ರಾಯಚೂರು: ನಗರದ ಕನ್ನಡ ಭವನ ಕಾಂಪೌಂಡ್ ಹಾಗೂ ಸುತ್ತಲ ಪ್ರದೇಶ ಲವ್ವರ್ಸ್ ಳಿಗೆ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ. ಸಾರ್ವಜನಿಕ ಸ್ಥಳದಲ್ಲಿ ಯಾವ ಮುಜುಗರವಿಲ್ಲದೆ ಕಾಲೇಜು ವಿದ್ಯಾರ್ಥಿಗಳು ಲವ್ವಿಡವ್ವಿ ಶುರುಮಾಡಿದ್ದಾರೆ.
ಜನರು ಓಡಾಡುವ ಸ್ಥಳದಲ್ಲೇ ಯುವ ಪ್ರೇಮಿಗಳು ಕಿಸ್ಸಿಂಗ್, ಹಗ್ಗಿಂಗ್, ರೊಮ್ಯಾನ್ಸ್ ನಡೆಸಿದ್ದಾರೆ. ಪ್ರೇಮಿಗಳ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಬೇಸತ್ತು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಯುವಕ-ಯುವತಿಯರು ಸ್ಥಳದಿಂದ ಓಡಿ ಹೋಗುತ್ತಾರೆ. ನಿತ್ಯ ಹೊಸ ಹೊಸ ಜೋಡಿಗಳು ಇಲ್ಲಿ ಕಾಣಿಸಿಕೊಳ್ಳುತ್ತಿವೆ.
ಲರ್ವಸ್ ಗಳ ಈ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಜಾಗದಲ್ಲಿ ಇದೇ ಗೋಳು ಅಂತ ಸ್ಥಳೀಯರು ಬೇಸರ ಹೊರಹಾಕಿದ್ದಾರೆ. ಪಕ್ಕದಲ್ಲಿ ದೇವಾಲಯಗಳು, ಕಲ್ಯಾಣ ಮಂಟಪ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಇದ್ದರೂ ಯುವಕ-ಯುವತಿಯರು ಯಾವುದಕ್ಕೂ ಕೇರ್ ಮಾಡುತ್ತಿಲ್ಲ. ಹೀಗಾಗಿ ಇದಕ್ಕೆ ಕಡಿವಾಣ ಹಾಕಬೇಕು ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿದ ಪ್ರಕರಣ – ಐವರ ಮೃತದೇಹ ಪತ್ತೆ, ಕಾರ್ಯಾಚರಣೆ ಮುಕ್ತಾಯ