ಕಿರುತೆರೆಯ ಟಾಪ್ ಒನ್ ಆ್ಯಂಕರ್ ಅನುಶ್ರೀ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಅಪ್ಪು ಅಗಲಿಕೆಯ ನೋವಿನಲ್ಲಿ ಸೋತಿದ್ದ ಅನುಶ್ರೀ ಈಗ ಕೊಂಚ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಕಾಫಿನಾಡು ಚಿಕ್ಕಮಗಳೂರಿಗೆ ಹಾರಿದ್ದಾರೆ.
Advertisement
ರಿಯಾಲಿಟಿ ಶೋ ಮತ್ತು ಸಿನಿಮಾ ಪ್ರಿ ಲಾಂಚ್ ಈವೆಂಟ್‌ನಲ್ಲಿ ಅಂತಾ ಬ್ಯುಸಿಯಿರುವ ನಟಿ ಅನುಶ್ರೀ ಸದ್ಯ ಪ್ರವಾಸದಲ್ಲಿದ್ದಾರೆ. ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಚಿಕ್ಕಮಗಳೂರಿನಲ್ಲಿ ರೌಂಡ್ಸ್ ಹೊಡೆಯುತ್ತಿದ್ದಾರೆ. ಇದನ್ನೂ ಓದಿ:ಶಾರುಖ್ ಮನೆಮುಂದೆ ಜಮಾಯಿಸಿದ ಜನಸಾಗರ ನೋಡಿ ಅಚ್ಚರಿಪಟ್ಟ `ಕಾಂತಾರ’ ಹೀರೋ
Advertisement
Advertisement
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಟಿ ಹಾಕಿರುವ ಪೋಸ್ಟ್ ಸದ್ದು ಮಾಡುತ್ತಿದೆ. ಈ ಬಾರಿ ಎತ್ತರ ಬೆಟ್ಟ ಏರಿದ್ದಾರೆ. ಜೊತೆಗೆ ಅಭಿಮಾನಿಗಳಿಗೊಂದು ಪ್ರಶ್ನೆ ಕೂಡ ಕೇಳಿದ್ದಾರೆ. ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು. ನಮ್ಮ ನಗು ನಮ್ಮನ್ನು ಮೊದಲು ಗೆಲ್ಲಬೇಕು. ಈ ಜಾಗ ಯಾವುದು ಎಂದು ಹೇಳುವಿರಾ ಎಂದಿದ್ದಾರೆ. ಅದಕ್ಕೆ ಸಾಕಷ್ಟು ಅಭಿಮಾನಿಗಳು ರಿಯಾಕ್ಟ್ ಕೂಡ ಮಾಡಿದ್ದಾರೆ.
Advertisement
View this post on Instagram
ಅಂದಹಾಗೆ ಅನುಶ್ರೀ ಇದೀಗ ಹಸಿರಿನನಾಡು ಕ್ಯಾತನಮಕ್ಕಿ ಗಿರಿ ಚೆಂದದ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ.