ಫಿಲ್ಮ್ ಚೇಂಬರ್ ಸಭೆ ಆಯೋಜಿಸಿದೆ. ಈ ಮೀಟಿಂಗ್‌ನಲ್ಲಿ ಭಾಗಿಯಾದ ಭಾವನಾ ರಾಮಣ್ಣ (Bhavan Ramanna) ಫೈರ್ ಸಂಸ್ಥೆ ವಿರುದ್ಧ ರಾಂಗ್ ಆಗಿದ್ದಾರೆ. ಹೇಮಾ ಸಮಿತಿ ರೀತಿ ಕನ್ನಡ ಚಿತ್ರರಂಗಕ್ಕೆ ಕಮಿಟಿ ಬೇಡ, ಆ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ:7 ತಿಂಗಳ ಹಿಂದಷ್ಟೇ ನಾನು ಬ್ರೇಕಪ್ ಮಾಡಿಕೊಂಡೆ: ಮೃಣಾಲ್ ಠಾಕೂರ್
Advertisement
ಮಹಿಳಾ ಆಯೋಗದ ಹಾಗೂ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಮಾನ ಮನಸ್ಕರು ಗ್ರೂಪ್ ಮಾಡ್ಕೊಂಡು, ಅದಕ್ಕೆ `ಫೈರ್’ ಎಂದು ಹೆಸರಿಟ್ಟು ಸಂಸ್ಥೆ ಎಂದು ಬಿಂಬಿಸಿದ್ದಾರೆ. ಕಾಸ್ಟಿಂಗ್ ಕೌಚ್‌ನ ಆ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ. ಹೆಣ್ಣು ಅಂದಾಗ ಸಮಸ್ಯೆಗಳು ಬರೋದು ಸಹಜನೇ, ಸಿನಿಮಾರಂಗ ಅಂದ್ಮೇಲೆ ಅದು ಇದ್ದೇ ಇರುತ್ತೆ. ಇನ್ನೂ 100 ಮದುವೆಯಲ್ಲಿ 10 ಮದುವೆ ಉಳಿದರೆ ಹೆಚ್ಚಾಗಿದೆ. ಬೇರೇ ರೀತಿಯ ಅಭಿಪ್ರಾಯಗಳಿಂದ ಹೀಗೆ ಆಗುತ್ತಿದೆ. ಚಿತ್ರರಂಗದಲ್ಲೂ ಹಾಗೆ ಅಲ್ಲಿ ಕೆಟ್ಟದ್ದು ಇದೆ ಅಂದರೆ ಅಲ್ಲಿ ಕೆಲಸ ಮಾಡಲು ಹೋಗಬೇಡಿ ಎಂದಿದ್ದಾರೆ.
Advertisement
Advertisement
ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ನಿರ್ಮಾಪಕರ ಸಂಘ ಇದೆ ಅಲ್ಲಿ ಸಮಸ್ಯೆ ಬಂದು ಹೇಳಬಹುದು. ಅದಕ್ಕಾಗಿ ಬೇರೆ ಸಂಘ ಮಾಡಬೇಕು ಅಂತ ಏನಿಲ್ಲ ಎಂದಿದ್ದಾರೆ. `ಫೈರ್’ ಸಂಸ್ಥೆ ಅವರ ಮಾತು ಕೇಳಬೇಡಿ, ಅವರ ಈ ಚಿತ್ರರಂಗದವರಲ್ಲ ಅಂತಾ ಹೇಳೋಕೆ ಹೊರಟಿದ್ದಾರೆ. ಈ ವೇಳೆ, ಹೇಮಾ ಸಮಿತಿ ರೀತಿ ಕನ್ನಡ ಚಿತ್ರರಂಗಕ್ಕೆ ಕಮಿಟಿ ಬೇಡ, ಆ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ ಎಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ನಡೆಯುತ್ತಿಲ್ಲ. ಇಲ್ಲಿ ಹೇಮಾ ಕಮಿಟಿಯಂತೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ ಭಾವನಾ ರಾಮಣ್ಣ.
Advertisement
ಅಂದಹಾಗೆ, ಫಿಲ್ಮ್ ಚೇಂಬರ್ ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್.ಎಮ್ ಸುರೇಶ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿö್ಮ ಚೌಧರಿ, ರಾಕ್‌ಲೈನ್ ವೆಂಕಟೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕರ್, ಸಾರಾ ಗೋವಿಂದ್, ಪ್ರಮೀಳಾ ಜೋಷಾಯ್, ಭಾವನಾ, ನೀತು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.